ಪುತ್ತೂರು ಜಿಲ್ಲೆ ವಿಶ್ವ ಹಿಂದೂ ಪರಿಷತ್ ಧರ್ಮ ಪ್ರಸಾರ ವಿಭಾಗ, ಹೆಗ್ಗುಂಜೆ ರಾಜೀವ ಶೆಟ್ಟಿ ಟ್ರಸ್ಟ್ ವತಿಯಿಂದ ಪಂಜದ ಪಲ್ಲೋಡಿಯ ಕೊರಗರ ಕಾಲೋನಿಯಲ್ಲಿ ಸುಮಾರು 1.5 ಕೋಟಿ ರು. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಆರು ನೂತನ ಮನೆಗಳ ಶಿಲಾನ್ಯಾಸ ಮತ್ತು ಭೂಮಿ ಪೂಜೆ ಹಾಗೂ ಅಲ್ಪ ನಿರ್ಮಾಣವಾಗಿ ಸ್ಥಗಿತಗೊಂಡಿರುವ ನಾಲ್ಕು ಮನೆಗಳ ಪೂರ್ಣ ನಿರ್ಮಾಣಕ್ಕೆ ಚಾಲನೆ ಕಾರ್ಯಕ್ರಮ ಮಂಗಳವಾರ ನಡೆಯಿತು. ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಭೂಮಿ ಪೂಜೆ ನೆರವೇರಿಸಿ ಆಶೀರ್ವಾದಿಸಿದರು.
ಸುಳ್ಯ: ಪುತ್ತೂರು ಜಿಲ್ಲೆ ವಿಶ್ವ ಹಿಂದೂ ಪರಿಷತ್ ಧರ್ಮ ಪ್ರಸಾರ ವಿಭಾಗ, ಹೆಗ್ಗುಂಜೆ ರಾಜೀವ ಶೆಟ್ಟಿ ಟ್ರಸ್ಟ್ ವತಿಯಿಂದ ಪಂಜದ ಪಲ್ಲೋಡಿಯ ಕೊರಗರ ಕಾಲೋನಿಯಲ್ಲಿ ಸುಮಾರು 1.5 ಕೋಟಿ ರು. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಆರು ನೂತನ ಮನೆಗಳ ಶಿಲಾನ್ಯಾಸ ಮತ್ತು ಭೂಮಿ ಪೂಜೆ ಹಾಗೂ ಅಲ್ಪ ನಿರ್ಮಾಣವಾಗಿ ಸ್ಥಗಿತಗೊಂಡಿರುವ ನಾಲ್ಕು ಮನೆಗಳ ಪೂರ್ಣ ನಿರ್ಮಾಣಕ್ಕೆ ಚಾಲನೆ ಕಾರ್ಯಕ್ರಮ ಮಂಗಳವಾರ ನಡೆಯಿತು. ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಭೂಮಿ ಪೂಜೆ ನೆರವೇರಿಸಿ ಆಶೀರ್ವಾದಿಸಿದರು.
ಮನೆಗಳ ಶಿಲಾನ್ಯಾಸವನ್ನು ಆರೆಸ್ಸೆಸ್ ಪ್ರಮುಖರಾದ ಡಾ. ಕೆ.ಪ್ರಭಾಕರ್ ಭಟ್ ಕಲ್ಲಡ್ಕ ನೆರವೇರಿಸಿದರು.ಶೇಷ ಮನೆಗಳ ಪುನರ್ ನಿರ್ಮಾಣಕ್ಕೆ ಸಂಸದ ಕ್ಯಾ ಬ್ರಿಜೇಶ್ ಚೌಟ ಚಾಲನೆ ನೀಡಿದರು.
