ರಕ್ತದಾನದಿಂದ ರೋಗಿಗಳಿಗೆ ಚಿಕಿತ್ಸೆ ನೀಡಲು ನೆರವು: ಎಚ್.ಎಂ.ಹೇಮಲತಾ

| Published : Jun 04 2024, 12:31 AM IST

ರಕ್ತದಾನದಿಂದ ರೋಗಿಗಳಿಗೆ ಚಿಕಿತ್ಸೆ ನೀಡಲು ನೆರವು: ಎಚ್.ಎಂ.ಹೇಮಲತಾ
Share this Article
  • FB
  • TW
  • Linkdin
  • Email

ಸಾರಾಂಶ

ರಕ್ತದಾನ ಮಾಡಿದರೆ ಮೂರು ತಿಂಗಳ ಒಳಗೆ ರಕ್ತ ಕ್ರೋಢೀಕರಣವಾಗುತ್ತದೆ. 18 ವಯಸ್ಸಿನಿಂದ 65 ವಯಸ್ಸಿನ ವರಗೂ ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡಬಹುದು. ಶುಗರ್, ಬಿಪಿ ಇರುವ ವ್ಯಕ್ತಿಗಳು ಸಹ ರಕ್ತದಾನ ಮಾಡಬಹುದು. ಆದ್ದರಿಂದ ರಕ್ತದಾನ ಮಾಡಿ ನೀವು ಆರೋಗ್ಯ ಕಾಪಾಡಿಕೊಳ್ಳಿ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಶ್ರೇಷ್ಠ ದಾನವಾದ ರಕ್ತದಾನ ಮಾಡುವುದರಿಂದ ಆರೋಗ್ಯ ವೃದ್ಧಿಸುವ ಜೊತೆಗೆ ರಕ್ತಹೀನತೆಯಿಂದ ಬಳಲುತ್ತಿರುವ ರೋಗಿಗಳಿಗೆ ಚಿಕಿತ್ಸೆ ನೀಡಲು ನೆರವಾಗುತ್ತದೆ ಎಂದು ಪ್ರಾಂಶುಪಾಲೆ ಎಚ್.ಎಂ.ಹೇಮಲತಾ ಅಭಿಪ್ರಾಯಪಟ್ಟರು.

ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಮಂಡ್ಯ ಜಿಲ್ಲಾ ಸಾರ್ವಜನಿಕ ಆಸ್ಪತ್ರೆ ಸಹಯೋಗದೊಂದಿಗೆ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿ, ಕೋಟಿ ಕೋಟಿ ಹಣ್ಣವಿದ್ದರೂ ಆರೋಗ್ಯವಿಲ್ಲದಿದ್ದರೆ ಅದು ಶೂನ್ಯ. ಆದ್ದರಿಂದ ಆರೋಗ್ಯವಂತ ಯುವಕರು ಯುವತಿಯರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡುವ ಮೂಲಕ ಆರೋಗ್ಯವಂತ ಸಮಾಜಕ್ಕೆ ಕೈಜೋಡಿಸಬೇಕು ಎಂದರು.

ನಾವೆಲ್ಲರೂ ಸಹಕಾರ, ಸಹಬಾಳ್ವೆಯಿಂದ ಜೀವನ ನಡೆಸುತ್ತಿದ್ದೇವೆ. ಹಾಗೇ ಸಮಾಜದಲ್ಲಿ ಬದುಕುವ ಪ್ರತಿಯೊಬ್ಬರೂ ಆರೋಗ್ಯವನ್ನು ಹಾಳು ಮಾಡಿಕೊಳ್ಳದೇ ಕಾಪಾಡಿಕೊಳ್ಳಬೇಕು. ನಮ್ಮ ಪೂರ್ವಜರು ಹಿಂದಿನ ಕಾಲದಲ್ಲಿ ಬರಿಗಾಲಲ್ಲಿ ನಡೆಯುತ್ತಿದ್ದರು. ಜಮೀನಿನಲ್ಲಿ ದುಡಿಮೆ ಮಾಡುತ್ತಿದ್ದರು ಎಂದರು.

