ಹೆಜಮಾಡಿ: ಆರೋಗ್ಯ ತಪಾಸಣಾ ಶಿಬಿರ

| Published : Sep 23 2024, 01:21 AM IST

ಸಾರಾಂಶ

ಮೂಲ್ಕಿಯ ಲಯನ್ಸ್ ಕ್ಲಬ್, ಲಿಯೋ ಕ್ಲಬ್, ರೋಲ್ಫಿ ಡಿಕೋಸ್ತ ಅವರ ಆಪ್ತ ಬಳಗ ಹಾಗೂ ಮಂಗಳೂರು ಎಜೆ ಮೆಡಿಕಲ್ ಆಸ್ಪತ್ರೆ ಸಹಭಾಗಿತ್ವದಲ್ಲಿ ಹೆಜಮಾಡಿ ತೈಬಾ ಸಂರ್ಕೀಣದ ನೂತನ ಮಳಿಗೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.

ಕನ್ನಡಪ್ರಭವಾರ್ತೆ ಮೂಲ್ಕಿ

ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ಶಿಬಿರಗಳ ಮೂಲಕ ಸೇವಾ ಸಂಸ್ಥೆಗಳು ಜನಸೇವೆ ಮಾಡಬೇಕು ಎಂದು ಕ.ಸಾ.ಪ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಹೇಳಿದರು.

ಮೂಲ್ಕಿಯ ಲಯನ್ಸ್ ಕ್ಲಬ್, ಲಿಯೋ ಕ್ಲಬ್, ರೋಲ್ಫಿ ಡಿಕೋಸ್ತ ಅವರ ಆಪ್ತ ಬಳಗ ಹಾಗೂ ಮಂಗಳೂರು ಎಜೆ ಮೆಡಿಕಲ್ ಆಸ್ಪತ್ರೆ ಸಹಭಾಗಿತ್ವದಲ್ಲಿ ಹೆಜಮಾಡಿ ತೈಬಾ ಸಂರ್ಕೀಣದ ನೂತನ ಮಳಿಗೆಯಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೂಲ್ಕಿ ಲಯನ್ಸ್ ಕ್ಲಬ್ ಅಧ್ಯಕ್ಷ ರೋಲ್ಫಿ ಡಿಕೋಸ್ತ ವಹಿಸಿದ್ದರು. ಹೆಜಮಾಡಿ ಗ್ರಾ.ಪಂ. ಅಧ್ಯಕ್ಷೆ ರೇಷ್ಮಾ ಮೆಂಡನ್, ವೈದ್ಯರಾದ ಡಾ.ಕವಿತಾ ಡಿಸೋಜಾ, ಹಿರಿಯ ನಾಗರಿಕರಾದ ಶೇಕಬ್ಬ ಕೋಟೆ, ಅಬ್ದುಲ್ಲಾ ಹಾಜಿ, ಲಯನ್ಸ್ ಕ್ಲಬ್ ಪ್ರಾಂತ್ಯಾಧ್ಯಕ್ಷ ಸುಜಿತ್ ಸಾಲ್ಯಾನ್, ಶೀತಲ್ ಸುಶೀಲ್, ಉದಯ ಅಮೀನ್ ಮಟ್ಟು, ಸುಶೀಲ್ ಬಂಗೇರಾ, ಲಿಯೋ ಉಪಾಧ್ಯಕ್ಷೆ ಶ್ರದ್ಧಾ ಕೋಟ್ಯಾನ್, ಸಿರಾಜ್ ತೈಬಾ ಮಾರ್ಕೆಟ್, ವೈದ್ಯಕೀಯ ಶಿಬಿರದ ಸಂಯೋಜಕ ಉದಯಕುಮಾರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ನಿತಿನ್ ನಿರೂಪಿಸಿದರು ಉದಯ ಅಮೀನ್ ವಂದಿಸಿದರು. ಬಳಿಕ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.