ಕೃವಿವಿ ಸಕಾಲಕ್ಕೆ ಸೂಕ್ತ ಸಲಹೆ ನೀಡಿ ರೈತರಿಗೆ ನೆರವಾಗಿ: ಶರಣಗೌಡ ಬಯ್ಯಾಪುರ

| Published : Sep 26 2024, 10:07 AM IST

ಕೃವಿವಿ ಸಕಾಲಕ್ಕೆ ಸೂಕ್ತ ಸಲಹೆ ನೀಡಿ ರೈತರಿಗೆ ನೆರವಾಗಿ: ಶರಣಗೌಡ ಬಯ್ಯಾಪುರ
Share this Article
  • FB
  • TW
  • Linkdin
  • Email

ಸಾರಾಂಶ

ರೈತರಲ್ಲಿ ಗಟ್ಟಿತನ ಇರುತ್ತದೆ. ರೈತರು ಯಾವತ್ತೂ ಎದೆಗುಂದಬಾರದು

ಕನ್ನಡಪ್ರಭ ವಾರ್ತೆ ರಾಯಚೂರು

ರೈತರು ನಿಸರ್ಗದೊಂದಿಗೆ ಹೋರಾಟ ಮಾಡಿ ವಿವಿಧ ಬೆಳೆಗಳನ್ನು ಬೆಳೆಯುತ್ತಾರೆ. ಅವರಿಗೆ ಸೂಕ್ತ ಸಮಯದಲ್ಲಿ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ವತಿಯಿಂದ ಸೂಕ್ತ ಸಲಹೆ ನೀಡಿ ನೆರವಾಗಬೇಕು ಎಂದು ಎಂಎಲ್ಸಿ ಹಾಗೂ ವಿವಿ ವ್ಯವಸ್ಥಾಪನಾ ಮಂಡಳಿಯ ಸದಸ್ಯ ಶರಣಗೌಡ ಬಯ್ಯಾಪುರ ಹೇಳಿದರು.

ಸ್ಥಳೀಯ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಬೀಜ ಘಟಕದಲ್ಲಿ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಅಖಿಲ ಭಾರತ ಸಂಯೋಜಿತ ಬೀಜ ಸಂಶೋಧನಾ ಯೋಜನೆ ರಾಯಚೂರು ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಹಿಂಗಾರು ಬೀಜ ದಿನೋತ್ಸವ-2024ರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಬುಧವಾರ ಮಾತನಾಡಿದರು. ರೈತರಲ್ಲಿ ಗಟ್ಟಿತನ ಇರುತ್ತದೆ. ರೈತರು ಯಾವತ್ತೂ ಎದೆಗುಂದಬಾರದು ಎಂದರು.

ಉತ್ತರ ಪ್ರದೇಶದ ಮಾವು ಭಾರತೀಯ ಬೀಜ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ.ಸಂಜಯ ಕುಮಾರ, ವಿವಿ ವ್ಯವಸ್ಥಾಪನಾ ಮಂಡಳಿ ಸದಸ್ಯ ಬಸನಗೌಡ ಬ್ಯಾಗವಾಟ್ ಅವರು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿವಿ ಕುಲಪತಿ ಡಾ.ಎಂ.ಹನುಮಂತಪ್ಪ ವಹಿಸಿದ್ದರು.

ಈ ಸಂದರ್ಭದಲ್ಲಿ ವಿವಿಯ ವ್ಯವಸ್ಥಾಪನಾ ಮಂಡಳಿಯ ಸದಸ್ಯರುಗಳಾದ ಮಲ್ಲಿಕಾರ್ಜುನ ಡಿ, ಮಲ್ಲೇಶ ಕೊಲಿಮಿ, ಮಧುಸೂಧನ ರೆಡ್ಡಿ, ತಿಮ್ಮಣ್ಣ ಸೋಮಪ್ಪ ಚವಡಿ, ಕುಲ ಸಚಿವ ಡಾ.ಎಂ.ವೀರನಗೌಡ, ಧಾರವಾಡದ ಕೃಷಿ ವಿವಿ ವಿಶೇಷಾಧಿಕಾರಿ ಡಾ.ರವಿ ಹುಣಜಿ, ಬೀಜ ಘಟಕದ ವಿಶೇಷಾಧಿಕಾರಿ ಡಾ.ಅರಣಕುಮಾರ್ ಹೊಸಮನಿ ಸೇರಿ ಬೋಧಕ-ಬೋಧಕೇತರ ಸಿಬ್ಬಂದಿ,ವಿದ್ಯಾರ್ಥಿಗಳು,ರೈತರು ಇದ್ದರು.