ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು: ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸೋಮವಾರ ಮಧ್ಯಾಹ್ನದ ಬಳಿಕ ಗುಡುಗು ಸಹಿತ ಧಾರಾಕಾರ ಮಳೆಯಾಗಿದೆ.
ಸೋಮವಾರ ಮಧ್ಯಾಹ್ನ 3.45ರ ಬಳಿಕ ಗುಡುಗು ಸಹಿತ ಆರಂಭಗೊಂಡ ಮಳೆ ಒಂದು ಗಂಟೆಗೂ ಹೆಚ್ಚು ಕಾಲ ಸುರಿದಿದೆ. ಭಾನುವಾರವೂ ಸಹ ಒಂದು ಗಂಟೆಗೂ ಹೆಚ್ಚು ಕಾಲ ಮಳೆಯಾಗಿದ್ದು, ಬಿಸಿಲಿನ ಬೇಗೆಯಿಂದ ಬಳಲಿದ್ದ ಜನರಿಗೆ ಮಳೆ ಸಾಕಷ್ಟು ತಂಪು ನೀಡಿದೆ.ಮಾನ್ಸೂನ್ ಆರಂಭದ ನಿರೀಕ್ಷೆಯಲ್ಲಿದ್ದ ಜನರಿಗೆ ಚಂಡಮಾರುತ ಪ್ರಭಾವದ ಮಳೆ ಕೃಷಿ ಕೆಲಸಗಳಿಗೆ ಸಿದ್ಧತೆ ಮಾಡಿಕೊಳ್ಳಲು ಪೂರಕವೇ ಆಗಿದ್ದು, ಮುಂಗಾರಿನ ಕೆಲಸ ಕಾರ್ಯ ಚುರುಕುಗೊಳಿಸಿದ್ದಾರೆ.
ಭಾನುವಾರ ಬಾಳೆಹೊನ್ನೂರು ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ 1ರಿಂದ 2 ಇಂಚಿನಷ್ಟು ಮಳೆ ಸುರಿದಿದ್ದು, ಸೋಮವಾರವೂ ಹಲವು ಗ್ರಾಮಗಳಲ್ಲಿ ಇದೇ ಪ್ರಮಾಣದಲ್ಲಿ ಮಳೆಯಾಗಿದೆ. ಬಾಳೆಹೊನ್ನೂರು ಪಟ್ಟಣ ಸೇರಿದಂತೆ ರಂಭಾಪುರಿ ಪೀಠ, ಮಸೀದಿ ಕೆರೆ, ಮೆಣಸುಕೊಡಿಗೆ, ವಾಟುಕೊಡಿಗೆ, ಸೀಕೆ, ಮುದುಗುಣಿ, ಅರಳೀಕೊಪ್ಪ, ಬನ್ನೂರು, ಮಾಗುಂಡಿ, ಹೊಳೆಬಾಗಿಲು, ಸೀಗೋಡು, ಸಿಆರ್‌ಎಸ್, ಹೇರೂರು, ಹೂವಿನಹಕ್ಲು, ಮೇಲ್ಪಾಲ್, ಸಂಗಮೇಶ್ವರಪೇಟೆ, ಕಡಬಗೆರೆ, ಹಲಸೂರು, ಮಹ ಲ್ಗೋಡು ಮುಂತಾದ ಗ್ರಾಮಗಳಲ್ಲಿ ಧಾರಾಕಾರವಾಗಿ ಮಳೆ ಸುರಿದಿದೆ.-- ಬಾಕ್ಸ್ಸ--
ಶೃಂಗೇರಿ ಗುಡುಗು ಸಿಡಿಲು ಸಹಿತ ಮಳೆ ಆರ್ಭಟಶೃಂಗೇರಿ: ತಾಲೂಕಿನಾದ್ಯಂತ ಸೋಮವಾರ ಸಂಜೆ ಗುಡುಗು ಸಿಡಿಲಿನ ಆರ್ಭಟದೊಂದಿಗೆ ಭಾರೀ ಮಳೆ ಸುರಿಯಿತು. ಮದ್ಯಾಹ್ನದಿಂದ ಕವಿದಿದ್ದ ದಟ್ಟ ಮೋಡ ಸಂಜೆ ಮಳೆ ಗುಡುಗು ಸಿಡಿಲಿ ಮಳೆಸುರಿಸಿತು. ಶೃಂಗೇರಿ ಪಟ್ಟಣದ ಸೇರಿದಂತೆ ಗ್ರಾಮೀಣ ಪ್ರದೇಶದೆಲ್ಲೆಡೆ ಭಾರೀ ಮಳೆ ಯಾಗಿದೆ. ಶೃಂಗೇರಿ ಪಟ್ಟಣದಲ್ಲಿ ಸುಮಾರು 2 ಗಂಟೆಗಳ ಕಾಲ ಮಳೆ ಅಬ್ಬರಿಸಿತು. ಸಂಜೆ ವರೆಗೂ ಸಾದಾರಣ ಮಳೆ ಮುಂದುವರಿದಿತ್ತು. ಕೆರೆಕಟ್ಟೆ, ನೆಮ್ಮಾರು, ಕಿಗ್ಗಾ, ಮೆಣಸೆ ಬೇಗಾರು ಸುತ್ತಮುತ್ತಲ ಪ್ರದೇಶ ಗಳಲ್ಲಿ ಗುಡುಗು ಸಿಡಿಲಿನ ಆರ್ಭಟ, ಮಳೆಯ ಅಬ್ಬರ ಜೋರಾಗಿತ್ತು. ಕೆಲ ದಿನಗಳಿಂದ ಮೋಡ, ತುಂತುರು ಮಳೆ ವಾತಾವರಣ ವಿದ್ದು ಸೋಮವಾರ ಮಳೆ ಆರ್ಭಟಿಸಿತು.ಸಂಜೆವರೆಗೂ ಮುಂದುವರಿದಿತ್ತು.೦೧ಬಿಹೆಚ್‌ಆರ್ ೪: ಬಾಳೆಹೊನ್ನೂರಿನ ರಂಭಾಪುರಿ ಪೀಠದಲ್ಲಿ ಸೋಮವಾರ ಮಳೆ ಸುರಿದಾಗ ಕಂಡುಬಂದ ದೃಶ್ಯ.