ಆಳಂದದಲ್ಲಿ ಮಳೆಯಬ್ಬರ: ಸಿಡಿಲಿಗೆ ಶಾಲಾ ಬಾಲಕ ಬಲಿ

| Published : Apr 21 2024, 02:33 AM IST

ಆಳಂದದಲ್ಲಿ ಮಳೆಯಬ್ಬರ: ಸಿಡಿಲಿಗೆ ಶಾಲಾ ಬಾಲಕ ಬಲಿ
Share this Article
  • FB
  • TW
  • Linkdin
  • Email

ಸಾರಾಂಶ

ಲಕ್ಷ್ಮೀ ಗುಡಿ ನಿರ್ಮಾಣ ಕಾಮಗಾರಿ ನೋಡಲು ತಂದೆಯೊಂದಿಗೆ ಹೊಲಕ್ಕೆ ಹೋಗಿದ್ದ ಬಾಲಕನೋರ್ವ ಸಿಡಿಲಿಗೆ ಬಲಿಯಾದ ದಾರುಣ ಘಟನೆ ಶನಿವಾರ ಆಳಂದದಲ್ಲಿ ನಡೆದಿದೆ. ಈ ದುರಂತದಲ್ಲಿ ಅದೇ ಸಿಡಿಲಿಗೆ ಬಾಲಕನ ತಂದೆ ಗಾಯಗೊಂಡ ಘಟನೆ ತಾಲೂಕಿನ ನರೋಣಾ ಗ್ರಾಮದಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಆಳಂದ

ಲಕ್ಷ್ಮೀ ಗುಡಿ ನಿರ್ಮಾಣ ಕಾಮಗಾರಿ ನೋಡಲು ತಂದೆಯೊಂದಿಗೆ ಹೊಲಕ್ಕೆ ಹೋಗಿದ್ದ ಬಾಲಕನೋರ್ವ ಸಿಡಿಲಿಗೆ ಬಲಿಯಾದ ದಾರುಣ ಘಟನೆ ಶನಿವಾರ ಆಳಂದದಲ್ಲಿ ನಡೆದಿದೆ. ಈ ದುರಂತದಲ್ಲಿ ಅದೇ ಸಿಡಿಲಿಗೆ ಬಾಲಕನ ತಂದೆ ಗಾಯಗೊಂಡ ಘಟನೆ ತಾಲೂಕಿನ ನರೋಣಾ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಸರ್ಕಾರಿ ಶಾಲೆಯ 3ನೇ ತರಗತಿಯಲ್ಲಿ ಓದುತ್ತಿ ಮಹೇಶ ನಾಗರಾಜ ಕಸನೂರ (9) ಬಾಲಕನೇ ಸಿಡಿಲಿಗೆ ಮೃತಪಟ್ಟಿದ್ದು, ಆತನ ತಂದೆ ನಾಗರಾಜಗೆ ತಲೆಗೆ ಕೊಂಚ ಸಿಡಿಲು ಸ್ಪರ್ಶಗೊಂಡ ಹಿನ್ನೆಲೆಯಲ್ಲಿ ಗಾಯಗೊಂಡಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ನರೋಣಾ ಗ್ರಾಮದ ಹೊಲರವಲಯದ ಒಂದುವರೆ ಕಿ.ಮೀ. ಅಂತರದ ತಮ್ಮ ಹೊಲ್ಲದಲ್ಲಿ ಲಕ್ಷ್ಮೀ ಗುಡಿಕಟ್ಟುತ್ತಿದ್ದನ್ನು ನೋಡಲು ಹೋಗಿದ್ದ ವೇಳೆ ಮಧ್ಯಾಹ್ನ ಹಠಾತಾಗಿ ಆವರಿಸಿದ ಗುಡುಗು ಸಹಿತ ಮಳೆಯ ಆರ್ಭಟ ಹಾಗೂ ಸಿಡಿಲು ಬಡಿದ್ದು ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಸುದ್ದಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ತಹಸೀಲ್ದಾರ ಪ್ರಕಾಶ ಹೊಸಮನಿ, ನರೋಣಾ ನಾಡ ತಹಸೀಲ್ದಾರ ಸೈಯದ್ ಫರಿದುಲ್ಲಾ, ಆರ್‍ಐ ಮಲ್ಲಿನಾಥ ಕಿಣಗಿ, ಗ್ರಾಮ ಆಡಳಿತಾಧಿಕಾರಿ ಮಹೇಶ ಕೊಳೆಕರ್, ನರೋಣಾ ಸರ್ಕಾರಿ ಆಸ್ಪತ್ರೆ ಡಾ. ಶಿವನಾಗಪ್ಪ ಪಾಟೀಲ ಭೇಟಿ ನೀಡಿ ಪರಿಶೀಲಿಸಿದರು. ಅಲ್ಲದೆ ಸಂತ್ರಸ್ತ ಕುಟುಂಬಕ್ಕೆ ಸಾಂತ್ವಾನ ಹೇಳಿದರು.

