ಹೇಮರಡ್ಡಿ ಮಲ್ಲಮ್ಮ ಬಾಲ್ಯದಿಂದಲೂ ಶ್ರೀಶೈಲ ಚನ್ನಮಲ್ಲಿಕಾರ್ಜುನನನ್ನೇ ಆರಾಧ್ಯ ದೈವವೆಂದು ಪರಿಭಾವಿಸಿ, ಕಡೆಯಲ್ಲಿ ದೇವರನ್ನೇ ಸಾಕ್ಷಾತ್ಕರಿಸಿಕೊಂಡವಳು. ಮಲ್ಲಮ್ಮನ ಪವಿತ್ರ ಮೌಲ್ಯಗಳು, ಆದರ್ಶಗಳು ಅತ್ಯಮೂಲ್ಯ ಕಣಜವಾಗಿದೆ ಎಂದು ತಾಪಂ ಮಾಜಿ ಅಧ್ಯಕ್ಷ ಹೇಮಣ್ಣ ಮುದರಡ್ಡೇರ ಹೇಳಿದರು.

ಹಿರೇಕೆರೂರು: ಹೇಮರಡ್ಡಿ ಮಲ್ಲಮ್ಮ ಬಾಲ್ಯದಿಂದಲೂ ಶ್ರೀಶೈಲ ಚನ್ನಮಲ್ಲಿಕಾರ್ಜುನನನ್ನೇ ಆರಾಧ್ಯ ದೈವವೆಂದು ಪರಿಭಾವಿಸಿ, ಕಡೆಯಲ್ಲಿ ದೇವರನ್ನೇ ಸಾಕ್ಷಾತ್ಕರಿಸಿಕೊಂಡವಳು. ಮಲ್ಲಮ್ಮನ ಪವಿತ್ರ ಮೌಲ್ಯಗಳು, ಆದರ್ಶಗಳು ಅತ್ಯಮೂಲ್ಯ ಕಣಜವಾಗಿದೆ ಎಂದು ತಾಪಂ ಮಾಜಿ ಅಧ್ಯಕ್ಷ ಹೇಮಣ್ಣ ಮುದರಡ್ಡೇರ ಹೇಳಿದರು.ತಾಲೂಕಿನ ಅಬಲೂರು ಗ್ರಾಮದಲ್ಲಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತ್ಯುತ್ಸವ ಅಂಗವಾಗಿ ಹೇಮರಡ್ಡಿ ಮಲ್ಲಮ್ಮನ ಭಾವಚಿತ್ರದ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.ಅರಿವಿಗಿಂತ ಆಚಾರ ದೊಡ್ಡದು ಎಂಬುದನ್ನು ಸಾಧಿಸಿ ತೋರಿಸಿದ ಮಹಾಸಾಧ್ವಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮನವರು ತಮ್ಮ ನಡೆ ನುಡಿಗಳ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ. ಸಂಸಾರದ ಸಂಕಷ್ಟಗಳನ್ನು ಮೀರಿ ಸಮಾಜದ ಒಳಿತಿಗಾಗಿ ತನ್ನ ಬದುಕನ್ನು ಮೀಸಲಿಟ್ಟ ಮಹಾ ಸಾಧ್ವಿ, ಶಿವಶರಣೆ ಹೇಮರಡ್ಡಿ ಮಲ್ಲಮ್ಮನವರು ಹಾಕಿ ಕೊಟ್ಟ ಮಾರ್ಗದಲ್ಲಿ ಇಂದಿನ ಪೀಳಿಗೆ ಸಾಗುವ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡಬೇಕು ಎಂದರು.ಗ್ರಾಮದ ಸೋಮೇಶ್ವರ ದೇವಸ್ಥಾನದಿಂದ ರಥಬೀದಿಯ ಮೂಲಕ ಬಸವೇಶ್ವರ ದೇವಸ್ಥಾನದವರೆಗೆ ಆರತಿ ಹಾಗೂ ವಾದ್ಯದೊಂದಿಗೆ ಹೇಮರಡ್ಡಿ ಮಲ್ಲಮ್ಮನ ಭಾವಚಿತ್ರದ ಮೆರವಣಿಗೆ ಭಕ್ತಿ ಭಾವದೊಂದಿಗೆ ನೆರವೇರಿತು. ನಂತರ ಅನ್ನ ಸಂತರ್ಪಣೆ ನಡೆಯಿತು. ಈ ಸಂದರ್ಭದಲ್ಲಿ ಮಲ್ಲೇಶಪ್ಪ ಕಚವೇರ, ಮಹಾಲಿಂಗಪ್ಪ ಗುಳಲಕಾಯಿ, ಬಸವರಾಜ ಮಳವಳ್ಳಿ, ಶಂಕ್ರಪ್ಪ ಗೌಡ್ರ, ಕರಬಸಪ್ಪ ಸಂಕ್ಲಾಪುರ, ಕೆಂಪರೆಡ್ಡಿ ರಡ್ಡೇರ, ಬಸಪ್ಪ ರಡ್ಡೇರ, ಸೋಮಶೇಖರ ರಡ್ಡೇರ, ಶೇಕಪ್ಪ ರಡ್ಡೇರ, ಸಿದ್ದಪ್ಪ ಕಚವೇರ, ಪ್ರಕಾಶ ರಡ್ಡೇರ, ಅರವಿಂದ ಹಾವೇರಿ, ಈರಪ್ಪ ಗುಳಲಕಾಯಿ, ಪಾಲಾಕ್ಷಪ್ಪ ಗುಳಲಕಾಯಿ, ಯಲ್ಲಪ್ಪ ರಡ್ಡೇರ, ಸುಭಾಸ್ ರಡ್ಡೇರ, ಶೇಕಪ್ಪ ಕಚವೇರ, ನಿಂಗರೆಡ್ಡಿ ಹಾವೇರಿ, ಪ್ರವೀಣ ಕಚವೇರ, ಸುಭಾಸ್ ಸಂಕ್ಲಾಪುರ, ಗಿರೀಶ ರಡ್ಡೇರ, ಶಶಿಧರ ಸಂಕ್ಲಾಪುರ, ಪ್ರಶಾಂತ ರಡ್ಡೇರ, ಪ್ರವೀಣ ರಡ್ಡೇರ, ಮಲ್ಲಿಕಾರ್ಜುನ ರಡ್ಡೇರ, ವಿಜಯಕುಮಾರ ರಡ್ಡೇರ, ಸೋಮರಡ್ಡಿ ಅಡಗಂಟಿ ಸೇರಿದಂತೆ ಸಮಾಜದ ಮುಖಂಡರು, ಗ್ರಾಮಸ್ಥರು ಇದ್ದರು.