ಸುಮಾರು 3.5 ಕೋಟಿ ರು. ವೆಚ್ಚದಲ್ಲಿ ನಗರದ ಮನ್ನಳ್ಳಿ ಓರಸ್ತೆಯ ಆಮಲಾಔಪುರದ ಹೇಮರೆಡ್ಡಿ ಮಲ್ಲಮ್ಮ ಮಂದಿರದ ಆವರಣದಲ್ಲಿ ನಿರ್ಮಾಣಗೊಂಡಿರುವ ‘ಹೇಮ-ವೇಮ ಸಮುದಾಯ ಭವನ’ದ ಉದ್ಘಾಟನಾ ಸಮಾರಂಭ ಆಗಸ್ಟ್ 26ರಂದು ಬುಧವಾರ ಬೆಳಿಗ್ಗೆ 10.30ಕ್ಕೆ ಜರುಗಲಿದೆ ಎಂದು ರಡ್ಡಿ ಸಮಾಜದ ಅಧ್ಯಕ್ಷ ಶಂಕರ ರಡ್ಡಿ ತಿಳಿಸಿದರು.
ಕನ್ನಡಪ್ರಭ ವಾರ್ತೆ ಬೀದರ್
ಸುಮಾರು 3.5 ಕೋಟಿ ರು. ವೆಚ್ಚದಲ್ಲಿ ನಗರದ ಮನ್ನಳ್ಳಿ ಓರಸ್ತೆಯ ಆಮಲಾಔಪುರದ ಹೇಮರೆಡ್ಡಿ ಮಲ್ಲಮ್ಮ ಮಂದಿರದ ಆವರಣದಲ್ಲಿ ನಿರ್ಮಾಣಗೊಂಡಿರುವ ‘ಹೇಮ-ವೇಮ ಸಮುದಾಯ ಭವನ’ದ ಉದ್ಘಾಟನಾ ಸಮಾರಂಭ ಆಗಸ್ಟ್ 26ರಂದು ಬುಧವಾರ ಬೆಳಿಗ್ಗೆ 10.30ಕ್ಕೆ ಜರುಗಲಿದೆ ಎಂದು ರಡ್ಡಿ ಸಮಾಜದ ಅಧ್ಯಕ್ಷ ಶಂಕರ ರಡ್ಡಿ ತಿಳಿಸಿದರು.ಅವರು ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಮಾಜದ ಗಣ್ಯರ ಹಾಗೂ ದಾನಿಗಳ ಸಹಕಾರದಿಂದ ಈ ಸುಸಜ್ಜಿತ ಭವನವನ್ನು ನಿರ್ಮಿಸಲಾಗಿದ್ದು, ಉದ್ಘಾಟನಾ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಸಮಾಜದ 5 ಸಾವಿರಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ಹರಿಹರ ಎರೆಹೊಸಹಳ್ಳಿಯ ಗುರುಪೀಠದ ಪೂಜ್ಯ ವೇಮಾನಂದ ಸ್ವಾಮಿ ಸಾನ್ನಿಧ್ಯ ವಹಿಸಲಿದ್ದು, ರೇಕುಳಗಿ ಶಂಭುಲಿಂಗೇಶ್ವರದ ಮಂತ್ರ ಮಹರ್ಷಿ ಡಾ.ಎನ್.ಬಿ. ರೆಡ್ಡಿ ಗುರೂಜಿ ಸಮ್ಮುಖ ವಹಿಸುವರು. ರಾಜ್ಯದ ಅರಣ್ಯ, ಪರಿಸರ ಹಾಗೂ ಜೀವಶಾಸ್ತ್ರ ಸಚಿವರಾದ ರಾಮಲಿಂಗಾರೆಡ್ಡಿ ಸಮುದಾಯ ಭವನ ಉದ್ಘಾಟಿಸಿದರೆ ಮಾಜಿ ಸಚಿವ ಎಛ್‌ಕೆ ಪಾಟೀಲ್ ಭವನದ ವೇದಿಕೆ ಉದ್ಘಾಟಿಸುವರು.ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ದಾಸೋಹ ಭವನ ಲೋಕಾರ್ಪಣೆ ಮಾಡಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಶಂಕರ ರಡ್ಡಿ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಸಂಸದ ಸಾಗರ ಖಂಡ್ರೆ ಸೇರಿದಂತೆ ಜಿಲ್ಲೆಯ ಎಲ್ಲಾ ಶಾಸಕರು, ಜಿಲ್ಲೆಯ ಮಾಜಿ ಸಚಿವರು, ಮಾಜಿ ಎಂಎಲ್ಸಿಗಳು, ಬಳ್ಳಾರಿಯ ಉದ್ಯಮಿ ನಾರಾ ಪ್ರತಾಪರಡ್ಡಿ ಹಾಗೂ ಇತರೆ ಗಣ್ಯರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ವಿಶೇಷ ಆಹ್ವಾನಿತರಾಗಿ ಬೆಂಗಳೂರಿನ ರೆಡ್ಡಿ ಜನ ಸಂಘದ ಪ್ರಮುಖರಾದ ವಿಎನ್ ಲಕ್ಷ್ಮಣ ರೆಡ್ಡಿ, ಎನ್ ಶೇಖರ ರೆಡ್ಡಿ, ಬಾಬುರೆಡ್ಡಿ, ಎಂಪಿ ಕೃಷ್ಣ ರೆಡ್ಡಿ, ಮಂಜುನಾಥ ರಡ್ಡಿ ಹಾಗೂ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಶಾಲಿನಿ ಚಿಂತಾಮಣಿ, ಡಾ.ಗುರಮ್ಮ ಸಿದ್ಧಾರೆಡ್ಡಿ ಸೇರಿದಂತೆ ಅನೇಕ ಗಣ್ಯರು ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳಲಿ ದ್ದಾರೆ ಎಂದು ತಿಳಿಸಿದರು.ರಡ್ಡಿ ಸಮಾಜದ ಮುಖಂಡರು ಬೀದರ್ ಮಹಾನಗರ ಪಾಲಿಕೆ ಸದಸ್ಯರಾದ ರಾಜು ಚಿಂತಾಮಣಿ, ಗೋಪಾಲ ರಡ್ಡಿ, ಶಾಲಿನಿ ಚಿಂತಾಮಣಿ, ಸಂಜೀವ ರಡ್ಡಿ, ಜಂಪಾ, ರಾಜರಡ್ಡಿ, ಕರುಣಾ ರಡ್ಡಿ, ಸಂಗೀತಾ ರಡ್ಡಿ, ಬಬಿತಾ ವಿಠಲರಡ್ಡಿ, ಓಂರಡ್ಡಿ, ಪಾಂಡುರಂಗ ರಡ್ಡಿ ಹಾಗೂ ಇತರರು ಸುದ್ದಿಗೋಷ್ಟಿಯಲ್ಲಿದ್ದರು.