ಸಾರಾಂಶ
ಬಾಳೆಹೊನ್ನೂರು: ಪಟ್ಟಣ ಸೇರಿದಂತೆ ಹೋಬಳಿಯ ವಿವಿಧೆಡೆ ಪುಷ್ಯ ಮಳೆ ಅಬ್ಬರ ಕಳೆದ ಎರಡು ದಿನಗಳಿಂದ ಜೋರಾಗಿದ್ದು, ಶನಿವಾರವೂ ಸಹ ಗಾಳಿ ಸಹಿತ ಧಾರಾಕಾರ ಮಳೆಯಾಗಿದೆ.ಕಳೆದ ಎರಡು ದಿನಗಳಿಂದ ಭಾರೀ ಗಾಳಿ ಸಹಿತ ಮಳೆ ಸುರಿಯುತ್ತಿದ್ದು, ಬಿಡುವು ನೀಡದೆ ಮಳೆ ಬರುತ್ತಿರುವುದರಿಂದ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಭಾರೀ ಪ್ರಮಾಣದ ಗಾಳಿಗೆ ಹಲವು ಕಡೆಗಳಲ್ಲಿ ಮರಗಳು, ಮರದ ಕೊಂಬೆಗಳು ಬಿದ್ದಿವೆ.ಪಟ್ಟಣದ ಕಳಸ ರಸ್ತೆಯ ಹೊಳೆಬಾಗಿಲು ಬಳಿ ಶುಕ್ರವಾರ ಸಂಜೆ ವೇಳೆಗೆ ಮುಖ್ಯರಸ್ತೆಗೆ ಮರವೊಂದು ಬಿದ್ದಿದ್ದು, ಸ್ಥಳೀಯರು ತೆರವುಗೊಳಿಸಿದರು.ಖಾಂಡ್ಯ ಹೋಬಳಿ ಕಡಬಗೆರೆಯ ಮೊಣಕ್ಕ ಎಂಬುವರ ಮನೆ ಮೇಲೆ ಮರ ಬಿದ್ದು, ಮನೆ ಹಿಂಭಾಗದಲ್ಲಿದ್ದ ಶೌಚಾಲಯ ಸಂಪೂರ್ಣವಾಗಿ ನೆಲಸಮವಾಗಿದೆ. ಆದರೆ ಮನೆಯಲ್ಲಿದ್ದವರಿಗೆ ಯಾವುದೇ ಪ್ರಾಣಾಪಾಯವಾಗದೆ ಪಾರಾಗಿದ್ದಾರೆ. ಮನೆ ಮೇಲೆ ಬಿದ್ದ ಮರವನ್ನು ಖಾಂಡ್ಯ ಶೌರ್ಯ ವಿಪತ್ತು ಘಟಕದ ಸದಸ್ಯರು ತೆರವುಗೊಳಿಸಿದರು.ನಿರಂತರ ಮಳೆ ಪರಿಣಾಮ ಭದ್ರಾ ನದಿ ನೀರು ಅಪಾಯಮಟ್ಟ ಮೀರಿ ಹರಿಯುತ್ತಿದ್ದು, ಭದ್ರಾನದಿಯ ಪಾತ್ರದ ತೋಟ, ಗದ್ದೆಗಳಿಗೆ ಶನಿವಾರ ನೀರು ನುಗ್ಗಿತ್ತು. ಪಟ್ಟಣದ ಮೀನು ಮಾರ್ಕೆಟ್ ಬಳಿ ಡೋಬಿಹಳ್ಳದ ದಡದಲ್ಲಿರುವ ಸಂತೆ ಮಾರುಕಟ್ಟೆ ಸಂಕೀರ್ಣಕ್ಕೂ ಸಹ ಭದ್ರಾನದಿ ನೀರು ಶನಿವಾರ ಮುಂಜಾನೆ ವೇಳೆಗೆ ನುಗ್ಗಿದ್ದು, ಬೆಳಗ್ಗಿನ ಬಳಿಕ ನೀರು ಇಳಿಕೆಯಾಗಿತ್ತು.ಹೆಚ್ಚಿನ ಪ್ರಮಾಣದ ಗಾಳಿ ಪರಿಣಾಮ ಹಲವು ಕಡೆಗಳಲ್ಲಿ ವಿದ್ಯುತ್ ಲೈನ್ ಮೇಲೆ ಮರ ಬಿದ್ದು ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯವಾಗಿದೆ.೨೬ಬಿಹೆಚ್‌ಆರ್ ೧:
ಬಾಳೆಹೊನ್ನೂರು ಸಮೀಪದ ಕಡಬಗೆರೆ ಗ್ರಾಮದ ಮೊಣಕ್ಕ ಎಂಬುವರ ಮನೆ ಮೇಲೆ ಮರ ಬಿದ್ದು ಹಾನಿಯಾಗಿರುವುದು.