ಶೃಂಗೇರಿ ತಾಲೂಕಿನಲ್ಲಿ ಅಬ್ಬರಿಸಿದ ಮಳೆ: ಧರೆಗುರುಳಿದ ಮರಗಳು

| Published : May 15 2024, 01:32 AM IST

ಶೃಂಗೇರಿ ತಾಲೂಕಿನಲ್ಲಿ ಅಬ್ಬರಿಸಿದ ಮಳೆ: ಧರೆಗುರುಳಿದ ಮರಗಳು
Share this Article
  • FB
  • TW
  • Linkdin
  • Email

ಸಾರಾಂಶ

ಶೃಂಗೇರಿ, ತಾಲೂಕಿನಾದ್ಯಂತ ಮಂಗಳವಾರ ಮಧ್ಯಾಹ್ನ ಗುಡುಗು, ಸಿಡಿಲು ಸಹಿತ ಭಾರಿ ಗಾಳಿ ಮಳೆ ಅಬ್ಬರಿಸಿತು. ಮಧ್ಯಾಹ್ನದಿಂದ ಆರಂಭಗೊಂಡ ಗುಡುಗು ಸಿಡಿಲಿನ ಆರ್ಭಟ, ಗಾಳಿಯ ಅಬ್ಬರಕ್ಕೆ ವಿವಿಧೆಡೆ ಮರಗಳು ಧರೆಗುರುಳಿದವು.

ಪೋಲೀಸ್‌ ಠಾಣೆ ಎದುರು ನೆಲಕ್ಕುರುಳಿದ ತೆಂಗಿನ ಮರ ।ತಪ್ಪಿದ ಅನಾಹುತ

ಕನ್ನಡಪ್ರಭ ವಾರ್ತೆ, ಶೃಂಗೇರಿ

ತಾಲೂಕಿನಾದ್ಯಂತ ಮಂಗಳವಾರ ಮಧ್ಯಾಹ್ನ ಗುಡುಗು, ಸಿಡಿಲು ಸಹಿತ ಭಾರಿ ಗಾಳಿ ಮಳೆ ಅಬ್ಬರಿಸಿತು. ಮಧ್ಯಾಹ್ನದಿಂದ ಆರಂಭಗೊಂಡ ಗುಡುಗು ಸಿಡಿಲಿನ ಆರ್ಭಟ, ಗಾಳಿಯ ಅಬ್ಬರಕ್ಕೆ ವಿವಿಧೆಡೆ ಮರಗಳು ಧರೆಗುರುಳಿದವು.

ಪಟ್ಟಣದ ಪೊಲೀಸ್‌ ಠಾಣೆ ಮುಂಬಾಗದಲ್ಲಿದ್ದ ಬೃಹತ್‌ ತೆಂಗಿನ ಮರ ಉರುಳಿ ಬಿದ್ದ ಪರಿಣಾಮ ಕಾಂಪೌಂಡ್‌ ಜಖಂ ಗೊಂಡಿದ್ದಲ್ಲದೇ ಜನನಿಬಿಡ ಪ್ರದೇಶವಾಗಿದ್ದ ಇಲ್ಲಿ ಹೆಚ್ಚು ಕಮ್ಮಿಯಾಗಿದ್ದರೆ ಭಾರೀ ಅನಾಹುತವೇ ಆಗುತ್ತಿತ್ತು. ಆದರೆ ಸಧ್ಯ ಹೆಚ್ಚಿನ ಅನಾಹುತ ತಪ್ಪಿದೆ. ಸಮೀಪದಲ್ಲಿಯೇ ಇದ್ದ ಅರಳಿ ಮರದ ಟೊಂಗೆಗಳು ಗಾಳಿಗೆ ತುಂಡಾಗಿ ಬಿದ್ದು ಕೆಲ ಮನೆಗಳ ಮೇಲೆ ಹಾನಿಯುಂಟಾಗಿದೆ.

ಶೃಂಗೇರಿ ಪಟ್ಟಣ, ಮೆಣಸೆ, ನೆಮ್ಮಾರು, ಕೆರೆಕಟ್ಟೆ, ಬೇಗಾರು ಸುತ್ತಮುತ್ತಲ ಪ್ರದೇಶಗಳಲ್ಲಿ ಗುಡುಗು ಸಿಡಿಲಿನ ಆರ್ಭಟ ದೊಂದಿಗೆ ಭಾರೀ ಮಳೆ ಸುರಿಯಿತು. ಕೆಲವೆಡೆ ವಿದ್ಯುತ್‌ ಲೈನ್ಸ್ತೆ, ರಸ್ತೆ ಮೇಲೆ ಮರಗಳು ಉರುಳಿ ಬಿದ್ದು ವಿದ್ಯುತ್‌ ಸಂಪರ್ಕ ಕಡಿತ ಗೊಂಡಿದ್ದು ,ರಸ್ತೆ ಸಂಚಾರವೂ ಅಡ್ಡಿಉಂಟಾಗಿತ್ತು.

ಕಳೆದ ನಾಲ್ಕೈದು ದಿನಗಳಿಂದ ಉತ್ತಮ ಮಳೆಯಾಗುತ್ತಿರುವುದರಿಂದ ತಾಲೂಕಿನಲ್ಲಿ ತಂಪು ವಾತಾವರಣ ಉಂಟಾಗಿದೆ. ಬಿಸಿಲಲ್ಲಿ ಒಣಗುತ್ತಿದ್ದ ಅಡಕೆ, ಕಾಫಿ ತೋಟಗಳಿಗೆ ಜೀವಕಳೆ ಬಂದಿದೆ.

14 ಶ್ರೀ ಚಿತ್ರ 1-ಶೃಂಗೇರಿ ಪೋಲೀಸ್ ಠಾಣೆ ಮುಂಬಾಗದಲ್ಲಿ ಬೃಹತ್‌ ತೆಂಗಿನ ಮರ ಗಾಳಿಗೆ ಉರುಳಿ ಬಿದ್ದಿರುವುದು.

14 ಶ್ರೀ ಚಿತ್ರ 2-ಗಾಳಿ ಮಳೆಗೆ ಪಟ್ಟಣದಲ್ಲಿ ಬೃಹತ್‌ ಅರಳಿ ಮರದ ಕೊಂಬೆಗಳು ಮುರಿದು ಏಬಿದ್ದರುವುದು.