ವಿಶೇಷಚೇತನರನ್ನು ಪ್ರತ್ಯೇಕವಾಗಿ ನೋಡದೆ, ಸಮಾಜದ ಎಲ್ಲರಂತೆ ಪರಿಗಣಿಸಿ, ಅವರಿಗೆ ಸಮಾನ ಅವಕಾಶಗಳನ್ನು ಒದಿಗಸಬೇಕು. ವಿಶೇಷ ಚೇತನರು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಕ್ಷೇತ್ರ ಸಮನ್ವಯಾಧಿಕಾರಿ ಎ.ಆರ್. ಛಬ್ಬಿ ಹೇಳಿದರು.

ಕನ್ನಡಪ್ರಭ ವಾರ್ತೆ ಲೋಕಾಪುರ

ವಿಶೇಷಚೇತನರನ್ನು ಪ್ರತ್ಯೇಕವಾಗಿ ನೋಡದೆ, ಸಮಾಜದ ಎಲ್ಲರಂತೆ ಪರಿಗಣಿಸಿ, ಅವರಿಗೆ ಸಮಾನ ಅವಕಾಶಗಳನ್ನು ಒದಿಗಸಬೇಕು. ವಿಶೇಷ ಚೇತನರು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಕ್ಷೇತ್ರ ಸಮನ್ವಯಾಧಿಕಾರಿ ಎ.ಆರ್. ಛಬ್ಬಿ ಹೇಳಿದರು.

ಪಟ್ಟಣದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ೬ ರಿಂದ ೧೬ ವಯೋಮಾನದ ವಿಶೇಷಚೇತನ ವಿದ್ಯಾರ್ಥಿಗಳಿಗಾಗಿ ಕ್ರೀಡೆ ಹಾಗೂ ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಅಂಗವಿಕಲತೆ ಶಾಪವಲ್ಲ, ಅದೊಂದು ಆಕಸ್ಮಿಕ ಘಟನೆಯಿಂದಾದದ್ದು, ಅಂತಹವರಿಗೆ ಅವಕಾಶ ಕಲ್ಪಿಸಿದರೆ ಅಂತಹವರು ಸಾಮಾನ್ಯರ ಹಾಗೆ ಸಮಾಜದಲ್ಲಿ ಏನನ್ನದರೂ ಸಾಧಿಸಬಹುದು ಎಂದು ಹೇಳಿ, ಸರಕಾರದ ವಿವಿಧ ಯೋಜನೆಗಳ ಬಗ್ಗೆ ವಿವರಿಸಿದರು.

ಶಿಕ್ಷಕ ವಿ.ಎ. ವರ್ಚಗಲ್ ಮಾತನಾಡಿ, ಪಾಲಕರು ಕೀಳರಿಮೆಯಿಂದ ಹೊರಬಂದು ತಮ್ಮ ಮಕ್ಕಳಿಗೆ ಸರಕಾರದ ಯೋಜನೆಗಳೊಂದಿಗೆ ತಾವು ಸಹಕರಿಸಿ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ವಿಶೇಷ ಚೇತನರು ಬದುಕಟ್ಟಿಕೊಳ್ಳಲು ಸಹಕರಿಸಬೇಕೆಂದರು. ಎಸ್.ಎಸ್. ಹೊಸಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಅಂತಾರಾಷ್ಟ್ರೀಯ ವಿಶೇಷ ಚೇತನ ಕ್ರೀಡಾ ವಿಜೇತ ಲೋಕಣ್ಣ ಪರಣ್ಣವರ ಹಾಗೂ ಕಾರ್ಯಕ್ರಮ ಆಯೋಜನೆಗೆ ಸಹಾಯ ಮಾಡಿದ ಪ್ರಕಾಶ ಬೆಳಗಲಿ ಅವರನ್ನು ಇದೇ ವೇಳೆ ಸನ್ಮಾನಿಸಲಾಯಿತು.

ಮುಖ್ಯಶಿಕ್ಷಕ ಬಿ.ವಿ. ಗಂಗಣ್ಣವರ ಅಧ್ಯಕ್ಷತೆ ವಹಿಸಿದ್ದರು. ಎಂ.ಆರ್.ಡಬ್ಲೂ ಎಂ.ಬಿ. ಮುನ್ನೂರ, ವಿ.ಎ. ವರ್ಚಗಲ್, ಪ್ರಕಾಶ ಬೆಳಗಲಿ, ವಿ.ಎಲ್. ಪಾಟೀಲ, ಬಾರಕೇರ, ಬಿ.ಐ.ಆರ್.ಟಿ.ಗಳಾದ ಬಿ.ಎಂ. ಮೇತ್ರಿ, ಎ.ಎಂ. ಕೆಂಭಾವಿ, ಕೆ.ಎಸ್. ಅರಕೇರಿ, ಎಸ್.ಎಸ್. ಹೊಸಮನಿ, ಸುನಂದಾ ಗೋಳಶೆಟ್ಟಿ, ಕೆ.ಎಸ್. ಅರಕೇರಿ ಸ್ವಾಗತಿಸಿ, ಬಿ.ಎಂ. ಮೇತ್ರಿ ನಿರೂಪಿಸಿ ಎ.ಎಂ. ಕೆಂಭಾವಿ ವಂದಿಸಿದರು.