ಸೋಂಪುರ ಹೋಬಳಿಯಾಂದ್ಯಾತ ಮಳೆರಾಯನ ಆರ್ಭಟ

| Published : Apr 28 2025, 11:47 PM IST

ಸಾರಾಂಶ

ಸೋಮವಾರ ಮಧ್ಯಾಹ್ನವೇ ಮಳೆ ಆರಂಭವಾಗಿದ್ದು, ಜಾಸ್ತಿಯಾದ ಪರಿಣಾಮ ದಾಬಸ್‍ಪೇಟೆ ಸಂತೆ ಮೈದಾನ ಸೇರಿದಂತೆ ದೊಡ್ಡಬಳ್ಳಾಪುರ ರಸ್ತೆಯಲ್ಲಿ ಇಟ್ಟುಕೊಂಡಿದ್ದ ಬೀದಿ ಬದಿ ವ್ಯಾಪಾರಿಗಳು ತರಕಾರಿ, ಹೂವು, ಹಣ್ಣುಗಳನ್ನು ರಕ್ಷಿಸಿಕೊಳ್ಳಲು ಪರದಾಡ ನಡೆಸಿದರು.

ದಾಬಸ್‍ಪೇಟೆ: ಸೋಂಪುರ ಹೋಬಳಿಯಲ್ಲಿ ಭಾನುವಾರ ರಾತ್ರಿ ಹಾಗೂ ಸೋಮವಾರ ಸಂಜೆ ಬಿದ್ದ ಮಳೆಗೆ ಹೋಬಳಿಯ ಬಹುತೇಕ ಕಡೆ ಉತ್ತಮ ಮಳೆಯಾಗಿದ್ದು ಒಂದು ಕಡೆ ಕಟ್ಟೆಗಳಲ್ಲಿ ಅಲ್ಪಸ್ವಲ್ಪ ನೀರು ಶೇಖರಣೆಯಾಗಿ ರೈತರ ಮುಖದಲ್ಲಿ ಸಂತಸ ಮೂಡಿಸಿದರೆ, ಮತ್ತೊಂದು ಕಡೆ ಮಳೆಯಿಂದಾಗಿ ಅನಾಹುತಗಳು ಸಂಭವಿಸಿ ಜನತೆಯನ್ನು ಭಯಗೊಳಿಸಿದೆ.

ಕೆರೆಕಟ್ಟೆಗಳಿಗೆ ಅಲ್ಪ ನೀರು : ಬೇಸಿಗೆಯ ಬೇಗೆಗೆ ಬೆಂದಿದ್ದ ರೈತರಿಗೆ ಮಳೆರಾಯನು ತಂಪನ್ನು ನೀಡಿದ್ದು, ಎರಡು ದಿನಗಳ ಕಾಲ ಬಿದ್ದ ಮಳೆಗೆ ಕೆರೆ ಕಟ್ಟೆಗಳಲ್ಲಿ ಅಲ್ಪ ನೀರು ಸಂಗ್ರಹವಾಗಿದ್ದು, ಜಾನುವಾರುಗಳಿಗೆ ಮೇವು ಚಿಗುರಲು ಆರಂಭವಾಗಿರುವುದು ರೈತರಲ್ಲಿ ಸಂತಸವನ್ನುಂಟು ಮಾಡಿದೆ.ರಸ್ತೆಯಲ್ಲೆಲ್ಲಾ ನೀರು : ಇನ್ನೂ ಮಳೆ ಹೆಚ್ಚಾದ ಪರಿಣಾಮ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಪಟ್ಟಣದ ಶಿವಗಂಗೆ ರಸ್ತೆಯ ಸರ್ವಿಸ್ ರಸ್ತೆಯಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದ ಪರಿಣಾಮ ರಸ್ತೆಯಲ್ಲೇಲ್ಲಾ ನೀರು ನಿಂತಿದ್ದು ವಾಹನ ಸವಾರರು ಚಲಿಸಲಾಗದೆ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.ವ್ಯಾಪಾರಸ್ಥರ ಪರದಾಟ : ಸೋಮವಾರ ಮಧ್ಯಾಹ್ನವೇ ಮಳೆ ಆರಂಭವಾಗಿದ್ದು, ಜಾಸ್ತಿಯಾದ ಪರಿಣಾಮ ದಾಬಸ್‍ಪೇಟೆ ಸಂತೆ ಮೈದಾನ ಸೇರಿದಂತೆ ದೊಡ್ಡಬಳ್ಳಾಪುರ ರಸ್ತೆಯಲ್ಲಿ ಇಟ್ಟುಕೊಂಡಿದ್ದ ಬೀದಿ ಬದಿ ವ್ಯಾಪಾರಿಗಳು ತರಕಾರಿ, ಹೂವು, ಹಣ್ಣುಗಳನ್ನು ರಕ್ಷಿಸಿಕೊಳ್ಳಲು ಪರದಾಡ ನಡೆಸಿದರು.ವಿದ್ಯುತ್ ಸ್ಥಗಿತ : ಕೆಲವೆಡೆ ಮರಗಳು ವಿದ್ಯುತ್ ತಂತಿಗಳ ಬಿದ್ದ ಪರಿಣಾಮ ವಿದ್ಯುತ್ ತಂತಿಗಳು ಕಿತ್ತುಹೋಗಿದ್ದು ಸ್ಥಳಕ್ಕೆ ಬೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ ಸರಿಪಡಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಕೆಲಕಾಲ ವಿದ್ಯುತ್ ಸ್ಥಗಿತಗೊಂಡಿತ್ತು. ಪೋಟೋ 10 : ದಾಬಸ್‍ಪೇಟೆ ಪಟ್ಟಣದ ಶಿವಗಂಗೆ ವೃತ್ತದಲ್ಲಿ ರಸ್ತೆಯಲ್ಲಿ ನೀರು ನಿಂತಿರುವುದು