ಸಾರಾಂಶ
ಉದ್ಯಾವರ ಫ್ರೆಂಡ್ಸ್ ಸರ್ಕಲ್ ಸುವರ್ಣ ಸಂಭ್ರಮ ವರ್ಷದ ಏಪ್ರಿಲ್ ತಿಂಗಳ ಕಾರ್ಯಕ್ರಮ ಆರ್ಥಿಕವಾಗಿ ಹಿಂದುಳಿದ ಅಂಕುದುರು ನಿವಾಸಿ ಜಾನಕಿ ಅವರಿಗೆ ಹೊಲಿಗೆ ಯಂತ್ರ ವಿತರಿಸಲಾಯಿತು.
ಕನ್ನಡಪ್ರಭ ವಾರ್ತೆ ಉದ್ಯಾವರ
ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ಅಶಕ್ತರ ಕೈಹಿಡಿದು ಮೇಲೆತ್ತಲು ಆಸರೆಯಾಗುವುದು ನಿಜವಾಗಿ ಧರ್ಮ. ಆದರೆ ಇಂದಿನ ಈ ಕೊಳ್ಳುಬಾಕ ಸಂಸ್ಕೃತಿಯಲ್ಲಿ ಮಾನವೀಯತೆ ಮರೆತು ನಮಗೆ ನಾವೇ ಪರಿಧಿ ಹಾಕಿಕೊಂಡು ಸ್ವಾರ್ಥದಿಂದ ಬದುಕುತ್ತಿದ್ದೇವೆ. ಸಮಾಜದ ಕಟ್ಟ ಕಡೆಯನ್ನೂ ಸಮಾಜದ ಮುಖ್ಯ ವಾಹಿನಿಗೆ ಕರೆತರುವಲ್ಲಿ ನಾವೆಲ್ಲ ಪ್ರಯತ್ನಿಸಬೇಕಾಗಿದೆ ಎಂದು ಉದ್ಯಾವರ ಫ್ರೆಂಡ್ಸ್ ಸರ್ಕಲ್ ಗೌರವಾಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್ ಹೇಳಿದ್ದಾರೆ.ಅವರು ಸಂಸ್ಥೆಯ ಸುವರ್ಣ ಸಂಭ್ರಮ ವರ್ಷದ ಏಪ್ರಿಲ್ ತಿಂಗಳ ಕಾರ್ಯಕ್ರಮ ಆರ್ಥಿಕವಾಗಿ ಹಿಂದುಳಿದ ಅಂಕುದುರು ನಿವಾಸಿ ಜಾನಕಿ ಅವರಿಗೆ ಹೊಲಿಗೆ ಯಂತ್ರ ವಿತರಿಸಿ ಮಾತನಾಡಿದರು.
ಈ ಸಂಸ್ಥೆ ಸದಾ ಜನಪರ ಕೆಲಸಗಳಲ್ಲಿ ತನ್ನನ್ನ ತೊಡಗಿಸಿಕೊಂಡು ಈ ನೆಲದ ಸೌಹಾರ್ದತೆಯನ್ನು ಎತ್ತಿ ಹಿಡಿಯುವಲ್ಲಿ ಸದಾ ನಿರತವಾಗಿದೆ. ಈ ಸಂಸ್ಥೆಗೆ ಊರ ಹಾಗೂ ಪರವೂರ ಅಭಿಮಾನಿಗಳ ಹಿತೈಷಿಗಳ ಸಹಾಯ ಸಹಕಾರ ಸದಾ ಸಿಕ್ಕಿದೆ. ಇದು ಇನ್ನೂ ಮುಂದುವರೆಯಲಿ ಸಂಸ್ಥೆ 50 ದಾಟಿ 100 ರತ್ತ ಸಾಗಲಿ ಎಂದು ಹಾರೈಸಿದರು.ಉದ್ಯಾವರ ಗ್ರಾ.ಪಂ. ಅಧ್ಯಕ್ಷೆ ಮಾಲತಿ ಸಂದೀಪ್ ಅತಿಥಿಗಳಾಗಿ ಆಗಮಿಸಿ ಶುಭ ಸಂದೇಶವನ್ನು ನೀಡಿದರು. ಪ್ರಾರಂಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ತಿಲಕ್ ರಾಜ್ ಸಾಲಿಯಾನ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಅಬಿದ್ ಅಲಿ ನಿರೂಪಿಸಿದರು.
ಸಂಸ್ಥೆಯ ಪದಾಧಿಕಾರಿಗಳಾದ ರಿಯಾಜ್ ಪಳ್ಳಿ ಸುಹೇಲ್ ರಹಮತ್, ಹಮೀದ್ ಸಾಬ್ಜಾನ್, ಯು. ಸೀತಾರಾಮ್, ಆಶಾ ವಾಸು, ಸುಗಂಧಿ ಶೇಖರ್, ಶೇಖರ್ ಕೋಟಿಯಾನ್, ಅಜಿತ್ ಮೆಂಡನ್, ಸರೋಜಾ ಅನುಪ್, ಸುಂದರ ಸುವರ್ಣ, ಅನ್ಸರ್ ಸತ್ತಾರ್, ಅನುಪ್ ಕುಮಾರ್, ಶ್ರೀಧರ್ ಗಣೇಶ್ ನಗರ, ಭಾಸ್ಕರ್, ಹೆಲನ್ ಫೆರ್ನಾಂಡಿಸ್, ಶ್ರೀಧರ್ ಮಾಬಿಯಾನ್ ಮೊದಲಾದವರು ಇದ್ದರು.