ಸಾರಾಂಶ
ನಗರದಲ್ಲಿ ಭಾರಿ ವಾಹನಗಳ ಸಂಚಾರ ಅವ್ಯಾಹತವಾಗಿದ್ದು, ಇದರಿಂದಾಗಿ ದಿನ ನಿತ್ಯ ಒಂದಲ್ಲ ಒಂದು ಅಪಘಾತಕ್ಕೆ ಕಾರಣವಾಗಿದೆ.
ಟೋಲ್ ತಪ್ಪಿಸಿ ವೇಗದಲ್ಲಿ ವಾಹನಗಳ ಸಂಚಾರ, ನಾಗರಿಕರ ಆಕ್ರೋಶರಾಮಮೂರ್ತಿ ನವಲಿ
ಕನ್ನಡಪ್ರಭ ವಾರ್ತೆ ಗಂಗಾವತಿನಗರದಲ್ಲಿ ಭಾರಿ ವಾಹನಗಳ ಸಂಚಾರ ಅವ್ಯಾಹತವಾಗಿದ್ದು, ಇದರಿಂದಾಗಿ ದಿನ ನಿತ್ಯ ಒಂದಲ್ಲ ಒಂದು ಅಪಘಾತಕ್ಕೆ ಕಾರಣವಾಗಿದೆ.
ಗಂಗಾವತಿಯಿಂದ, ವಿರೂಪಾಪುರ ತಾಂಡದಿಂದ ಆನೆಗೊಂದಿಯ ಮಾರ್ಗದಲ್ಲಿ ದಿನ ನಿತ್ಯ ನೂರಾರು ವಾಹನಗಳು ಸಂಚಾರ ಮಾಡುತ್ತಿದ್ದು, ಅದರಲ್ಲಿ ಭಾರಿ ವಾಹನಗಳ ಓಡಾಟದಿಂದ ಜನರು ರೋಸಿ ಹೋಗಿದ್ದಾರೆ. ಗಂಗಾವತಿಯಿಂದ ಕಡೇಬಾಗಿಲು, ಆನೆಗೊಂದಿ, ಮುನಿರಾಬಾದ್ ಮತ್ತು ಬುಕ್ಕಸಾಗರ ಮೂಲಕ ವಾಹನಗಳು ಸಂಚಾರ ಹೆಚ್ಚಾಗಿದ್ದು, ಅದರಲ್ಲೂ ರಾತ್ರಿ ಸಮಯದಲ್ಲಿ ಹೆಚ್ಚಿನ ಗಾಡಿಗಳು ಓಡಾಡುತ್ತವೆ.ಭಾರಿ ವಾಹನಗಳ ಸಂಚಾರ:
ಗಂಗಾವತಿ ಸಮೀಪದ ಹೇಮಗುಡ್ಡ ಮತ್ತು ಮರಳಿ ಗ್ರಾಮಗಳ ಬಳಿ ಟೋಲ್‌ಗಳಿದ್ದು, ಇದಕ್ಕೆ ಶುಲ್ಕ ಪಾವತಿಸಬೇಕೆಂಬ ಕಾರಣಕ್ಕೆ ಆನೆಗೊಂದಿ ಮಾರ್ಗವಾಗಿ ವಾಹನಗಳು ಸಂಚಾರ ಮಾಡುತ್ತವೆ. ಕಂಪ್ಲಿ ಮಾರ್ಗದಿಂದ ಹೊಸಪೇಟೆ ಮತ್ತು ಬೂದಗುಂಪದಿಂದ ಹೊಸಪೇಟೆಗೆ ಹೋಗಲು ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಿದ್ದರೂ ಲಾರಿಗಳು, ಭತ್ತ ಬೆಳೆ ಕೊಯ್ಯುವ ಯಂತ್ರಗಳು, ಮರಳು ಸಾಗಾಣಿಕೆ, ಕಲ್ಲುಗಳನ್ನು ಈ ಮಾರ್ಗದಲ್ಲಿ ಸಾಗಿಸಲಾಗುತ್ತಿದೆ. ವಾಹನಗಳಲ್ಲಿ ಮಿತಿ ಮೀರಿದ ಸಾಮಗ್ರಿಗಳನ್ನು ಭರ್ತಿ ಮಾಡಿ ವೇಗವಾಗಿ ಓಡಿಸುತ್ತಾರೆ.ವಿದ್ಯಾರ್ಥಿಗಳಿಗೆ ಭಯ:
ಆನೆಗೊಂದಿ ರಸ್ತೆಯ ಪಕ್ಕದಲ್ಲಿ ಶಾಲಾ-ಕಾಲೇಜುಗಳಿದ್ದು, ವಿದ್ಯಾರ್ಥಿಗಳು ವಾಹನಗಳ ಸಂಚಾರದಿಂದ ಭಯಭೀತರಾಗಿದ್ದಾರೆ. ಈ ಹಿಂದೆ ಖಾಸಗಿ ಶಾಲೆಗೆ ತೆರುಳುತ್ತಿದ್ದ ವಿದ್ಯಾರ್ಥಿನಿಯೊಬ್ಬರು ಭಾರಿ ವಾಹನಕ್ಕೆ ಸಿಲುಕಿ ಮೃತಪಟ್ಟ ಉದಾಹರಣೆ ಇದೆ. ಶಾಲಾ ಅಟೋಗಳಿಗೆ ಡಿಕ್ಕಿ ಹೊಡೆದು ಗಾಯಗೊಂಡಿರುವುದು ಹೊಸತೇನಲ್ಲ.ಧೂಳು:
ವಾಹನಗಳ ಸಂಚಾರದಿಂದ ರಸ್ತೆ ಪಕ್ಕದಲ್ಲಿರುವ ಜನರು ಧೂಳಿಗೆ ನಲುಗಿದ್ದಾರೆ. ರಸ್ತೆ ಸಂಪೂರ್ಣ ಹದೆಗಟ್ಟಿದ್ದು, ಭಾರಿ ವಾಹನಗಳ ಸಂಚಾರದಿಂದ ಇಡೀ ರಸ್ತೆ ಧೂಳು ತುಂಬಿ ಮನೆಗಳ ಒಳಗೆ ಆವಾರಿಸುತ್ತಿದೆ ಎಂದು ನಾಗರಿಕರ ದೂರು ಕೇಳಿ ಬರುತ್ತದೆ.ಸಂಚಾರಿ ಪೊಲೀಸರು ಭಾರಿ ವಾಹನಗಳ ಸಂಚಾರಕ್ಕೆ ಕಡಿವಾಣ ಹಾಕಬೇಕು, ಪರ್ಯಾಯವಾಗಿರುವ ಬೈಪಾಸ್ ರಸ್ತೆ, ರಾಷ್ಟ್ರೀಯ, ರಾಜ್ಯ ಹೆದ್ದಾರಿಗಳ ಮೂಲಕ ಭಾರಿ ವಾಹನಗಳು ಸಂಚರಿಸಿದರೆ ಅಪಘಾತಗಳನ್ನು ತಪ್ಪಿಸಿದಂತಾಗುತ್ತದೆ ಎಂದು ಜನರು ಹೇಳುತ್ತಾರೆ.