ಸಾರಾಂಶ
ಹಿರೇಕೆರೂರು: ಅರಿವಿಗಿಂತ ಆಚಾರ ದೊಡ್ಡದು ಎಂಬುದನ್ನು ಸಾಧಿಸಿ ತೋರಿಸಿದ ಮಹಾಸಾಧ್ವಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮನವರು ತಮ್ಮ ನಡೆ ನುಡಿಗಳ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ಶಾಸಕ ಯು.ಬಿ. ಬಣಕಾರ ತಿಳಿಸಿದರು.ತಾಲೂಕಿನ ಅಬಲೂರು ಗ್ರಾಮದಲ್ಲಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತ್ಯುತ್ಸವ ಅಂಗವಾಗಿ ಹೇಮರಡ್ಡಿ ಮಲ್ಲಮ್ಮನ ಭಾವಚಿತ್ರದ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು.ದಾನ ಧರ್ಮ ಅಂತಃಕರಣ, ತ್ಯಾಗ ಮನೋಭಾವನೆ, ನಿಸ್ವಾರ್ಥ ಭಕ್ತಿಗೆ ಹೆಸರಾಗಿದ್ದ ಹೊಂದಿದ್ದ ಹೇಮರಡ್ಡಿ ಮಲ್ಲಮ್ಮ ಜೀವನವಿಡೀ ಕಷ್ಟ ಅನುಭವಿಸಿ ಬದುಕಿನಲ್ಲಿ ಸಾರ್ಥಕತೆ ಕಂಡ ಶಿವಶರಣೆಯಾಗಿದ್ದಾರೆ. ಸಂಸಾರದ ಸಂಕಷ್ಟಗಳನ್ನು ಮೀರಿ ಸಮಾಜದ ಒಳಿತಿಗಾಗಿ ತನ್ನ ಬದುಕನ್ನು ಮೀಸಲಿಟ್ಟ ಮಹಾಸಾಧ್ವಿ, ಶಿವಶರಣೆ ಹೇಮರಡ್ಡಿ ಮಲ್ಲಮ್ಮನವರು ಹಾಕಿಕೊಟ್ಟ ಮಾರ್ಗದಲ್ಲಿ ಇಂದಿನ ಪೀಳಿಗೆ ಸಾಗುವ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡಬೇಕು ಎಂದರು.ಗ್ರಾಮದ ಸೊಮೇಶ್ವರ ದೇವಸ್ಥಾನದಿಂದ ರಥಬೀದಿಯ ಮೂಲಕ ಬಸವೇಶ್ವರ ದೇವಸ್ಥಾನದ ವರೆಗೆ ಆರತಿ ಹಾಗೂ ವಾದ್ಯದೊಂದಿಗೆ ಹೇಮರಡ್ಡಿ ಮಲ್ಲಮ್ಮನ ಭಾವಚಿತ್ರದ ಮೆರವಣಿಗೆ ಭಕ್ತಿಭಾವದೊಂದಿಗೆ ನೆರವೇರಿತು. ನಂತರ ಅನ್ನಸಂತರ್ಪಣೆ ನಡೆಯಿತು.ಈ ಸಂದರ್ಭದಲ್ಲಿ ತಾಪಂ ಮಾಜಿ ಅಧ್ಯಕ್ಷ ಹೇಮಣ್ಣ ಮುದರಡ್ಡೇರ, ಮಲ್ಲೇಶಪ್ಪ ಕಚವೇರ, ಮಹಾಲಿಂಗಪ್ಪ ಗುಳಲಕಾಯಿ, ಬಸವರಾಜ ಮಳವಳ್ಳಿ, ಶಂಕ್ರಪ್ಪ ಗೌಡ್ರ, ಬಸವರಡ್ಡಿ ರಡ್ಡೇರ, ಸುರೇಶ ಕುರುವತ್ತೇರ, ಕರಬಸಪ್ಪ ಸಂಕ್ಲಾಪುರ, ಕೆಂಪರೆಡ್ಡಿ ರಡ್ಡೇರ, ಬಸಪ್ಪ ರಡ್ಡೇರ, ಸಿದ್ದಪ್ಪ ಕಚವೇರ, ಪ್ರಕಾಶ ರಡ್ಡೇರ, ಅರವಿಂದ ಹಾವೇರಿ, ಈರಪ್ಪ ಗುಳಲಕಾಯಿ, ಪ್ರವೀಣ ರಡ್ಡೇರ, ಪಾಲಾಕ್ಷಪ್ಪ ಗುಳಲಕಾಯಿ, ಯಲ್ಲಪ್ಪ ರಡ್ಡೇರ, ಸೋಮರಡ್ಡಿ ಅಡಗಂಟಿ, ಶೇಕಪ್ಪ ಕಚವೇರ, ಶಶಿಧರ ಸಂಕ್ಲಾಪುರ ಸೇರಿದಂತೆ ಸಮಾಜದ ಮುಖಂಡರು, ಗ್ರಾಮಸ್ಥರು ಇದ್ದರು.ಶಿವಾಜಿ ಮಹಾರಾಜರ ಪುತ್ಥಳಿ ಲೋಕಾರ್ಪಣೆ
