ತಾಲೂಕಿನ ಜನರಿಗೆ ಸದಾ ಸಹಾಯ ಸಹಕಾರ ಮಾಡುತ್ತ ಬರುತ್ತಿರುವ ಅಧ್ಯಕ್ಷ ಮಾನಂ ಶಶಿಕಿರಣ್ ನೇತೃತ್ವದ ಹೆಲ್ಪ್ ಸೊಸೈಟಿ ಸಂಸ್ಥೆ ಕಾರ್ಯ ಶ್ಲಾಘನೀಯ ಎಂದು ಕೆ.ಟಿ.ಹಳ್ಳಿ ವ್ಯವಸಾಯ ಸೇವಾ ಸಹಕಾರ ಸಂಘದ ನಿರ್ದೇಶಕ ಲೋಕೇಶ್ ಪಾಳೇಗಾರ ಮೆಚ್ವುಗೆ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಪಾವಗಡ
ತಾಲೂಕಿನ ಜನರಿಗೆ ಸದಾ ಸಹಾಯ ಸಹಕಾರ ಮಾಡುತ್ತ ಬರುತ್ತಿರುವ ಅಧ್ಯಕ್ಷ ಮಾನಂ ಶಶಿಕಿರಣ್ ನೇತೃತ್ವದ ಹೆಲ್ಪ್ ಸೊಸೈಟಿ ಸಂಸ್ಥೆ ಕಾರ್ಯ ಶ್ಲಾಘನೀಯ ಎಂದು ಕೆ.ಟಿ.ಹಳ್ಳಿ ವ್ಯವಸಾಯ ಸೇವಾ ಸಹಕಾರ ಸಂಘದ ನಿರ್ದೇಶಕ ಲೋಕೇಶ್ ಪಾಳೇಗಾರ ಮೆಚ್ವುಗೆ ವ್ಯಕ್ತಪಡಿಸಿದರು.ಹೆಲ್ಪ್ ಸೊಸೈಟಿ ವತಿಯಿಂದ ಬುಧವಾರ ತಾಲೂಕಿನ ಕರಿಯಮ್ಮನಪಾಳ್ಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಶುದ್ಧ ನೀರಿನ ಘಟಕ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕುಡಿಯುವ ನೀರಿನಲ್ಲಿ ಫ್ಲೋರೇಡ್ ಅಂಶ ಜಾಸ್ತಿ ಇದ್ದು ತಾಲೂಕಿನ ಸಾವಿರಾರು ಜನತೆ ಮಕ್ಕಳು ವೃದ್ಧರು ಅಂಗವಿಕಲತೆಗೆ ತುತ್ತಾಗುತ್ತಿದ್ದಾರೆ. ಸರ್ಕಾರಿ ಶಾಲೆಗಳಿಗೆ ನೀಡಿ ಫ್ಲೋರೈಡ್ ಮುಕ್ತ ಶುದ್ಧ ನೀರು ಮಕ್ಕಳು ಕುಡಿಯಲು ಕಲ್ಪಿಸಲು ಮುಂದಾಗಿರುವುದು ಮಾದರಿಯಾಗಿದೆ ಎಂದರು. ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ ಶಶಿ ಕಿರಣ್ ಮಾತನಾಡಿ ಭಗವಂತನ ಕೃಪೆಯಿಂದ ತಾಲೂಕಿನ ಎಲ್ಲಾ ಕ್ಷೇತ್ರಗಳ ಅಭಿವೃದ್ಧಿಗೆ ಹೆಲ್ಪ್ ಸೊಸೈಟಿ ವತಿಯಿಂದ ಕೈಲಾದ ಸಹಾಯ ಸಹಕಾರ ಮಾಡಲಾಗುತ್ತಿದೆ ಎಂದರು. ಈ ವೇಳೆ ಯುವ ಮುಖಂಡ ಓಂಕಾರನಾಯಕ, ಅವಿಲೇನಿ ನರೇಶ್,ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷೆ ಆದಿಲಕ್ಷ್ಮೀ ಓಂಕಾರ ನಾಯಕ, ಮುಖ್ಯ ಶಿಕ್ಷಕಿ ಭಾರತಿ ಪಾಳೇಗಾರ್, ಬೇಕರಿ ನಾಗರಾಜ್, ಅಂಜನನಾಯಕ,ಕೆ .ಗೋಪಾಲ್ . ರಮೇಶ್, ಅಂಜನಾಯಕ ಮಹಾಲಿಂಗ ನಾಯಕ, ಧನು ಹನುಮಂತರಾಯಪ್ಪ, ಪದ್ಮ, ಕಮಲಾಕ್ಷಿ, ರಾಜಕುಮಾರ ಅಂಗನವಾಡಿ ಕಾರ್ಯಕರ್ತೆ ರಂಗಮ್ಮ ಹಾಗೂ ಅಡುಗೆ ಸಿಬ್ಬಂದಿ ಹಾಗೂ ಶಾಲಾ ಮಕ್ಕಳು ಇದ್ದರು.