ಈಗಿನ ಯುವಜನರು ಇದರ ಬಗ್ಗೆ ಆಸಕ್ತಿ ಕಡಿಮೆಯಾಗಿರುವುದರಿಂದ ಸಕ್ಕರೆ ಕಾಯಿಲೆ, ರಕ್ತದೊತ್ತಡ ಸೇರಿದಂತೆ ಹಲವು ಕಾಯಿಲೆಗಳಿಗೆ ತುತ್ತಾಗಿ ಬಳಲುತ್ತಿರುವುದನ್ನು ನೋಡುತ್ತಿದ್ದೇವೆ. ಇಂದಿನ ಆಹಾರ ಪದ್ಧತಿ ಬದಲಾವಣೆ ಮಾಡಿಕೊಂಡು ಗುಣಮಟ್ಟದ ಆಹಾರ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳುವಂತೆ ಸಲಹೆ ನೀಡಿದರು.

ಕಾಲೇಜಿನ ಪತ್ರಾಂಕಿತ ವ್ಯವಸ್ಥಾಪಕ ಬಿ.ಎ.ಮಂಜುನಾಥ್ ಮಾತನಾಡಿ, ಕೆಲವರು ರಕ್ತದಾನ ಮಾಡುವುದಕ್ಕೆ ಭಯಪಡುತ್ತಾರೆ. ಭಯಪಡುವ ಅವಶ್ಯಕತೆ ಇಲ್ಲ. ರಕ್ತದಾನ ಮಾಡಿದರೆ ಮೂರು ತಿಂಗಳ ಒಳಗೆ ರಕ್ತ ಕ್ರೋಢೀಕರಣವಾಗುತ್ತದೆ. 18 ವಯಸ್ಸಿನಿಂದ 65 ವಯಸ್ಸಿನ ವರಗೂ ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡಬಹುದು ಎಂದರು.

ಶುಗರ್, ಬಿ ಪಿ ಇರುವ ವ್ಯಕ್ತಿಗಳು ಸಹ ರಕ್ತದಾನ ಮಾಡಬಹುದು. ಆದರೆ, ಅವರಿಗೆ ಮಾತ್ರೆಗಳನ್ನು ಸೇವಿಸಿ ನಾರ್ಮಲ್ ಇದ್ದರೆ ಖಂಡಿತ ರಕ್ತದಾನ ಮಾಡಬಹುದು. ಆದ್ದರಿಂದ ರಕ್ತದಾನ ಮಾಡಿ ನೀವು ಆರೋಗ್ಯ ಕಾಪಾಡಿಕೊಳ್ಳಿ. ಇತರರನ್ನು ಉಳಿಸಿ ಎಂದು ಮನವಿ ಮಾಡಿದರು.

ಈ ವೇಳೆ ಕಾಲೇಜಿನ ಪತ್ರಾಂಕಿತ ವ್ಯವಸ್ಥಾಪಕ ಬಳ್ಳೇಕೆರೆ ಮಂಜುನಾಥ್, ಯುವ ರೆಡ್ ಕ್ರಾಸ್ ಘಟಕದ ಸಂಚಾಲಕ ಗಿರೀಶ.ವಿ, ಸಮಿತಿಯ ಸದಸ್ಯರುಗಳಾದ ಜಯಕೀರ್ತಿ, ರಘು.ಹೆಚ್.ಎನ್, ಮೋಹನ್‌ಕುಮಾರ್.ಎ.ವಿ, ಪುಪ್ಪಲತಾ ವೈ.ಎನ್, ರಾಜೀವ್.ಎಂ.ಪಿ. ಸೇರಿದಂತೆ ಹಲವರು ಉಪಸ್ಥಿತರಿದ್ದರು.