ಬಯಲು ಶೌಚ ಮುಕ್ತ ಗ್ರಾಮವನ್ನಾಗಿಸಲು ಸಹಕರಿಸಿ: ತಿಮ್ಮಾಪೂರ

| Published : Jun 29 2025, 01:32 AM IST

ಸಾರಾಂಶ

ಲೋಕಾಪುರ ಸಮೀಪದ ನಿಂಗಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ನೂತನವಾಗಿ ಜೆ.ಕೆ. ಸಿಮೆಂಟ್ಸ್ ಮುದ್ದಾಪುರ ಅವರ ಸಿ.ಎಸ್.ಆರ್. ಅನುದಾನದಲ್ಲಿ ನಿರ್ಮಿಸಿರುವ ಸಾರ್ವಜನಿಕ ಶೌಚಾಲಯವನ್ನು ಜಿಲ್ಲಾ ಉಸ್ತುವಾರಿ ಹಾಗೂ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪೂರ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಲೋಕಾಪುರ

ಸಮೀಪದ ನಿಂಗಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ನೂತನವಾಗಿ ಜೆ.ಕೆ. ಸಿಮೆಂಟ್ಸ್ ಮುದ್ದಾಪುರ ಅವರ ಸಿ.ಎಸ್.ಆರ್. ಅನುದಾನದಲ್ಲಿ ನಿರ್ಮಿಸಿರುವ ಸಾರ್ವಜನಿಕ ಶೌಚಾಲಯವನ್ನು ಜಿಲ್ಲಾ ಉಸ್ತುವಾರಿ ಹಾಗೂ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪೂರ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ಗ್ರಾಮಗಳಲ್ಲಿ ಶುಚಿತ್ವ ಕಾಪಾಡುವ ದೃಷ್ಟಿಯಲ್ಲಿ ಮತ್ತು ಸಾರ್ವಜನಿಕರಿಗೆ ಅನುಕೂಲವಾಗುವಂತೆ ನಿಂಗಾಪುರ ಗ್ರಾಮದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸಲಾಗಿದೆ. ಅಲ್ಲದೆ, ಬಯಲು ಮುಕ್ತ ಶೌಚಾಲಯ ವ್ಯವಸ್ಥೆಗೆ ಗ್ರಾಮ ಪಂಚಾಯತಿಯ ಎಲ್ಲಾ ವಾರ್ಡುಗಳ ಸಾರ್ವಜನಿಕರು ತಮ್ಮ ತಮ್ಮ ಮನೆಗಳಲ್ಲಿ ಶೌಚಾಲಯ ನಿರ್ಮಿಸಿಕೊಳ್ಳುವ ಮೂಲಕ ಗ್ರಾಪಂ, ಜೆ.ಕೆ.ಸಿಮೆಂಟ್ ಇವರು ನಿರ್ಮಿಸಿರುವ ಸಹಕಾರ ನೀಡುವ ಸವಲತ್ತು ಪಡೆದುಕೊಂಡು ಶೌಚಾಲಯಗಳನ್ನು ನಿರ್ಮಿಇಸಿ ಬಯಲು ಶೌಚ ಮುಕ್ತ ಗ್ರಾಮವನ್ನಾಗಿಸಲು ಸಾರ್ವಜನಿಕರು ಸಹಕರಿಸಬೇಕು ಎಂದು ಹೇಳಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕಿವಡಿ ಮಾತನಾಡಿ, ನಮ್ಮ ಗ್ರಾಮಕ್ಕೆ ಸಾರ್ವಜನಿಕ ಶೌಚಾಲಯಕ್ಕೆ ಅನುದಾನ ನೀಡಿದ ಜೆ.ಕೆ.ಸಿಮೆಂಟ್ಸ್‌ ಎಲ್ಲ ಸಿಬ್ಬಂದಿಗೆ ಧನ್ಯವಾದ ಹೇಳಿದರು. ₹೧೩.೫೦ ಲಕ್ಷಗಳಲ್ಲಿ ಶೌಚಾಲಯ ನಿರ್ಮಿಸಲಾಗಿದೆ. ಸಾರ್ವಜನಿಕರು ಅಶುಚಿತ್ವಗೊಳಿಸದೇ ಶುಚಿತ್ವ ಕಾಪಾಡಬೇಕು, ಸಾರ್ವಜನಿಕರು ಏನೇ ಸಮಸ್ಯೆ ಬಂದರು ಸಚಿವರನ್ನು ಖುದ್ದಾಗಿ ಸಂಪರ್ಕಿಸಿ ತಮ್ಮ ಅಹವಾಲು ತಿಳಿಸಿದರೆ ತಕ್ಷಣವೇ ಪರಿಹರಿಸಲು ಕ್ರಮವಹಿಸಲಾಗುವುದು ಎಂದ ಅವರು ಗ್ರಾಮದಲ್ಲಿ ಏನೇ ಅಭಿವೃದ್ಧಿ ನಡೆದರೂ ಗ್ರಾಮಸ್ಥರು ಸಹಕರಿಸಬೇಕು ಎಂದು ಹೇಳಿದರು.

