ಸಾರಾಂಶ
ಹೆಬ್ಬಾಲೆಯಲ್ಲಿ ಮಾ.೨ರಂದು ಬೆಳಗ್ಗೆ 8.30 ಗಂಟೆಗೆ ಪೂರ್ಣಕುಂಭ ಕಳಶದೊಂದಿಗೆ ಎತ್ತಿನಗಾಡಿಯಲ್ಲಿ ಅತಿಥಿಗಳನ್ನು ಮೆರವಣಿಗೆ ನಡೆಸಿ ವೇದಿಕೆಗೆ ಕರೆತರಲಾಗುವುದು. ಮೂರು ಗ್ರಾಮದ ಪ್ರಮುಖರ ಸಮ್ಮುಖದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. ನಂತರ ಜಾನಪದ ಗೋಷ್ಠಿ, ಜಾನಪದ ಕ್ರೀಡಾ ಸ್ಪರ್ಧೆ, ಜಾನಪದ ನೃತ್ಯ, ಗೀತಗಾಯನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಸಭೆ ನಿರ್ಧರಿಸಿತು.
ಕನ್ನಡಪ್ರಭ ವಾರ್ತೆ ಕುಶಾಲನಗರಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಹೆಬ್ಬಾಲೆ, ತೊರೆನೂರು ಮತ್ತು ಶಿರಂಗಾಲ ಗ್ರಾಮಗಳ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಹೆಬ್ಬಾಲೆ ಪ್ರಾಥಮಿಕ ಶಾಲಾ ಮೈದಾನದಲ್ಲಿ ಮಾ.2 ರಂದು ಜಾನಪದ ಗ್ರಾಮ ಸಿರಿ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಗಿದೆ.
ಹೆಬ್ಬಾಲೆ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಶನಿವಾರ 3 ಗ್ರಾಮದ ಪ್ರಮುಖರು, ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳು, ತಾಲೂಕು ಅಧ್ಯಕ್ಷ ಕೆ.ಎಸ್.ನಾಗೇಶ್ ಅಧ್ಯಕ್ಷತೆಯಲ್ಲಿ ಸಭೆ ಸೇರಿ, ಕರ್ನಾಟಕ ಎಂದು ನಾಮಕರಣಗೊಂಡು 50 ವರ್ಷವಾಗಿರುವ ಸಂದರ್ಭದಲ್ಲಿ ವಿಶೇಷ ಕಾರ್ಯಕ್ರಮ ಅಯೋಜಿಸಲಾಗುತ್ತಿದ್ದು,ಗ್ರಾಮ ಸಿರಿ ಕಾರ್ಯಕ್ರಮದ ರೂಪುರೇಷೆಯನ್ನು ನಿರ್ಧಾರ ಕೈಗೊಳ್ಳಲಾಗಿದೆ.ಅತಿಥಿಗಳ ಮೆರವಣಿಗೆ:
ಒಂದು ದಿನದ ಕಾರ್ಯಕ್ರಮದಲ್ಲಿ ಬೆಳಗ್ಗೆ 8.30 ಗಂಟೆಗೆ ಪೂರ್ಣಕುಂಭ ಕಳಶದೊಂದಿಗೆ ಎತ್ತಿನಗಾಡಿಯಲ್ಲಿ ಅತಿಥಿಗಳನ್ನು ಮೆರವಣಿಗೆ ನಡೆಸಿ ವೇದಿಕೆಗೆ ಕರೆತರಲಾಗುವುದು. ಕಾರ್ಯಕ್ರಮವನ್ನು ಮುಖ್ಯ ಅತಿಥಿಗಳು ಸೇರಿದಂತೆ 3 ಗ್ರಾಮದ ಪ್ರಮುಖರ ಸಮ್ಮುಖದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. ನಂತರ ಜಾನಪದ ಗೋಷ್ಠಿ, ಜಾನಪದ ಕ್ರೀಡಾ ಸ್ಪರ್ಧೆ, ಜಾನಪದ ನೃತ್ಯ, ಗೀತಗಾಯನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಸಭೆ ನಿರ್ಣಯ ಕೈಗೊಂಡಿದೆ.ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲು ತೀರ್ಮಾನಿಸಲಾಯಿತು.
ಆರ್ಥಿಕ ಸಮಿತಿ, ಮೆರವಣಿಗೆ ಸಮಿತಿ, ಆಹಾರ ಸಮಿತಿ, ಸಾಂಸ್ಕೃತಿಕ ಸಮಿತಿ, ಜಾನಪದ ಕ್ರೀಡಾ ಸಮಿತಿ, ವೇದಿಕೆ ಸಮಿತಿ, ಪ್ರಚಾರ ಸಮಿತಿ, ವಸ್ತುಪ್ರದರ್ಶನ ಸಮಿತಿ ಸೇರಿದಂತೆ ಹಲವು ಸಮಿತಿಗಳನ್ನು ರಚಿಸಿ ಗಣ್ಯರನ್ನು ಅಧ್ಯಕ್ಷರು, ಸಂಚಾಲಕರನ್ನಾಗಿ ನೇಮಿಸಿಲಾಯಿತ್ತು.ಆರ್ಥಿಕ ಸಮಿತಿ ಅಧ್ಯಕ್ಷ ನಟೇಶ್ ಗೌಡ ಮಾತನಾಡಿ, ಪೆ.10 ರ ಒಳಗೆ ಉಪ ಸಮಿತಿಗಳಿಗೆ ಬೇಕಾಗುವ ಅಂದಾಜು ಖರ್ಚು ವೆಚ್ಚಗಳ ಮಾಹಿತಿ ನೀಡಲು ತಿಳಿಸಿದರು.
ಸಭೆಯಲ್ಲಿ ಹೆಬ್ಬಾಲೆ ಗ್ರಾ.ಪಂ. ಅಧ್ಯಕ್ಷೆ ಅರುಣಾ ಕುಮಾರಿ, ತೊರೆನೂರು ಗ್ರಾ.ಪಂ. ಅಧ್ಯಕ್ಷೆ ಶೋಭಾ ಪ್ರಕಾಶ್, ಪ್ರಮುಖರಾದ ಟಿ.ಡಿ.ಸೋಮಣ್ಣ, ಕೃಷ್ಣೇಗೌಡ, ಟಿ.ಬಿ.ಜಗದೀಶ್, ಚಂದ್ರಶೇಖರ್, ಚಂದ್ರಪ್ಪ, ರೂಪ ಮಹೇಶ್, ಟಿ.ಎಲ್.ರಮೇಶ್, ಪ್ರದೀಪ್ ರೆಡ್ಡಿ, ಕಸಾಪ ತಾಲೂಕು ಕಾರ್ಯದರ್ಶಿ ಎಸ್.ನಾಗರಾಜ್, ಖಜಾಂಚಿ ಕೆ.ವಿ.ಉಮೇಶ್, ಹೆಬ್ಬಾಲೆ ಘಟಕದ ಅಧ್ಯಕ್ಷ ಎಂ.ಎನ್. ಮೂರ್ತಿ, ಕಾರ್ಯದರ್ಶಿ ಕವಿತಾ ಪುಟ್ಟೇಗೌಡ ಮತ್ತಿತರರು ಇದ್ದರು.