ಸಾರಾಂಶ
ಚಿನ್ನದಗಣಿ ಕಂಪನಿಯು ಅಭಿವೃದ್ಧಿ ಕಾಣಬೇಕಾದರೆ ಕಂಪನಿಯ ಕಾರ್ಮಿಕರು ಚಿನ್ನದ ಅದಿರು ಉತ್ಪಾದನೆ ಹೆಚ್ಚಳ ಮಾಡುವಲ್ಲಿ ಆಡಳಿತವರ್ಗದೊಂದಿಗೆ ಕೈಜೋಡಿಸಬೇಕಾಗಿದೆ ಎಂದು ಉಪಪ್ರಧಾನ ವ್ಯವಸ್ಥಾಪಕ(ತಾಂತ್ರಿಕ) ಸೈಫುಲ್ಲಾ ಖಾನ್ ಹೇಳಿದರು.
ಕನ್ನಡಪ್ರಭ ವಾರ್ತೆ ಲಿಂಗಸುಗೂರು
ಚಿನ್ನದಗಣಿ ಕಂಪನಿಯು ಅಭಿವೃದ್ಧಿ ಕಾಣಬೇಕಾದರೆ ಕಂಪನಿಯ ಕಾರ್ಮಿಕರು ಚಿನ್ನದ ಅದಿರು ಉತ್ಪಾದನೆ ಹೆಚ್ಚಳ ಮಾಡುವಲ್ಲಿ ಆಡಳಿತವರ್ಗದೊಂದಿಗೆ ಕೈಜೋಡಿಸಬೇಕಾಗಿದೆ ಎಂದು ಉಪಪ್ರಧಾನ ವ್ಯವಸ್ಥಾಪಕ(ತಾಂತ್ರಿಕ) ಸೈಫುಲ್ಲಾ ಖಾನ್ ಹೇಳಿದರು.ಹಟ್ಟಿ ಚಿನ್ನದ ಗಣಿ ಕಂಪನಿ ಆಸ್ಪತ್ರೆಯಲ್ಲಿ ಆಯೋಜಿಸಲಾಗಿದ್ದ 78ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ಮಿಕರು ಪ್ರಾಣದ ಹಂಗು ತೊರೆದು ಶ್ರಮ ವಹಿಸಿದ ಪರಿಣಾಮ ಇಂದು ಕಂಪನಿ ಈ ಮಟ್ಟಕ್ಕೆ ಅಭಿವೃದ್ಧಿ ಕಂಡಿದೆ ಎಂದರು.ಕಾರ್ಮಿಕ ಸಂಘದ ಮುಖಂಡರಾದ ಶಾಂತಪ್ಪ ಅನ್ವರಿ, ಚಂದ್ರಶೇಖರ.ಬಿ, ಮೈನುದ್ದೀನ್, ವೈದ್ಯರಾದ ಡಾ. ರವೀಂದ್ರ ಮಾವಿನಕಟ್ಟಿ, ವಸಂತಕುಮಾರ ಹುಡೇದಮನಿ, ವ್ಯವಸ್ಥಾಪಕ(ಮಾಸ) ಜಗನ್ಮೋಹನ್ ಮಾತನಾಡಿದರು.
ಇದೇ ವೇಳೆ ಕೆಲಸದ ವೇಳೆಯಲ್ಲಿ ಪ್ರಾಣ ಕಳೆದುಕೊಂಡ ಕಾರ್ಮಿಕರ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು. ನಂತರ ಕಂಪನಿ ಆಸ್ಪತ್ರೆಯ ಒಳರೋಗಿಗಳಿಗೆ ಹಾಲು, ಬ್ರೆಡ್, ಹಣ್ಣು ವಿತರಿಸಲಾಯಿತು.ಉಪಪ್ರಧಾನ ವ್ಯವಸ್ಥಾಪಕಿ(ಲೋಹ) ವಿಧಾತ್ರಿ, ಉಪ ವ್ಯವಸ್ಥಾಪಕ(ಮಾಸ) ಸುರೇಶ.ಆರ್.ಸಿ, ವ್ಯವಸ್ಥಾಪಕ(ಹಣಕಾಸು)ಪ್ರಭುನಾಥ, ಪರಿಸರ ಇಲಾಖೆಯ ರಾಘವ್, ಕಾರ್ಮಿಕ ಸಂಘದ ತಿಪ್ಪಣ್ಣ ಮಾಚನೂರು ಸೇರಿದಂತೆ ಅನೇಕರು ಇದ್ದರು.