ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಲು ಸಹಕರಿಸಿ: ಕಾರಜೋಳ

| Published : Apr 18 2024, 02:23 AM IST

ಸಾರಾಂಶ

ಕೃಷಿ ಕಾರ್ಮಿಕ, ರೈತಾಪಿಗಳ ಪ್ರಗತಿ ಹಾಗೂ ದೇಶದ ಸುಭದ್ರತೆಗಾಗಿ ಮತ್ತೆ ನರೇಂದ್ರ ಮೋದಿ ಪ್ರಧಾನಿಯಾಗಲು ಸಹಕರಿಸುವಂತೆ ಚಿತ್ರದುರ್ಗ ಲೋಕಸಭೆ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಗೋವಿಂದ ಕಾರಜೋಳ ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಪಾವಗಡಕೃಷಿ ಕಾರ್ಮಿಕ, ರೈತಾಪಿಗಳ ಪ್ರಗತಿ ಹಾಗೂ ದೇಶದ ಸುಭದ್ರತೆಗಾಗಿ ಮತ್ತೆ ನರೇಂದ್ರ ಮೋದಿ ಪ್ರಧಾನಿಯಾಗಲು ಸಹಕರಿಸುವಂತೆ ಚಿತ್ರದುರ್ಗ ಲೋಕಸಭೆ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಗೋವಿಂದ ಕಾರಜೋಳ ಮನವಿ ಮಾಡಿದರು.

ಬುಧವಾರ ಲಿಂಗದಹಳ್ಳಿ ಗ್ರಾಮದಲ್ಲಿ ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಹಾಗೂ ಎನ್‌.ತಿಮ್ಮಾರೆಡ್ಡಿ, ಜೆಡಿಎಸ್ ಜಿಲ್ಲಾಧ್ಯಕ್ಷ ಆರ್‌.ಸಿ.ಅಂಜಿನಪ್ಪ, ಬಿಜೆಪಿ ತಾಲೂಕು ಅಧ್ಯಕ್ಷ ರಂಗಣ್ಣಗೌಡ ನೇತೃತ್ವದಲ್ಲಿ ಪ್ರಚಾರಕ್ಕೆ ಚಾಲನೆ ನೀಡಿ ಮಾತನಾಡಿದರು.

ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಮಾಜಿ ಸಿಎಂ ಕುಮಾರಸ್ವಾಮಿಯ ಅವರು ನರೇಂದ್ರ ಮೋದಿ ಈ ದೇಶದ ಪ್ರಧಾನಿಯಾಗಬೇಕೆಂಬ ಅಭಿಲಾಷೆ ಹೊಂದಿದ್ದಾರೆ. ರಾಜ್ಯ ಹಾಗೂ ದೇಶದ ಪ್ರಗತಿಗೆ ಬಿಜೆಪಿ ಅಧಿಕಾರಕ್ಕೆ ಬರಬೇಕು.ರಾಜ್ಯದ 28 ಕ್ಷೇತ್ರಗಳ ಪೈಕಿ 25 ಕ್ಷೇತ್ರಗಳಲ್ಲಿ ಮೈತ್ರಿಯ ಬಿಜೆಪಿ ಅಭ್ಯರ್ಥಿಗಳ ಗೆಲುವು ಖಚಿತ. ಮೋದಿ ಮತ್ತೆ ಪ್ರಧಾನಿಯಾಗಲು ಶ್ರಮಿಸುವಂತೆ ಜೆಡಿಎಸ್‌ ಹಾಗೂ ಬಿಜೆಪಿ ಕಾರ್ಯಕರ್ತರಿಗೆ ಕರೆ ನೀಡಿದರು. ಭದ್ರಾ ಮೇಲ್ದಂಡೆ ಮತ್ತು ಎತ್ತಿನಹೊಳೆ ಯೋಜನೆಗಳ ಪ್ರಗತಿ ಹಾಗೂ ರೈಲ್ವೆ ಯೋಜನೆ ಅನುಷ್ಠಾನಕ್ಕೆ ಬದ್ಧನಿದ್ದೇನೆ. ತಾಲೂಕಿನ ಪ್ರಗತಿಗೆ ವಿಶೇಷ ಆದ್ಯತೆ ನೀಡಲಿದ್ದೇನೆ. ಹೆಚ್ಚು ಮತಗಳಿಂದ ತಮ್ಮನ್ನು ಗೆಲ್ಲಿಸಿ ಮೋದಿ ಕೈ ಬಲಪಡಿಸಿ ಎಂದರು.

ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಮಾತನಾಡಿ, ಜನಪರ ಆಡಳಿತಕ್ಕೆ ಮೋದಿ ಮತ್ತೆ ಪ್ರಧಾನಿಯಾಗಬೇಕು. ಅದಕ್ಕಾಗಿ ಮೈತ್ರಿ ಅಭ್ಯರ್ಥಿ ಗೋವಿಂದ ಕಾರಜೋಳರನ್ನು ಗೆಲ್ಲಿಸಬೇಕು. ಕೇಂದ್ರ ಸರ್ಕಾರದ ಸಾಧನೆ ಹಾಗೂ ಕಾಂಗ್ರೆಸ್‌ ಸರ್ಕಾರದ ವೈಫಲ್ಯ ಕುರಿತು ಮನವರಿಕೆ ಮಾಡಿ ಎಂದರು.

ರಾಜ್ಯ ಜೆಡಿಎಸ್‌ ಘಟಕದ ಉಪಾಧ್ಯಕ್ಷ ಎನ್‌.ತಿಮ್ಮಾರೆಡ್ಡಿ ಮಾತನಾಡಿ, ಮಾಜಿ ಡಿಸಿಎಂ, ಮೈತ್ರಿ ಅಭ್ಯರ್ಥಿ ಕಾರಜೋಳ ಅವರು ಸರಳ ವ್ಯಕ್ತಿ. ಜನಪರ ಕಾಳಜಿಯುಳ್ಳವರು. ಅವರನ್ನು ಹೆಚ್ಚು ಮತಗಳಿಂದ ಗೆಲ್ಲಿಸುವಂತೆ ಕರೆ ನೀಡಿದರು.

ಜಿಲ್ಲಾ ಜೆಡಿಎಸ್‌ ಅಧ್ಯಕ್ಷ ಆರ್.ಸಿ. ಅಂಜಿನಪ್ಪ ಮಾತನಾಡಿ, ತಾಲೂಕು ಬಿಜೆಪಿ ಅಧ್ಯಕ್ಷ ರಂಗಣ್ಣಗೌಡ, ತಾಲೂಕು ಜೆಡಿಎಸ್‌ ಅಧ್ಯಕ್ಷ ಎನ್‌.ಎ.ಈರಣ್ಣ ಹಾಗೂ ಜೆಡಿಎಸ್‌ ಪ್ರಧಾನ ಕಾರ್ಯದರ್ಶಿ ಸೊಗಡು ವೆಂಕಟೇಶ್‌ ಮಾತನಾಡಿದರು.

ಅರಸೀಕೆರೆ ಕೆ.ಟಿ.ಹಳ್ಳಿ, ಮಂಗಳವಾಡ, ಸಿ.ಕೆ.ಪುರ, ಬ್ಯಾಡನೂರು, ಗುಂಡರ್ಲಹಳ್ಳಿ, ನಲಿಗಾನಹಳ್ಳಿ, ರಾಜವಂತಿ, ಕೃಷ್ಣಾಪುರ ಹಾಗೂ ವೆಂಕಟಾಪುರ ದೊಮ್ಮತಮರಿ, ವೈ.ಎನ್‌.ಹೊಸಕೋಟೆ, ಮರಿದಾಸನಹಳ್ಳಿ, ದೊಡ್ಡಹಳ್ಳಿ, ರಂಗಸಮುದ್ರ ರೋಡ್‌ ಶೋ ಮೂಲಕ ಮತಯಾಚಿಸಲಾಯಿತು.

ತಾಲೂಕು ಜೆಡಿಎಸ್‌ ಮಾಜಿ ಅಧ್ಯಕ್ಷ ಬಲರಾಮರೆಡ್ಡಿ,ಹಿರಿಯ ಮುಖಂಡರಾದ ರಾಜಶೇಖರಪ್ಪ, ಡಾ.ಜಿ.ವೆಂಕಟರಾಮಯ್ಯ, ರವಿಶಂಕರನಾಯ್ಕ್‌, ಬಿಜೆಪಿಯ ಜಿ.ಟಿ.ಗಿರೀಶ್‌, ಜಿಲ್ಲಾ ಘಟಕದ ರವಿ, ಸೂರ್ಯನಾರಾಯಣ, ತಿಪ್ಪೇಸ್ವಾಮಿ, ಜೆಡಿಎಸ್‌ನ ಅಕ್ಕಲಪ್ಪನಾಯ್ಡ್‌, ಸಿಂಗರೆಡ್ಡಿಹಳ್ಳಿ ಪುರುಷೋತಮ್‌, ಜಾಲೋಡು ಶಿವಲಿಂಗಪ್ಪ ಸೇರಿ ಇತರರಿದ್ದರು.