ಶಾಸಕಿ ಭಾಗೀರಥಿ ಮುರುಳ್ಯ ಕೊರಗ ಫಲಾನುಭವಿಗಳನ್ನು ಅಭಿನಂದಿಸಿದರು. ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಕೊರಗ ಫಲಾನುಭವಿಗಳಿಗೆ ಅಶ್ವಾಸನ ಪತ್ರ ವಿತರಣೆ ಮಾಡಿದರು. ಸುರತ್ಕಲ್ ಶಾಸಕ ಡಾ.ಭರತ್ ಶೆಟ್ಟಿ, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಬೆಂಗಳೂರು ಹೆಗ್ಗುಂಜೆ ರಾಜೀವ ಶೆಟ್ಟಿ ಟ್ರಸ್ಟ್ಅಧ್ಯಕ್ಷರಾದ ಡಾ.ಎಚ್.ಎಸ್ ಶೆಟ್ಟಿ, ಕಾರ್ಯದರ್ಶಿ ಡಾ. ಸುಮನ ಶ್ರೀನಿವಾಸ್ ಶೆಟ್ಟಿ, ರಾಷ್ಟ್ರೀಯ ಸ್ವಯಂಸೇವಕ ಸಂಘ, ಕರ್ನಾಟಕ ದಕ್ಷಿಣ ಪ್ರಾಂತ ಸಹಕಾರ್ಯವಾಹರಾದ ಪಿ. ಎಸ್. ಪ್ರಕಾಶ್, ವಿಶ್ವಹಿಂದೂ ಪರಿಷತ್ ಕ್ಷೇತ್ರೀಯ ಧರ್ಮಪ್ರಸಾರ ಪ್ರಮುಖ ಸೂರ್ಯ ನಾರಾಯಣ, ಸಮಾಜ ಸೇವಕ ಮುರಳಿ ಕಡೆಕಾರ್, ಕರ್ನಾಟಕ ಮತ್ತು ಕೇರಳದ ಕೊರಗಾಭಿವೃದ್ಧಿ ಸಂಸ್ಥೆಗಳ ಅಧ್ಯಕ್ಷರಾದ ಸುಶೀಲ ನಾಡ, ವಿಶ್ವಹಿಂದೂ ಪರಿಷತ್ ಪುತ್ತೂರು ಜಿಲ್ಲೆ ಅಧ್ಯಕ್ಷ ಡಾ. ಕೃಷ್ಣ ಪ್ರಸನ್ನ, ಹೆಗ್ಗುಂಜೆ ರಾಜೀವ ಶೆಟ್ಟಿ ಟ್ರಸ್ಟ್ಉಪಾಧ್ಯಕ್ಷರಾದ ಹಾಲಾಡಿ ನಾಗರಾಜ ಶೆಟ್ಟಿ ಇದ್ದರು.ನವೀನ್ ನೆರಿಯ ಸ್ವಾಗತಿಸಿ ವಂದಿಸಿದರು.ಕೊರಗರಿಗೆ 100 ಮನೆಗಳ ಸಂಕಲ್ಪ ಯೋಜನೆ: ಮೊದಲ ಹಂತದಲ್ಲಿ ಕುಂದಾಪುರ ತಾಲೂಕಿನ ಜನ್ನಾಡಿಯಲ್ಲಿ 14 ಮನೆಗಳನ್ನು ಹಸ್ತಾಂತರಿಸಲಾಗಿದೆ. 2ನೇ ಹಂತದಲ್ಲಿ 14 ಮನೆಗಳನ್ನು ಕುಂದಾಪುರ ತಾಲೂಕಿನ ಉಳ್ಳೂರು ಹಸ್ತಾಂತರಿಸಲಾಗಿದೆ.3ನೇ ಹಂತದಲ್ಲಿ 14 ಮನೆಗಳನ್ನು ಕುಂದಾಪುರ ತಾಲೂಕಿನ ಅಮಾಸೆಬೈಲಿನಲ್ಲಿ ಹಸ್ತಾಂತರಿಸಲಾಗುವುದು. 4ನೇ ಹಂತದಲ್ಲಿ ಕುಂದಾಪುರ ಕೊಳ್ಕೆಬೈಲಿನಲ್ಲಿ ಒಂದು ಮನೆಯನ್ನು ಹಸ್ತಾಂತರಿಸಲಾಗುವುದು. 4ನೇ ಹಂತದಲ್ಲಿ 6 ಮನೆಗಳನ್ನು ಪಂಜ-ಪಲ್ಲೋಡಿಯಲ್ಲಿ 2027ರಲ್ಲಿ ಫಲಾನುಭವಿಗಳಿಗೆ ಹಸ್ತಾರಿಸಲಾಗುವುದು. ಬಾಕಿ ಉಳಿದ 51 ಮನೆಗಳನ್ನು ಮುಂದಿನ 2ವರ್ಷಗಳಲ್ಲಿ ಪೂರ್ಣಗೊಳಿಸಿ ಫಲಾನುಭವಿಗಳಿಗೆ ಹಸ್ತಾಂತರಿಸಲಾಗುವುದು. ಇಲ್ಲಿನ ಕೊರಗೆ ಕುಟುಂಬಗಳು ಸುಖ, ಶಾಂತಿ, ಸಂತಸ ಮತ್ತು ನೆಮ್ಮದಿಯ ಬದುಕು ಕಾಣುವಂತಾಗಬೇಕೆಂಬುದು ನಮ್ಮ ಆಶಯವಾಗಿದೆ ಎಂದು ಬೆಂಗಳೂರು ಹೆಗ್ಗುಂಜೆ ರಾಜೀವ ಶೆಟ್ಟಿ ಟ್ರಸ್ಟ್ ಅಧ್ಯಕ್ಷ ಡಾ.ಎಚ್.ಎಸ್ ಶೆಟ್ಟಿ ತಿಳಿಸಿದ್ದಾರೆ.