ನೂತನ ಮೇಯರ್ ಆಗಿ ಹೇಮಲತಾ ಅಧಿಕಾರ ಸ್ವೀಕಾರ

| Published : Aug 17 2025, 01:32 AM IST

ಸಾರಾಂಶ

ಜೆಡಿಎಸ್‌ ಪಕ್ಷದ ಚಿಹ್ನೆ ಮೇಲೆ ಗೆದ್ದು ನಗರಸಭೆ ಸದಸ್ಯರಾಗಿ ನಂತರದಲ್ಲಿ ಅದೇ ಪಕ್ಷದ ಆಂತರಿಕ ಒಪ್ಪಂದದಂತೆ ಮೇಯರ್‌ ಕೂಡ ಆಗಿದ್ದರು. ಆದರೆ, ಆಂತರಿಕ ಒಪ್ಪಂದದಂತೆ ಬೇರೊಬ್ಬರಿಗೆ ಅಧ್ಯಕ್ಷ ಸ್ಥಾನ ಬಿಟ್ಟುಕೊಡದೆ ಬಿಜೆಪಿಯೊಂದಿಗೆ ಕೈಜೋಡಿಸಿ ಬಹುಮತ ಸಾಬೀತು ಮಾಡುವ ವೇಳೆ ಜೆಡಿಎಸ್‌ ವಿಪ್‌ ಜಾರಿ ಮಾಡಿದ್ದರೂ ಉಲ್ಲಂಘಿಸಿ ಮೇಯರ್‌ ಆಗಿ ಮುಂದುವರಿದಿದ್ದರು. ಆ ಮೂಲಕ ತಮ್ಮ ಮಾತೃ ಪಕ್ಷಕ್ಕೆ ಸೆಡ್ಡು ಹೊಡೆದಿದ್ದರು. ಆ ಕಾರಣದಿಂದ ಸದಸ್ಯತ್ವ ಅನರ್ಹಕ್ಕೆ ಜೆಡಿಎಸ್ ಜಿಲ್ಲಾ ಅದ್ಯಕ್ಷ ಕೆ.ಎಸ್. ಲಿಂಗೇಶ್ ದೂರು ನೀಡಿದ್ದ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿ ವಿಪ್ ಉಲ್ಲಂಘನೆ ಸಾಬೀತಾದ ಹಿನ್ನೆಲೆಯಲ್ಲಿ ಸದಸ್ಯತ್ವ ಅನರ್ಹಗೊಳಿಸಿ ಮೈಸೂರಿನ ಪ್ರಾದೇಶಿಕ ಆಯುಕ್ತರ ನ್ಯಾಯಾಲಯ ಆದೇಶ ನೀಡಿದೆ.

ಕನ್ನಡಪ್ರಭ ವಾರ್ತೆ ಹಾಸನ

ಮಹಾನಗರ ಪಾಲಿಕೆ ಮೇಯರ್ ಎಂ. ಚಂದ್ರೇಗೌಡರ ಅವರ ಸದಸ್ಯತ್ವವೇ ಅನರ್ಹಗೊಂಡ ಹಿನ್ನೆಲೆಯಲ್ಲಿ ನೂತನ ಮೇಯರ್ ಆಗಿ ಉಪ ಮೇಯರ್ ಹೇಮಲತಾ ಕಮಲ್ ಕುಮಾರ್ ಶನಿವಾರ ಅಧಿಕಾರ ವಹಿಸಿಕೊಂಡರು. ಜೆಡಿಎಸ್‌ ಪಕ್ಷದ ಚಿಹ್ನೆ ಮೇಲೆ ಗೆದ್ದು ನಗರಸಭೆ ಸದಸ್ಯರಾಗಿ ನಂತರದಲ್ಲಿ ಅದೇ ಪಕ್ಷದ ಆಂತರಿಕ ಒಪ್ಪಂದದಂತೆ ಮೇಯರ್‌ ಕೂಡ ಆಗಿದ್ದರು. ಆದರೆ, ಆಂತರಿಕ ಒಪ್ಪಂದದಂತೆ ಬೇರೊಬ್ಬರಿಗೆ ಅಧ್ಯಕ್ಷ ಸ್ಥಾನ ಬಿಟ್ಟುಕೊಡದೆ ಬಿಜೆಪಿಯೊಂದಿಗೆ ಕೈಜೋಡಿಸಿ ಬಹುಮತ ಸಾಬೀತು ಮಾಡುವ ವೇಳೆ ಜೆಡಿಎಸ್‌ ವಿಪ್‌ ಜಾರಿ ಮಾಡಿದ್ದರೂ ಉಲ್ಲಂಘಿಸಿ ಮೇಯರ್‌ ಆಗಿ ಮುಂದುವರಿದಿದ್ದರು. ಆ ಮೂಲಕ ತಮ್ಮ ಮಾತೃ ಪಕ್ಷಕ್ಕೆ ಸೆಡ್ಡು ಹೊಡೆದಿದ್ದರು. ಆ ಕಾರಣದಿಂದ ಸದಸ್ಯತ್ವ ಅನರ್ಹಕ್ಕೆ ಜೆಡಿಎಸ್ ಜಿಲ್ಲಾ ಅದ್ಯಕ್ಷ ಕೆ.ಎಸ್. ಲಿಂಗೇಶ್ ದೂರು ನೀಡಿದ್ದ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿ ವಿಪ್ ಉಲ್ಲಂಘನೆ ಸಾಬೀತಾದ ಹಿನ್ನೆಲೆಯಲ್ಲಿ ಸದಸ್ಯತ್ವ ಅನರ್ಹಗೊಳಿಸಿ ಮೈಸೂರಿನ ಪ್ರಾದೇಶಿಕ ಆಯುಕ್ತರ ನ್ಯಾಯಾಲಯ ಆದೇಶ ನೀಡಿದೆ.

ಪಾಲಿಕೆಯ ಮೇಯರ್ ಕಚೇರಿಯಲ್ಲಿ ಹೇಮಲತಾ ಕಮಲ್ ಕುಮಾರ್ ಅಧಿಕಾರ ಸ್ವೀಕರಿಸಿದರು. ಈ ವೇಳೆ ನೂತನ ಮೇಯರ್ ಆಗಿ ಅಧಿಕಾರ ವಹಿಸಿಕೊಂಡರ ಹೇಮಲತಾಗೆ ಕ್ಷೇತ್ರದ ಶಾಸಕ ಸ್ವರೂಪ್‌ಪ್ರಕಾಶ್ ಹಾಗೂ ಜೆಡಿಎಸ್ ಸದಸ್ಯರು ಶುಭಾಶಯ ಕೋರಿದರು.