ಸಮಾಜ ಸೇವೆ ಆರ್ಥಿಕ ನೆರವಿಗೆ ಸೀಮಿತವಾಗಿಲ್ಲ. ತ್ಯಾಗ ಮತ್ತು ಸೇವಾ ಮನೋಭಾವದಿಂದ ಸಮಾಜದ ಸಂಕಷ್ಟದಲ್ಲಿರುವವರಿಗೆ ನೆರವಾಗುವುದೇ ನಿಜವಾದ ಧರ್ಮ. ಸ್ವಾಮಿ ವಿವೇಕಾನಂದರು ಸಾರಿದ ತ್ಯಾಗ ಮತ್ತು ಸೇವೆಯ ಸಂದೇಶವನ್ನು ಸಂತೋಷ್ ರೈ ಬೋಳಿಯಾರ್ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಕಾರ್ಯರೂಪದಲ್ಲಿ ತೋರಿಸಿಕೊಟ್ಟಿದ್ದಾರೆ ಎಂದು ಆರ್ಎಸ್ಎಸ್ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.
ಉಳ್ಳಾಲ : ಸಮಾಜ ಸೇವೆ ಆರ್ಥಿಕ ನೆರವಿಗೆ ಸೀಮಿತವಾಗಿಲ್ಲ. ತ್ಯಾಗ ಮತ್ತು ಸೇವಾ ಮನೋಭಾವದಿಂದ ಸಮಾಜದ ಸಂಕಷ್ಟದಲ್ಲಿರುವವರಿಗೆ ನೆರವಾಗುವುದೇ ನಿಜವಾದ ಧರ್ಮ. ಸ್ವಾಮಿ ವಿವೇಕಾನಂದರು ಸಾರಿದ ತ್ಯಾಗ ಮತ್ತು ಸೇವೆಯ ಸಂದೇಶವನ್ನು ಸಂತೋಷ್ ರೈ ಬೋಳಿಯಾರ್ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಕಾರ್ಯರೂಪದಲ್ಲಿ ತೋರಿಸಿಕೊಟ್ಟಿದ್ದಾರೆ ಎಂದು ಆರ್ಎಸ್ಎಸ್ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.ಬೋಳಿಯಾರ್ನಲ್ಲಿ ಬಿಜೆಪಿ ಕಾರ್ಯಕರ್ತ ರಾಜೇಶ್ ಮಡಿವಾಳ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನಲ್ಲಿ ಸಂತೋಷ್ ರೈ ಬೋಳಿಯಾರ್ ಅವರು ಸ್ವಂತ ಖರ್ಚಿನಲ್ಲಿ ನಿರ್ಮಿಸಿಕೊಟ್ಟ ‘ನಮೋ ಕುಟೀರ-8’ ರ ಗೃಹಪ್ರವೇಶ ಸಮಾರಂಭದಲ್ಲಿ ಶನಿವಾರ ಕೀಲಿಕೈ ಹಸ್ತಾಂತರಿಸಿ ಅವರು ಮಾತನಾಡಿದರು.ಬಿಜೆಪಿ ಮುಖಂಡ ಸಂತೋಷ್ ರೈ ಬೋಳಿಯಾರ್ ಮಾತನಾಡಿ, ಸಮಾಜ ಸೇವೆಯು ರೋಗದಿಂದ ಚೇತರಿಸಿಕೊಳ್ಳುವ ಆತ್ಮಬಲವನ್ನು ನೀಡಿದೆ. ನಿತ್ಯವೂ ರೋಗಿಗಳಿಗೆ ಸಾಂತ್ವನ ಹೇಳುವ ಮೂಲಕ ಮಾನಸಿಕ ನೆಮ್ಮದಿ ಪಡೆಯುತ್ತಿದ್ದೇನೆ ಎಂದರು.ಶಿವ ಕೊಂಡಾಣ ಶ್ರೀ ಶಿವ ದುರ್ಗಾಂಬಾ ಕ್ಷೇತ್ರದ ದುರ್ಗಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಸಂಸದ ಕ್ಯಾ. ಬ್ರಿಜೇಶ್ ಚೌಟ ಮಾತನಾಡಿದರು.‘ಹೊಸದಿಗಂತ’ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಪಿ.ಎಸ್. ಮಾತನಾಡಿ, ಸಂತೋಷ್ ರೈ ಬೋಳಿಯಾರ್ ಅವರ ವ್ಯಕ್ತಿತ್ವ, ಧೈರ್ಯ ಮತ್ತು ಸಮಾಜ ಸೇವಾ ಮನೋಭಾವ ಎಲ್ಲರಿಗೂ ಮಾದರಿ ಎಂದರು.ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಮಾತನಾಡಿ, ಸಂತೋಷ್ ರೈ ಬೋಳಿಯಾರ್ ಬಿಜೆಪಿ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸಿದವರು ಎಂದರು.ಭಾಸ್ಕರ ಭಟ್ ಹಾಗೂ ವಿನಯ್ ಭಟ್ ಗೃಹಪೂಜೆ ನೆರವೇರಿಸಿದರು.ಸಂಸದ ಕ್ಯಾ. ಬ್ರಿಜೇಶ್ ಚೌಟ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಸಂತೋಷ್ ಕುಮಾರ್ ರೈ ಬೋಳಿಯಾರ್, ದೇವಿಪ್ರಸಾದ್ ಪೊಯ್ಯತ್ತಾಯ, ಮಂಜು ಭಂಡಾರಿ ಯಾನೆ ಪದ್ಮನಾಭ ರೈ, ಚಂದ್ರಶೇಖರ್ ಉಚ್ಚಿಲ್, ಚಂದ್ರಹಾಸ ಪಂಡಿತ್ ಹೌಸ್, ಸಂತೋಷ್ ಅವರ ಪತ್ನಿ ವೀಣಾ ಸಂತೋಷ್ ರೈ, ಸ್ಪರ್ಶ ಎಸ್. ರೈ, ಸಮ್ಯುಕ್ತ್ ರೈ, ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು, ರವಿಶಂಕರ್ ಸೋಮೇಶ್ವರ, ಸುಧಾಕರ್ ಭಟ್, ರವೀಂದ್ರ ರೈ ಕಳ್ಳಿಮಾರ್, ಯಶವಂತ ಅಮೀನ್, ದಯಾನಂದ ತೊಕ್ಕೊಟ್ಟು, ರಮೇಶ್ ಶೇನವ, ಜನಶಿಕ್ಷಣ ಟ್ರಸ್ಟ್ನ ಕೃಷ್ಣ ಮೂಲ್ಯ ಹಾಗೂ ಶೀನ ಶೆಟ್ಟಿ ಇದ್ದರು.
ಸಂತೋಷ್ ಕುಮಾರ್ ರೈ ಬೋಳಿಯಾರ್ ಸ್ವಾಗತಿಸಿದರು. ಆನಂದ ಶೆಟ್ಟಿ ವಂದಿಸಿದರು. ರವಿ ರೈ ಫಜೀರು ನಿರೂಪಿಸಿದರು.