ಸಾರಾಂಶ
ಗದಗ: ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಸರ್ವರ ಸಹಾಯ ಅಗತ್ಯವಾಗಿದ್ದು, ಇನ್ನರ್ ವೀಲ್ ಕ್ಲಬ್ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾಗಿ ಮಕ್ಕಳ ಕಲಿಕಾ ಸಾಮಗ್ರಿ ವಿತರಿಸಿ ಸಹಾಯ ಹಸ್ತ ನೀಡಿದೆ ಎಂದು ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ನಾಗರತ್ನಾ ಮಾರನಬಸರಿ ಹೇಳಿದರು.
ಅವರು ಗದಗ-ಬೆಟಗೇರಿ ಇನ್ನರ್ ವೀಲ್ ಕ್ಲಬ್‌ದಿಂದ ನಗರದ ದತ್ತು ಶಾಲೆ ಸಹಿಪ್ರಾಕ ಗಂ ಶಾಲೆ ನಂ. 12ರಲ್ಲಿ ಮಕ್ಕಳಿಗೆ ಕಲಿಕಾ ಸಾಮಗ್ರಿ ವಿತರಿಸಿ ಮಾತನಾಡಿ, ಮಕ್ಕಳಿಗೆ ಬದುಕು. ಚಿಕ್ಕ ವಯಸ್ಸಿನಲ್ಲಿ ಉತ್ತಮ ಬೆಳವಣಿಗೆ ಅವಶ್ಯ ಹೀಗಾಗಿ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಸಹಾಯಕ್ಕೆ ಇನ್ನರ್ ವೀಲ್ ಕ್ಲಬ್ ಸದಾ ಸಿದ್ಧ ಎಂದರು.ಕ್ಲಬ್ ಸಿಎಲ್‌ಸಿಸಿ ಸುಮಾ ಪಾಟೀಲ ಮಾತನಾಡಿ, ಸರ್ಕಾರಿ ಶಾಲೆಗಳ ದತ್ತು ಅನ್ವಯ ಶಾಲೆಗೆ ನೀರಿನ ಬಾಟಲ್, ಮಕ್ಕಳಿಗೆ ಕುರ್ಚಿ-ಟೇಬಲ್, ಲೈಬ್ರರಿಗೆ ಬುಕ್ ಸ್ಟ್ಯಾಂಡ್ ಪುಸ್ತಕಗಳು, ಎಲ್ಲ ಕ್ರೀಡಾ ಸಾಮಗ್ರಿ ವಿತರಿಸಿದ್ದು ಮುಂದೆಯೂ ಈ ಪ್ರಕ್ರಿಯೆ ಮುಂದುವರಿಯಲಿದೆ ಎಂದರು.
ಮಕ್ಕಳಿಗೆ ಕಲಿಕಾ ಸಾಮಗ್ರಿಗಳ ಪ್ರಾಯೋಜಕತ್ವ ಕ್ಲಬ್‌ನ ಸದಸ್ಯರಾದ ಸರೋಜಾದೇವಿ ಆಲೂರ, ಕಮಲಾ ಭೂಮಾ, ಶಾಂತಾ ಗೌಡರ ವಹಿಸಿಕೊಂಡಿದ್ದರು.ಪಿಡಿಸಿ ಪ್ರೇಮಾ ಗುಳಗೌಡರ, ಕಾರ್ಯದರ್ಶಿ ವೀಣಾ ತಿರ್ಲಾಪೂರ, ಪುಷ್ಪಾ ಭಂಡಾರಿ, ಶಾಲಾ ಮುಖ್ಯೋಪಾಧ್ಯಾಯ ಎಚ್.ಆರ್. ಕೋಣಿಮನಿ, ಕೆ.ಎಸ್. ಬೇಲೇರಿ, ಐ.ಎಚ್.ಬಳಬಟ್ಟಿ, ಎಸ್.ಬಿ. ಮುಳಗುಂದ, ಎಸ್.ಬಿ. ಕನಿಕೆ, ಚಾಮರಾಜ ಹುಡೇದ, ಎಂ.ಕೆ. ಹುಯಿಲಗೋಳ, ಎಸ್.ವಿ. ವಕ್ಕಳದ, ಜಗದೀಶ ಶೀಲವಂತರ, ಎ.ಎಂ. ಕೆಂಚರೆಡ್ಡಿಯವರ, ವಿ.ಜಿ. ಪಾಟೀಲ, ಎಂ.ಎಸ್. ಬಸರಣ್ಣವರ, ಎಸ್.ಬಿ. ದೊಡ್ಡಮನಿ, ಎಸ್.ಟಿ. ಲಮಾಣಿ ಮುಂತಾದವರಿದ್ದರು.