ಸಾರಾಂಶ
ಅಖಿಲ ಭಾರತ ಬ್ರಾಹ್ಮಣ ಸಂಘದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಕೈಗಾರಿಕೋದ್ಯಮಿಗಳ ವಿಭಾಗವಿದೆ. ಅವರ ಸಹಾಯದಿಂದ ಬ್ರಾಹ್ಮಣ ಯುವಜನರಿಗೆ ಸ್ಟಾರ್ಟ್ ಅಪ್ ಘಟಕ ಆರಂಭಿಸಲು ಉತ್ತೇಜನ ಕೊಡಲಾಗುತ್ತಿದೆ.
ಧಾರವಾಡ:
ಬ್ರಾಹ್ಮಣ ಯುವಕ-ಯುವತಿಯರು ಆರ್ಥಿಕವಾಗಿ ಸದೃಢರಾಗಲು ಸಮಾಜದ ಹಿರಿಯರು ನೆರವಾಗಬೇಕು ಎಂದು ಅಖಿಲ ಭಾರತ ಬ್ರಾಹ್ಮಣ ಸಂಘದ ಅಧ್ಯಕ್ಷ ಗೋವಿಂದ ಕುಲಕರ್ಣಿ ಹೇಳಿದರು.ನಗರದಲ್ಲಿ ನಡೆದ ಶುಕ್ಲ ಯಜುರ್ವೇದಿಯರ ರಾಜ್ಯಮಟ್ಟದ ವಿಪ್ರೋತ್ಸವದ ಬ್ರಾಹ್ಮಣ ಕ್ಷೇಮಾಭಿವೃದ್ಧಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂಥ ಸಮ್ಮೇಳನಗಳಿಗೆ ಬ್ರಾಹ್ಮಣ ಯುವಜನರು ಯಾಕೆ ಬರುವುದಿಲ್ಲ ಎಂದರೆ, ಅವರಿಗೆ ನಾವೇನು ಮಾಡಿದ್ದೇವೆ ಎಂಬ ಪ್ರಶ್ನೆ ಕೇಳಿಕೊಳ್ಳಬೇಕು. ಯುವಜನರು ಉದ್ಯೋಗದಲ್ಲಿ ತೊಡಗಿಸಿಕೊಳ್ಳಲು ಹಣಕಾಸು ನೆರವು ಮತ್ತು ಮಾರ್ಗದರ್ಶನ ಮಾಡಬೇಕಾದ ಅಗತ್ಯವಿದೆ ಎಂದರು.
ತಮ್ಮ ಸಂಘದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಕೈಗಾರಿಕೋದ್ಯಮಿಗಳ ವಿಭಾಗವಿದೆ. ಅವರ ಸಹಾಯದಿಂದ ಬ್ರಾಹ್ಮಣ ಯುವಜನರಿಗೆ ಸ್ಟಾರ್ಟ್ ಅಪ್ ಘಟಕ ಆರಂಭಿಸಲು ಉತ್ತೇಜನ ಕೊಡಲಾಗುತ್ತಿದೆ. ಸರ್ಕಾರದ ನೆರವು ಇಲ್ಲದೇ ಇದು ಸುಲಭವಾಗಿ ನೆರವೇರಿದೆ. ಈಗಾಗಲೇ ಸಂಘದ ಮೂಲಕ ಸಾವಿರಾರು ಯುವಜನರು ಇಂಥ ಉದ್ಯೋಗದಲ್ಲಿ ತೊಡಗಿದ್ದಾರೆ. ಮುಂದಿನ ಹತ್ತು ವರ್ಷಗಳಲ್ಲಿ ಒಂದು ಲಕ್ಷ ಯುವಜನರನ್ನು ಸ್ಬಯಂ ಉದ್ಯೋಗಿಗಳನ್ನಾಗಿ ಮಾಡುವ ಗುರಿಯಿದೆ ಎಂದು ಹೇಳಿದರು.ವೇಣುಗೋಪಾಲ, ನಿರ್ಮಲ ಸ್ವಾಮೀಜಿ ಮಾತನಾಡಿದರು. ಕೆಂಗೇರಿ ಮುರಗೋಡ ಚಿದಂಬರ ಮಠದ ದಿವಾಕರ ದೀಕ್ಷಿತರು ಸಾನ್ನಿಧ್ಯ ವಹಿಸಿದ್ದರು. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ರಘುನಾಥ ಎಸ್., ಧಾರವಾಡ ಜಿಲ್ಲಾಧ್ಯಕ್ಷ ಲಕ್ಷ್ಮಣ ಕುಲಕರ್ಣಿ, ಸಮ್ಮೇಳಾಧ್ಯಕ್ಚ ಜಿ.ಕೆ. ಕುಲಕರ್ಣಿ, ಆರ್.ಡಿ. ಕುಲಕರ್ಣಿ, ಸಿ.ಆರ್. ಜೋಶಿ, ಶಂಕರ ಪಾಟೀಲ, ಸಿ.ಎಂ. ದೀಕ್ಷಿತ, ಅರವಿಂದ ಪೂಜಾರ ಮೊದಲಾದವರಿದ್ದರು. ನರಸಿಂಹ ಸೋಮಲಾಪುರ ನಿರೂಪಿಸಿದರು.;Resize=(128,128))
;Resize=(128,128))