ಸಾರಾಂಶ
ನಾಪೋಕ್ಲು ಹೋಬಳಿ ವ್ಯಾಪ್ತಿಯ ಕೊಳಕೇರಿ ಗ್ರಾಮದ ಕಾಂಡಂಡ ಚರ್ಮನ ಎಂಬವರ ಮನೆಯ ಆವರಣ ಗೋಡೆ ಮಳೆಯಿಂದಾಗಿ ಕುಸಿದು ತೀವ್ರ ನಷ್ಟ ಸಂಭವಿಸಿದೆ. ಈ ಭಾಗದಲ್ಲಿ ಮಂಗಳವಾರ ರಾತ್ರಿ ಭಾರಿ ಮಳೆಯಾಗಿದೆ.
ಕನ್ನಡಪ್ರಭ ವಾರ್ತೆ ನಾಪೋಕ್ಲು
ನಾಪೋಕ್ಲು ಹೋಬಳಿ ವ್ಯಾಪ್ತಿಯ ಕೊಳಕೇರಿ ಗ್ರಾಮದ ಕಾಂಡಂಡ ಚರ್ಮನ ಎಂಬವರ ಮನೆಯ ಆವರಣ ಗೋಡೆ ಮಳೆಯಿಂದಾಗಿ ಕುಸಿದು ತೀವ್ರ ನಷ್ಟ ಸಂಭವಿಸಿದೆ. ಈ ಭಾಗದಲ್ಲಿ ಮಂಗಳವಾರ ರಾತ್ರಿ ಭಾರಿ ಮಳೆಯಾಗಿದೆ.ಚರ್ಮನ ಕೆಲವು ಸಮಯಗಳ ಹಿಂದೆ ಮನೆಗೆ ಆವರಣ ಗೋಡೆ ನಿರ್ಮಿಸಿದ್ದು ಮಂಗಳವಾರ ರಾತ್ರಿ ಸಂಪೂರ್ಣ ಕುಸಿದು ಬಿದ್ದಿದ್ದು ಬಾರಿ ನಷ್ಟ ಸಂಭವಿಸಿದೆ.
ಸ್ವಲ್ಪ ಆವರಣಗೋಡೆಯನ್ನು ವಿದ್ಯುತ್ ಕಂಬ ತಡೆದು ನಿಂತಿದ್ದು ನಾಪೋಕ್ಲು - ಕಕ್ಕಬೆ ಮುಖ್ಯ ರಸ್ತೆ ಗೆ ಬೀಳುವ ಮಣ್ಣನ್ನು ತಡೆಹಿಡಿದ ಕಾರಣ ಇನ್ನಷ್ಟು ಅನಾಹುತ ತಪ್ಪಿದೆ.ನಾಪೋಕ್ಲು ವ್ಯಾಪ್ತಿಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು ವಾತಾವರಣ ತಂಪಾಗಿ ಬಿಸಿಲಿನ ಬೇಗೆಯಿಂದ ಪರಿತಪಿಸುತ್ತಿದ್ದ ಜನರು ಸಂತಸ ವ್ಯಕ್ತಪಡಿಸಿದ್ದಾರೆ.
ಘಟನಾ ಸ್ಥಳಕ್ಕೆ ನಾಪೋಕ್ಲು ಕಂದಾಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ಮಾಡಿದರು.ಕೊಡಗು ಜಿಲ್ಲೆಯ ವಿವಿಧ ಕಡೆಗಳಲ್ಲಿ ಬುಧವಾರ ಸಾಧಾರಣ ಮಳೆಯಾಯಿತು. ಮೋಡ ಕವಿದ ವಾತಾವರಣದೊಂದಿಗೆ ಸಣ್ಣ ಪ್ರಮಾಣದಲ್ಲಿ ಮಳೆ ಸುರಿಯಿತು.ಜಿಲ್ಲೆಯಲ್ಲಿ ಬುಧವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ ಮಳೆ 17.60 ಮಿ.ಮೀ. ಮಳೆಯಾಗಿದೆ.ಮಡಿಕೇರಿ ತಾಲೂಕಿನಲ್ಲಿ 28.13 ಮಿ.ಮೀ., ವಿರಾಜಪೇಟೆ ತಾಲೂಕಿನಲ್ಲಿ 8.20 ಮಿ.ಮೀ.,
ಪೊನ್ನಂಪೇಟೆ ತಾಲೂಕಿನಲ್ಲಿ 20.70 ಮಿ.ಮೀ., ಸೋಮವಾರಪೇಟೆ ತಾಲೂಕಿನಲ್ಲಿ 9.75 ಮಿ.ಮೀ., ಕುಶಾಲನಗರ ತಾಲೂಕಿನಲ್ಲಿ 21.20 ಮಿ.ಮೀ. ಮಳೆಯಾಗಿದೆ. ಹೋಬಳಿವಾರು ಮಳೆ:ಮಡಿಕೇರಿ ಕಸಬಾ 24.80, ನಾಪೋಕ್ಲು 32.80, ಸಂಪಾಜೆ 23.50, ಭಾಗಮಂಡಲ 31.40, ವಿರಾಜಪೇಟೆ ಕಸಬಾ 13.40, ಅಮ್ಮತ್ತಿ 3, ಹುದಿಕೇರಿ 18, ಶ್ರೀಮಂಗಲ 26.80, ಪೊನ್ನಂಪೇಟೆ 8, ಬಾಳೆಲೆ 30, ಸೋಮವಾರಪೇಟೆ ಕಸಬಾ 11, ಶನಿವಾರಸಂತೆ 5, ಶಾಂತಳ್ಳಿ 9, ಕೊಡ್ಲಿಪೇಟೆ 14, ಕುಶಾಲನಗರ 17.20, ಸುಂಟಿಕೊಪ್ಪ 25.20 ಮಿ.ಮೀ.ಮಳೆಯಾಗಿದೆ.ಹಾರಂಗಿ ಮಟ್ಟ:
ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು. ಇಂದಿನ ನೀರಿನ ಮಟ್ಟ 2823.43 ಅಡಿಗಳು. ಹಾರಂಗಿಯಲ್ಲಿ ಬಿದ್ದ ಮಳೆ 36.60 ಮಿ.ಮೀ. ಒಳಹರಿವು 460 ಕ್ಯುಸೆಕ್. ಹೊರ ಹರಿವು ನದಿಗೆ 200 ಕ್ಯುಸೆಕ್.