ಮಂಗಳೂರು: ಅಶಕ್ತ ಹಾಗೂ ಬಡ ಮಕ್ಕಳಿಗೆ ನೆರವಾಗುವುದು ಅತ್ಯಂತ ಪುಣ್ಯದ ಕಾರ್ಯವಾಗಿದೆ. ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆ ಇಂತಹ ಮಾನವೀಯ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಮಾಜಕ್ಕೆ ಪ್ರೇರಣಾದಾಯಿಯಾಗಿದೆ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಹೇಳಿದರು.ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆಯ ವತಿಯಿಂದ ಕೊರ್ಡೆಲ್ ಕ್ರಿಕೆಟರ್ಸ್ ಕುಲಶೇಖರ ಸಹಯೋಗದಲ್ಲಿ ಗುಡ್ ಫ್ರೆಂಡ್ಸ್ ಡೇ ಸಾಮಾಜಿಕ ಸೇವಾ ಚಟುವಟಿಕೆಯ ಅಂಗವಾಗಿ ಶುಕ್ರವಾರ ನಗರದ ವೆನ್ಲಾಕ್ ಅಸ್ಪತ್ರೆಯ ಮಕ್ಕಳ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳಿಗೆ ಹಣ್ಣು ಹಂಪಲು, ಪುಸ್ತಕ ಹಾಗೂ ಇತರ ಅವಶ್ಯ ಪರಿಕರಗಳ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬೆಥನಿ ಕನ್ಯಾ ಮಠದ ಭಗಿನಿ ಶುಭಾ ಪ್ರಾರ್ಥನಾ ವಿಧಿ ನೆರವೇರಿಸಿ ಆಶೀರ್ವಚನ ನೀಡಿದರು.ವೆನ್ಲಾಕ್ ಆಸ್ಪತ್ರೆಯ ಜಿಲ್ಲಾ ವೈದ್ಯಾಧಿಕಾರಿ ಡಾ.ಶಿವಪ್ರಕಾಶ್, ಸೈಂಟ್ ತೆರೆಸಾ ಶಾಲೆಯ ಉಪ ಪ್ರಾಂಶುಪಾಲೆ ಸಿ.ವಿದ್ಯಾ, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ, ಮಾಜಿ ಕಾರ್ಪೋರೇಟರ್ ಪದ್ಮನಾಭ ಅಮೀನ್, ಉದ್ಯಮಿ ಸಿಂಥಿಯಾ ಮೊರಾಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಪ್ರಮುಖರಾದ ಅರುಣ್ ಡಿಸೋಜಾ ಉರ್ವ, ಜೂಲಿಯೆಟ್ ಡಿಕುನ್ಹಾ ಉರ್ವಸ್ಟೋರ್, ಪ್ರೀಮಾ ಫೆರ್ನಾಂಡಿಸ್ ಎಕ್ಕೂರು, ಜೂಲಿಯನಾ ಮೊರಾಸ್, ಆಗ್ನೆಸ್ ರೆಬೆಲ್ಲೊ ಮುಂಬೈ, ರಿಯೋ ಮಿನೇಜಸ್, ಓಸ್ವಾಲ್ಡ್ ಡಿಕುನ್ಹ ಬಿಜೈ, ಮಧು ಬಿಜೈ ಕೊರ್ಡೆಲ್ ಕ್ರಿಕೆಟರ್ಸ್ ನವೀನ್ ಫರ್ನಾಂಡಿಸ್, ಪ್ರವೀಣ್ ಫರ್ನಾಂಡಿಸ್, ಜೊನ್ಸಿ ರೇಗೊ, ಫಿಲಿಪ್ ಡಿಸೋಜ, ಸಂದೀಪ್ ಡಿಸೋಜ, ರೊನಾಲ್ಡ್ ಕೊರ್ಡೆಲ್ ಮತ್ತು ರಾಬರ್ಟ್ ಕೊರ್ಡೆಲ್ ಇದ್ದರು.
ವೇದಿಕೆಯ ಸ್ಥಾಪಕ ಸಂಚಾಲಕ ಫ್ರಾಂಕ್ಲಿನ್ ಮೊಂತೆರೊ ಸ್ವಾಗತಿಸಿ, ವಂದಿಸಿದರು. ವೇದಿಕೆಯ ಮಹಿಳಾ ಪ್ರಮುಖ್ ಪ್ರೀತಿ ಮಿನೇಜಸ್ ನಿರೂಪಿಸಿದರು.