ಇದೇ ವೇಳೆ ₹೩೦ ಲಕ್ಷ ಅನುದಾನದಲ್ಲಿ ಬಾಳೇಶ್ವರ ದೇವಸ್ಥಾನ ಸಮುದಾಯ ಭವನ ನಿರ್ಮಾಣ, ₹ ೧೦ ಲಕ್ಷ ವೆಚ್ಚದಲ್ಲಿ ಸದಾಶಿವ ಮಠದ ಸಮುದಾಯ ಭವನ ನಿರ್ಮಾಣ, ₹10 ಲಕ್ಷ ವೆಚ್ಚದಲ್ಲಿ ಮುಸ್ಲಿಂ ಸಮಾಜದ ಶಾದಿ ಮಹಲ್ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಸಚಿವರು ಭೂಮಿಪೂಜೆ ನೇರವೇರಿಸಿ, ಸಾರ್ವಜನಿಕರಿಂದ ಬಂದ ಅಹವಾಲು ಸ್ವೀಕರಿಸಿದರು. ಸ್ಥಳದಲ್ಲೇ ಸಾರ್ವಜನಿಕರ ಕುಂದುಕೊರತೆಗಳ ಬಗ್ಗೆ ಅಧಿಕಾರಿಗಳಿಗೆ ಪರಿಹರಿಸಲು ಸೂಚಿಸಿದರು. ಗ್ರಾಮಸ್ಥರಾದ ಸಂಜು ನಾಯಕ, ನಾಗಪ್ಪ ಮಾನ್ನೊಮ್ಮೆ, ಭೀಮಶಿ ಕೆಂಚರಡ್ಡಿ, ಜಿಲ್ಲಾ ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಉಪಾಧ್ಯಕ್ಷ ರಫೀಕ್‌ ಭೈರಕದಾರ ಎಪಿಎಂಸಿ ನಿರ್ದೇಶಕ ಪಾಂಡುರಂಗ ಹೂವನ್ನವರ, ಸಿ.ಜಿ. ಕಮತಗಿ, ಪ್ರಕಾಶ ಮುಳ್ಳೂರ, ದುಂಡಪ್ಪ ಹೊರಡ್ಡಿ, ವೆಂಕಣ್ಣ ಹುಣಶಿಕಟ್ಟಿ, ಗ್ರಾಪಂ ಅಧ್ಯಕ್ಷ ಇಂದ್ರವ್ವ ಮಾದರ, ವೆಂಕಣ್ಣ ನಾಯಕ, ಮಹಮ್ಮದ್‌ ಸರಕಾವಸ, ಭೀಮನಗೌಡ ಪಾಟೀಲ, ರಫೀಕ್‌ ಗುಳೆದಗುಡ್ಡ, ಬಾಳು ದಳವಾಯಿ, ಸೈಲೇಶ ಹಂಪಿಹೊಳಿ, ಮಲ್ಲಪ್ಪ ಬದ್ನಿಕಾಯಿ, ತಾಪಂ ಇಒ ಉಮೇಶ ಸಿದ್ನಾಳ, ಪಿಡಬ್ಲೂಡಿ ಎಂಜಿನಿಯರ್‌ಗಳಾದ ಚನ್ನಬಸವ ಮಾಚನೂರ, ವಿನೋದ ಸಂಕೆನ್ನವರ, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಾದ ಸುಭಾಸ ಗೋಳಶೆಟ್ಟಿ, ವಿವೇಕ ಬಿರಾದಾರ, ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು, ನಿಂಗಾಪುರ ಗ್ರಾಮಸ್ಥರು ಇದ್ದರು.