ಸಾರಾಂಶ
ಮಧ್ಯಾಹ್ನ ಗಿಡಗಳಲ್ಲಿದ್ದ ಹೆಜ್ಜೇನು ಏಕಾಏಕಿ ದಾಳಿ ನಡೆಸಿ ಸುತ್ತುವರಿದು ಕಚ್ಚಿದ ಪರಿಣಾಮ ಕೂಲಿಕಾರ ರಮೇಶ್ ನೋವು ತಾಳಲಾರದೇ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.
ಪಾವಗಡ: ತೋಟದ ಕೆಲಸಕ್ಕೆಂದು ತೆರಳಿದ್ದ ಕೂಲಿ ಕಾರ್ಮಿಕರೊಬ್ಬರಿಗೆ ಹೆಜ್ಜೇನು ದಾಳಿ ನಡೆಸಿ ಕಚ್ಚಿದ್ದರಿಂದ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ತಾಲೂಕಿನ ಬಿ.ಕೆ.ಹಳ್ಳಿ ಹೊರವಲಯದಲ್ಲಿ ನಡೆದಿದೆ. ರಮೇಶ್ (28) ಮೃತ ದುರ್ದೈವಿ. ಪಾವಗಡ ತಾಲೂಕು ವೈ.ಎನ್.ಹೊಸಕೋಟೆ ಹೋಬಳಿ ವ್ಯಾಪ್ತಿಯ ನೀಲಮ್ಮನಹಳ್ಳಿ ವಾಸಿ ಕೂಲಿ ಕಾರ್ಮಿಕ ರಮೇಶ್ ಶನಿವಾರ ಎಂದಿನಂತೆ ರೈತರೊಬ್ಬರ ತೋಟದಲ್ಲಿ ದಾಳಿಂಬೆ ಬೆಳೆ ಕಾಯಲು ತೆರಳಿದ್ದರು. ಮಧ್ಯಾಹ್ನ ಗಿಡಗಳಲ್ಲಿದ್ದ ಹೆಜ್ಜೇನು ಏಕಾಏಕಿ ದಾಳಿ ನಡೆಸಿ ಸುತ್ತುವರಿದು ಕಚ್ಚಿದ ಪರಿಣಾಮ ಕೂಲಿಕಾರ ರಮೇಶ್ ನೋವು ತಾಳಲಾರದೇ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಘಟನಾ ಸ್ಥಳಕ್ಕೆ ಪಿಎಸ್‌ಐ ಲಕ್ಷ್ಮಣ್ ಭೇಟಿ ನೀಡಿದ್ದು, ಮೃತ ರಮೇಶ್ ಶವವನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ವಾರಸುದಾರರಿಗೆ ಮೃತ ದೇಹ ಹಸ್ತಾಂತರಿಸಲಾಗಿದೆ. ಘಟನೆ ಸಂಬಂಧ ತಿರುಮಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.