ಸವಣೂರು: ಹಿಂದೂ ಧರ್ಮವನ್ನು ಕಾಪಾಡಿದ ಶ್ರೇಷ್ಠ ವ್ಯಕ್ತಿಯ ಆದರ್ಶ ಗುಣಗಳನ್ನು ಅಳವಡಿಸಿಕೊಳ್ಳೋಣ ಎಂದು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ತಿಳಿಸಿದರು.ಪಟ್ಟಣದ ಭರಮಲಿಂಗೇಶ್ವರ ವೃತ್ತದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿ ಲೋಕಾರ್ಪಣೆ ಹಾಗೂ ಹಿಂದವೀ ಸ್ವರಾಜ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.ಈ ಜಗತ್ತಿನಲ್ಲಿ ಮನುಷ್ಯನ ಹೃದಯದಲ್ಲಿ ದೇವರಿದ್ದಾನೆ ಎಂದು ಹೇಳಿಕೊಳ್ಳುವ ಧರ್ಮ ಯಾವುದಾದರೂ ಇದೆ ಎಂದು ಧೈರ್ಯದಿಂದ ಹೇಳುವ ಧರ್ಮ ಹಿಂದೂ ಧರ್ಮವಾಗಿದೆ. ಹಿಂದೂ ಧರ್ಮ ಸುಮಾರು 10 ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಅತ್ಯಂತ ಪುರಾತನ, ಇವತ್ತಿಗೂ ಬದುಕಿರುವ ಭೂಮಂಡಲದ ಏಕೈಕ ಧರ್ಮವಾಗಿದೆ ಎಂದರು.
ಸತ್ಯಬೋಧ ಸ್ವಾಮಿಗಳ ಮೂಲ ವೃಂದವನ ಮಠದ ಪೂಜಾ ಪರ್ಯಾಯಸ್ಥರಾದ ಅವಿನಾಶ ಆಚಾರ್ಯ ರಾಯಚೂರ ಹಾಗೂ ಅಭಿಷೇಕ ಆಚಾರ್ಯ ರಾಯಚೂರ ಸಮಾರಂಭದ ಸಾನ್ನಿಧ್ಯ ವಹಿಸಿದ್ದರು. ವಾಗ್ಮಿ ಕಿರಣಕುಮಾರ ವಿವೇಕವಂಶಿ ಪ್ರಾಸ್ತಾವಿಕವಾಗಿ ಮಾತನಾಡಿದರು. ದಾನಿಗಳಾದ ಪಿ.ಆರ್. ಮುಂಜೋಜಿ, ಶಿವಾಜಿ ವಾಣಿ, ಮಲ್ಲಾರಪ್ಪ ತಳ್ಳಿಹಳ್ಳಿ, ಹೋರಾಟಗಾರ ಪುನೀತ್ ಕರೆಹಳ್ಳಿ ಸೇರಿದಂತೆ ಇತರರು ಇದ್ದರು. ಶಿಕ್ಷಕ ವಿದ್ಯಾಧರ ಕುತನಿ ಸ್ವಾಗತಿಸಿದರು. ಪ್ರಕಾಶ ಚಳ್ಳಾಳ ನಿರ್ವಹಿಸಿದರು.Hemaraddi Mallamma worked hard for the betterment of the society: MLA U.B. Banakara
ಹಿರೇಕೆರೂರು ಸುದ್ದಿ, ಶಾಸಕ ಯು.ಬಿ. ಬಣಕಾರ, ಹೇಮರಡ್ಡಿ ಮಲ್ಲಮ್ಮ, Hirekerur News, MLA U.B. Banaker, Hemaraddy Mallammaದಾನ ಧರ್ಮ ಅಂತಃಕರಣ, ತ್ಯಾಗ ಮನೋಭಾವನೆ, ನಿಸ್ವಾರ್ಥ ಭಕ್ತಿಗೆ ಹೆಸರಾಗಿದ್ದ ಹೊಂದಿದ್ದ ಹೇಮರಡ್ಡಿ ಮಲ್ಲಮ್ಮ ಜೀವನವಿಡೀ ಕಷ್ಟ ಅನುಭವಿಸಿ ಬದುಕಿನಲ್ಲಿ ಸಾರ್ಥಕತೆ ಕಂಡ ಶಿವಶರಣೆಯಾಗಿದ್ದಾರೆ.