ಸಾರಾಂಶ
ಭಾಲ್ಕಿಯ ಹಿರೇಮಠ ಸಂಸ್ಥಾನದಲ್ಲಿ ಪೀಠಾಧಿಪತಿ ಗುರುಬಸವ ಪಟ್ಟದ್ದೇವರ ಸಾನ್ನಿಧ್ಯದಲ್ಲಿ ಯುವ ಉದ್ಯಮಿ ಆಕಾಶ ರಿಕ್ಕೆ ಅವರು ಬಡ ಮಕ್ಕಳಿಗೆ ನೋಟಬುಕ್ ವಿತರಿಸಿದರು.
ಕನ್ನಡಪ್ರಭ ವಾರ್ತೆ ಭಾಲ್ಕಿ
ಬಡವರು, ದೀನದಲಿತರು, ನಿರ್ಗತಿಕರು, ಅನಾಥರಿಗೆ ಸಹಾಯ ಮಾಡುವುದೇ ನಿಜವಾದ ಪೂಜೆ ಆಗುತ್ತದೆ. ಬಸವಣ್ಣನವರು ಸ್ಥಾವರ ಬದಲಾಗಿ ಜಂಗಮಕ್ಕೆ ಮಹತ್ವ ನೀಡಿದ್ದಾರೆ ಎಂದು ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಹೇಳಿದರು.ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಬಡ ಮಕ್ಕಳಿಗೆ ಪುಸ್ತಕ ವಿತರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಯುವ ಉದ್ಯಮಿ ಆಕಾಶ ರಿಕ್ಕೆಯವರು ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ನಿರಂತರವಾಗಿ ದುಡಿಯುತ್ತಿದ್ದಾರೆ. ರಚನಾತ್ಮಕ ಕಾರ್ಯಗಳನ್ನು ಮಾಡುವ ಮೂಲಕ ಯುವಕರಿಗೆ ಮಾದರಿಯಾಗಿದ್ದಾರೆ. ಅವರ ವಿವಾಹ ದಶಮಾನೋತ್ಸವದ ಅಂಗವಾಗಿ ಮಠದ ಬಡ ಮಕ್ಕಳಿಗೆ ನೋಟಬುಕ್, ಪೆನ್, ಪೆನ್ಸಿಲ್ ಮತ್ತು ಇತರ ಶೈಕ್ಷಣಿಕ ಸಾಹಿತ್ಯ ವಿತರಿಸುವ ಮೂಲಕ ಅವರಿಗೆ ಸಹಾಯ ಮಾಡಿರುವುದು ಅನುಕರಣಿಯ ಕಾರ್ಯವಾಗಿದೆ ಎಂದು ಬಣ್ಣಿಸಿದರು.
ವಿವಾಹ ದಶಮಾನೋತ್ಸವ ಆಚರಿಸಿಕೊಂಡ ಪೂಜಾ ಆಕಾಶ ರಿಕ್ಕೆ ದಂಪತಿಯನ್ನು ಪೂಜ್ಯರು ಸನ್ಮಾನಿಸಿ, ಆಶೀರ್ವದಿಸಿದರು.