ಸಿಡಿಲಿಗೆ ಎತ್ತು, ಎಮ್ಮೆ ಬಲಿ: ಆಳಂದ ಪೊಲೀಸ್ ಠಾಣೆ ವ್ಯಾಪ್ತಿಯ ಹೋಬಳಿ ಕೇಂದ್ರ ಖಜೂರಿ ವಲಯದ ಹೋದಲೂರ ಗ್ರಾಮದಲ್ಲಿ ಸಿಡಿಲು ಬಡಿದು ರಾಜಾರಾಮ ಗಣಪತಿ ಬುಗ್ಗೆ ಅವರಿಗೆ ಸೇರಿದ ಕಿಮ್ಮತ್ತಿನ ಎತ್ತು ಬಲಿಯಾಗಿದೆ. ಅಲ್ಲದೆ ರುದ್ರವಾಡಿ ಗ್ರಾಮದ ಖ್ಯಾಮಲಿಂಗಪ್ಪ ಬಸವಣ್ಣಪ್ಪ ಚಿಚಕೋಟಿ ರೈತನ ಎಮ್ಮೆಗೆ ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟಿದೆ. ಘಟನಾ ಸ್ಥಳಕ್ಕೆ ಕಂದಾಯ ನಿರೀಕ್ಷಕ ಅಲ್ಲಾವೋದ್ದೀನ್ ಗ್ರಾಮ ಅಧಿಕಾರಿಗಳು ಹಾಗೂ ಪಶು ವೈದ್ಯರು ಭೇಟಿ ನೀಡಿ ಪಂಚನಾಮೆ ಕೈಗೊಂಡಿದ್ದಾರೆ.

ಹಳ್ಳಗಳಲ್ಲಿ ನೀರು: ಶನಿವಾರ ಮಧ್ಯಾಹ್ನ ಬಿರುಗಾಳಿ ಸಹಿತ ಹಲವಡೆ ಧಾರಾಕಾರ ಮಳೆ, ಸಿಡಿಲ್ಮಿಂಚಿನ ಆರ್ಭಟದ ಗರ್ಜನೆ ಜನ ಸಾಮಾನ್ಯರನ್ನು ಕೆಲಕಾಲ ಬೆಚ್ಚಿಬೀಳಿಸುವಂತಾಗಿತ್ತು. ಕಳೆದೆರಡು ದಿನಗಳಿಂದ ಆಗಾಗ ಮೋಡ ಮುಸುಕಿದ ವಾತಾವರಣ ಹಾಗೂ ಸುರಿದ ಮಳೆಯಿಂದ ತಾಪಮಾನ ಕುಸಿದು ತಂಪಾಗಿಸಿದೆ. ಮಳೆ ಬೀರುಗಾಳಿಗೆ ತೋಟಗಾರಿಕೆ ಬಾಳೆ, ಪಪಾಯಿ ನುಗ್ಗೆ, ಮಾವು ನಷ್ಟವಾಗಿದೆ.

ಹಲವಡೆ ಮಳೆಯ ರಬಸಕ್ಕ ಸರಸಂಬಾ, ಚಿತಲಿ ಡ್ಯೋಗಾಳ. ಸಾಲೇಗಾಂವ ಮೋದಿನಾಲಾ, ಆಳಂದ ಸೇರಿ ಹಲವಡೆ ನಾಲಾ ಹಳ್ಳಗಳಲ್ಲಿ ನೀರು ಹರಿದಾಡಿದೆ. ಹೊಲದ ಬದುವಿನ ಬದಿಯಲ್ಲಿ ನಿಂತುಕೊಂಡಿವೆ. ಸಂತಸ ತರಿಸಿದೆ. ಪಟ್ಟಣದ ಹಳೆಯ ತಹಸೀಲ್ದಾರ ಕಚೇರಿ ಸಂಪರ್ಕದ ರಸ್ತೆಗೆ ಮಳೆ ನೀರು ಹರಿದು ನಿಂತ ದ್ವಿಚಕ್ರ ವಾಹನಗಳ ಕೊಚ್ಚಿ ಮುಂದೆ ಹೋಗಿ ಹಾನಿಗೊಂಡಿವೆ.