ಸಾರಾಂಶ
ಕನ್ನಡಪ್ರಭ ವಾರ್ತೆ ಹುಣಸೂರುಇನ್ನರ್ ವ್ಹೀಲ್ ವಿಶ್ವದ ಅತಿದೊಡ್ಡ ಮಹಿಳಾ ಸ್ವಯಂ ಸೇವಾ ಸರ್ಕಾರೇತರ ಸಂಸ್ಥೆಯಾಗಿದ್ದು, ಸಮಾಜದ ನಿರ್ಗತಿಕ ಮತ್ತು ಹಿಂದುಳಿದ, ದುರ್ಬಲ ವರ್ಗಗಳಿಗೆ ಸಹಾಯ ಮಾಡಲು ಮತ್ತು ಸೇವೆ ಸಲ್ಲಿಸಲು ಶ್ರಮಿಸುತ್ತಿದೆ ಎಂದು ಇನ್ನರ್ ವ್ಹೀಲ್ 318ರ ಜಿಲ್ಲಾಧ್ಯಕ್ಷೆ ಶಬರೀ ಕಡಿದಾಳು ಹೇಳಿದರು.ಪಟ್ಟಣದ ರೋಟರಿ ಭವನದಲ್ಲಿ ಜಿಲ್ಲಾ ಅಧ್ಯಕ್ಷರ ಅಧಿಕೃತ ಭೇಟಿ ನೀಡಿ ಕ್ಲಬ್ ನ ಕಾರ್ಯವೈಕರಿ ಪರಿಶೀಲಿಸಿದ ನಂತರ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣ, ಆರೋಗ್ಯ ,ಸಮುದಾಯದ ಸಮಸ್ಯೆಗಳ ಅರಿತು ನಮ್ಮ ಕ್ಲಬ್ ಗಳು ಯಾವುದೇ ಸ್ವಾರ್ಥವಿಲ್ಲದೆ ಮಾಡುವ ಸೇವೆಯೇ ನಮ್ಮ ಗುರಿಯಾಗಿದೆ, ಈ ನಿಟ್ಟಿನಲ್ಲಿ ಹುಣಸೂರು ಇನ್ನರ್ ವ್ಹೀಲ್ ಕ್ಲಬ್ ಉತ್ತಮವಾಗಿ ಕೆಲಸ ಮಾಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಇನ್ನರ್ ವ್ಹೀಲ್ ನಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಕಾರ್ಯನಿರ್ವಹಿಸುವ ಒಟ್ಟು 15 ವಲಯ ಭಾರತದಲ್ಲಿ ಇನ್ನರ್ ವ್ಹೀಲ್ ಕ್ಲಬ್ ಗಳ ಸಂಘದಲ್ಲಿ ಪ್ರಸ್ತುತ 27 ಜಿಲ್ಲೆಗಳಿವೆ. ಇಂಟರ್ ನ್ಯಾಷನಲ್ ಇನ್ನರ್ ವ್ಹೀಲ್ ಯುಕೆಯ ಮ್ಯಾಂಚೆಸ್ಟರ್ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಇನ್ನರ್ ವ್ಹೀಲ್ ಅಸ್ತಿತ್ವದಲ್ಲಿರುವ 99 ದೇಶಗಳಿಗೆ ಸರ್ವೋಚ್ಚ ಆಡಳಿತ ಸಂಸ್ಥೆಯಾಗಿದೆ ಎಂದರು.ಸಾಮಾಜಿಕ ಸೇವೆಯನ್ನು ಗುರುತಿಸಿ, ಇದನ್ನು ವಿಶ್ವಸಂಸ್ಥೆಯ ಇಕೋಸಾಕ್ ಪಟ್ಟಿಯಲ್ಲಿ ಸೇರಿಸಲಾಗಿದೆ.ಯುನಿಸೆಫ್‌ಮತ್ತು ಯುನೆಸ್ಕೋನಂತಹ ವಿಶೇಷ ಸಂಸ್ಥೆಗಳಲ್ಲಿ ಇದರ ಪ್ರಾತಿನಿಧ್ಯವಿದೆ.