ಸಾರಾಂಶ
- ಸರ್ಕಾರಕ್ಕೆ ಜಿಲ್ಲಾ ಅನುದಾನಿತ ನೌಕರರ ವೇದಿಕೆ ಒತ್ತಾಯ - - -
ಕನ್ನಡಪ್ರಭ ವಾರ್ತೆ ದಾವಣಗೆರೆ ರಾಜ್ಯದಲ್ಲಿ 2006ರ ಪೂರ್ವ ನೇಮಕವಾದ ಅನುದಾನಿತ ನೌಕರರಿಗೆ ಹಳೆಯ ಪಿಂಚಣಿ ಜಾರಿಗೊಳಿಸಿ, ಮಾನವೀಯತೆ ಮೆರೆಯುವಂತೆ ಜಿಲ್ಲಾ ಅನುದಾನಿತ ನೌಕರರ ವೇದಿಕೆ ಮತ್ತು ಒಕ್ಕೂಟ ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿ, ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಮನವಿ ಸಲ್ಲಿಸಿದರು.ವೇದಿಕೆ ಪದಾಧಿಕಾರಿಗಳು ಮಾತನಾಡಿ, ರಾಜ್ಯದಲ್ಲಿ 2006ರ ಪೂರ್ವದಲ್ಲಿ ನೇಮಕವಾದ ಅನುದಾನಿತ ನೌಕರರಿಗೆ ಹಳೆಯ ಪಿಂಚಣಿ ಜಾರಿಗೊಳಿಸಬೇಕು. ರಾಜ್ಯಾದ್ಯಂತ ಅನುದಾನಿತ ಶಾಲಾ-ಕಾಲೇಜುಗಳಲ್ಲಿ ಮಕ್ಕಳಿಗೆ ಪಾಠ ಮಾಡಿ, ನಿವೃತ್ತಿ ನಂತರ ಪಿಂಚಣಿ ಇಲ್ಲದೇ ಜೀವನ ನಡೆಸುತ್ತಿರುವ 2006ರ ಪೂರ್ವ ನೇಮಕವಾಗಿ, 2006ರ ನಂತರ ಅನುದಾನಕ್ಕೊಳಪಟ್ಟ ಕಾರಣಕ್ಕೆ ಪಿಂಚಣಿ ವಂಚಿತರ ಬಗ್ಗೆ ಸರ್ಕಾರ ಮಾನವೀಯವಾಗಿ ಸ್ಪಂದಿಸಲಿ ಎಂದರು.
ಪಿಂಚಣಿ ವಂಚಿತರಾಗಿರುವ ನಿವೃತ್ತ ಹಾಗೂ ನಿಧನರಾದ ಹಾಗೂ ಕೆಲವೇ ಜನರು ಸೇವೆಯಲ್ಲಿರುವ ಇಂತಹ, ಹಳೆಯ ಪಿಂಚಣಿಗೆ ಅರ್ಹವಾಗಿರುವ ಅನುದಾನಿತ ನೌಕರರಿಗೆ ಹಳೆ ಪಿಂಚಣಿ ನೀಡುವ ಮೂಲಕ ಪಿಂಚಣಿ ವಂಚಿತ ಅನುದಾನಿತ ನೌಕರರ ಬಾಳಿಗೆ ಸರ್ಕಾರ ಆಸರೆಯಾಗಬೇಕು. ದಿನದಿನಕ್ಕೂ ಪಿಂಚಣಿ ವಂಚಿತರ ಜೀವನ ಕಷ್ಟವಾಗುತ್ತಿದೆ. ಮುಖ್ಯಮಂತ್ರಿ ಅವರು ನಮ್ಮ ಬೇಡಿಕೆಗೆ ಪ್ರಥಮಾದ್ಯತೆ ಮೇಲೆ ಸ್ಪಂದಿಸಬೇಕು ಎಂದು ಆಗ್ರಹಿಸಿದರು.ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಶಿಕ್ಷಣ ಸಚಿವ ಮಧು ಬಂಗಾರಪ್ಪ ಸೇರಿದಂತೆ ರಾಜ್ಯ ಸಚಿವ ಸಂಪುಟದ ಎಲ್ಲ ಸದಸ್ಯರು, ಎಲ್ಲ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರಿಗೂ ರಾಜ್ಯದ ಅನುದಾನಿತ ಶಾಲಾ-ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದ, ನಿವೃತ್ತಿ ನೌಕರ ಪಿಂಚಣಿ ಇಲ್ಲದ ಜೀವನ ಸಾಗಿಸುತ್ತಿರುವ 2006ರ ಪೂರ್ವ ನೇಮಕವಾಗಿ ಅನುದಾನಕ್ಕೊಳಪಟ್ಟ ಕಾರಣಕ್ಕೆ ಪಿಂಚಣಿ ವಂಚಿತರು, ಮೃತಪಟ್ಟ ನೌಕರರು ಹಾಗೂ ಸೇವೆಯಲ್ಲಿರುವ ಕೆಲವೇ ನೌಕರರ ಬೇಡಿಕೆಯನ್ನು ಸರ್ಕಾರ ಈಡೇರಿಸಲಿ ಎಂದರು.
ಬೇಡಿಕೆಗಳ ಮನವಿಯನ್ನು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿ ಮುಖಾಂತರ ಸರ್ಕಾರಕ್ಕೆ ಸಲ್ಲಿಸಲಾಯಿತು. ವೇದಿಕೆ ಪದಾಧಿಕಾರಿಗಳಾದ ಪ್ರದೀಪಕುಮಾರ, ಎಸ್.ಜಿ.ನಾಗರಾಜ, ನಿವೃತ್ತ ಪ್ರಾಚಾರ್ಯ ಜಿ.ಬಿ.ಹಾವೇರಿ, ದಯಾನಂದ, ಮಲ್ಲೇಶಪ್ಪ, ನವೀನ ಪಾಟೀಲ ಇತರು ಇದ್ದರು.- - -
-16ಕೆಡಿವಿಜಿ1, 2:ದಾವಣಗೆರೆ ಡಿಸಿ ಕಚೇರಿ ಬಳಿ ಗುರುವಾರ 2006ರ ಪೂರ್ವ ನೇಮಕವಾದ ಅನುದಾನಿತ ನೌಕರರಿಗೆ ಹಳೆಯ ಪಿಂಚಣಿ ಜಾರಿಗಾಗಿ ಜಿಲ್ಲಾ ಅನುದಾನಿತ ನೌಕರರ ವೇದಿಕೆ ಮತ್ತು ಒಕ್ಕೂಟದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.