ಇನ್ನರ್ ವ್ಹೀಲ್ ಮೂಲಭೂತವಾಗಿ ಒಂದು ತಳಮಟ್ಟದ ಸಂಸ್ಥೆಯಾಗಿದ್ದು, ಅದರ ಹೆಚ್ಚಿನ ಸೇವಾ ಪ್ರಯತ್ನಗಳನ್ನು ಕ್ಲಬ್ ಮಟ್ಟದಲ್ಲಿ ನಡೆಸಲಾಗುತ್ತದೆ. ಜಿಲ್ಲಾ ಸಂಘ ಮತ್ತು ಅಂತಾರಾಷ್ಟ್ರೀಯ ರಚನೆಯು ಕ್ಲಬ್ಗಳನ್ನು ಆಡಳಿತಾತ್ಮಕ ಸಂಸ್ಥೆಗಳಾಗಿ ಬೆಂಬಲಿಸಲು ಮತ್ತು ಅವರ ಸಮುದಾಯಗಳಲ್ಲಿ ಮತ್ತು ಅದಕ್ಕೂ ಮೀರಿ ಹೆಚ್ಚಿನ ಸೇವೆಯನ್ನು ಒದಗಿಸಲು ಸಹಾಯ ಮಾಡಲು ವಿನ್ಯಾಸಗೊಳಿಸಲಾಗಿದೆ ಎಂದರು.ಹುಣಸೂರು ಇನ್ನರ್ ವ್ಹೀಲ್ ನ ಅಧ್ಯಕ್ಷೆ ಜ್ಯೋತಿ ವಿಶ್ವನಾಥ್ ಅಧ್ಯಕ್ಷತೆ ವಹಿಸಿ ಮಾತನಾಡಿ, ತಾಲೂಕಿನಲ್ಲಿ ಸಾಮಾಜಿಕ ಕಳಕಳಿ ಹೊಂದಿರುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಸವಲತ್ತುಗಳ ವಿತರಣೆಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕ ಶಾಲೆಗೆ ಶುದ್ದ ಕುಡಿಯುವ ನೀರು ಘಟಕ ನೀಡಲಾಯಿತು, ಶಾಲಾ ಮಕ್ಕಳಿಗೆ ಕ್ರೀಡಾ ಬಹುಮಾನ ನೀಡಲಾಯಿತು.ಅಭಿನಂದನೆ: ಮೈಸೂರು ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಪತ್ರಕರ್ತ ಧರ್ಮಾಪುರ ನಾರಾಯಣ್ ಅವರನ್ನು ಸನ್ಮಾನಿಸಲಾಯಿತು.ಕಾರ್ಯದರ್ಶಿ ತೇನ್ ಮೋಳಿ ತಂಗಮಾರಯಪ್ಪನ್ ಕ್ಲಬ್ ನ ವರದಿ ಮಂಡಿಸಿದರು.ನಿಕಟ ಪೂರ್ವ ಅಧ್ಯಕ್ಷೆ ಸ್ಮಿತಾ ದಯಾನಂದ್ , ಸದಸ್ಯರಾದ ಡಾ. ರಾಜಶೇಶ್ವರಿ, ಶಿವಕುಮಾರಿ, ಡಾ. ಸಂಗೀತಾ ಮಾತನಾಡಿದರು. ರೋಟರಿ ಸಂಸ್ಥೆ ಅಧ್ಯಕ್ಷ ಎಚ್.ಆರ್. ಕೃಷ್ಣಕುಮಾರ್, ಸದಸ್ಯ ಮಹೇಶ್, ಇನ್ನರ್ ವ್ಹೀಲ್ಸ್ ನಿರ್ದೇಶಕರಾದ ಜಯಲಕ್ಷ್ಮೀ, ಡಾ. ಮಂಜುಳ, ರೋಟರಿ ಶಾಲಾ ಮುಖ್ಯ ಶಿಕ್ಷಕಿ ಎಲ್. ದೀಪಾ, ಸುಜಾತ, ಅಂಜು, ಭಾಗ್ಯ, ಪ್ರಭ, ಸುಮಿತ್ರಾ ಇದ್ದರು.
;Resize=(128,128))
;Resize=(128,128))
;Resize=(128,128))