ಉತ್ತಮ ಬದುಕಿನ ಸಂದೇಶ ನೀಡಿದ ಹೇಮರೆಡ್ಡಿ ಮಲ್ಲಮ್ಮ: ಅಮರೇಶ

| Published : May 11 2025, 01:21 AM IST

ಉತ್ತಮ ಬದುಕಿನ ಸಂದೇಶ ನೀಡಿದ ಹೇಮರೆಡ್ಡಿ ಮಲ್ಲಮ್ಮ: ಅಮರೇಶ
Share this Article
  • FB
  • TW
  • Linkdin
  • Email

ಸಾರಾಂಶ

ಹತ್ತು ಹಲವು ಸವಾಲುಗಳನ್ನು ಮೆಟ್ಟಿನಿಂತ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಉತ್ತಮ ಬದುಕು ರೂಪಿಸಿಕೊಳ್ಳುವ ಸಂದೇಶ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಕೊಟ್ಟೂರು

ಹತ್ತು ಹಲವು ಸವಾಲುಗಳನ್ನು ಮೆಟ್ಟಿನಿಂತ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಉತ್ತಮ ಬದುಕು ರೂಪಿಸಿಕೊಳ್ಳುವ ಸಂದೇಶ ನೀಡಿದ್ದಾರೆ ಎಂದು ತಹಶೀಲ್ದಾರ್ ಅಮರೇಶ ಜೆ.ಕೆ. ಹೇಳಿದರು.

ಶನಿವಾರ ಇಲ್ಲಿನ ತಾಲೂಕು ಕಾರ್ಯಾಲಯದ ಮಹಾತ್ಮಾ ಗಾಂಧೀಜಿ ಸಭಾಂಗಣದಲ್ಲಿ ತಾಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ಶಿವ ಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಮಾಜದಲ್ಲಿನ ಎಲ್ಲಾ ಬಗೆಯ ತೊಂದರೆ ನಿವಾರಿಸಿ ತಪ್ಪುಗಳನ್ನು ಮನ್ನಿಸುವ ಭಾವ ಮೈಗೊಂಡಿಸಿಕೊಂಡು ಕ್ಷೇಮ ಗುಣವನ್ನು ಹೊಂದುವ ಮೂಲಕ ಮಾದರಿಯಾಗಬೇಕು ಎಂಬುದನ್ನು ಸಮಾಜಕ್ಕೆ ತೋರಿಸಿಕೊಟ್ಟರು ಎಂದರು.

ತಾಲೂಕು ರೆಡ್ಡಿ ಸಮಾಜದ ಅಧ್ಯಕ್ಷ ಕೆ. ಭರಮರೆಡ್ಡಿ ಮಾತನಾಡಿದರು.

ಗ್ರೇಡ್ -2 ತಹಶೀಲ್ದಾರ್ ಎಂ ಪ್ರತಿಭಾ, ರೆಡ್ಡಿ ಸಮಾಜ ಉಪಾಧ್ಯಕ್ಷ ಗೂಳಿ ಮಲ್ಲಿಕಾರ್ಜುನ, ಕಾರ್ಯದರ್ಶಿ ರಾಮಣ್ಣಗೌಡ, ಮುಖಂಡರಾದ ಪಿ. ದೇವೇಂದ್ರ ಗೌಡ ಎಸ್. ಕೊಟ್ರೇಶ್, ಕೋಡಿಹಳ್ಳಿ ಮಂಜುನಾಥ್, ಗುರುಬಸವರಾಜ ಗೂಳಿ ಕೊಟ್ರೇಶ, ಬಿ. ಕಲ್ಲೇಶ, ಕಂದಾಯ ನಿರೀಕ್ಷಕ ಹಾಲಸ್ವಾಮಿ, ಎಚ್ ಹರೀಶ ಮತ್ತು ಇತರರು ಭಾಗವಹಿಸಿದ್ದರು. ಸಿ.ಮ ಗುರುಬಸರಾಜ ನಿರೂಪಿಸಿದರು.

ಹೂವಿನಹಡಗಲಿಯಲ್ಲಿ ಹೇಮರೆಡ್ಡಿ ಮಲ್ಲಮ್ಮ ಜಯಂತಿ:

ಇಲ್ಲಿನ ತಾಲೂಕು ಕಚೇರಿಯಲ್ಲಿ ತಾಲೂಕಾಡಳಿತದಿಂದ ಶಿವಶರಣಿ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಿಸಲಾಯಿತು.

ಹೇಮರೆಡ್ಡಿ ಮಲ್ಲಮ್ಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿ ಮಾತನಾಡಿದ ತಹಸೀಲ್ದಾರ್‌ ಜಿ.ಸಂತೋಷಕುಮಾರ್‌, ಶಿವಶರಣಿ ಹೇಮರೆಡ್ಡಿ ಮಲ್ಲಮ್ಮ ಶ್ರೀಶೈಲ ಮಲ್ಲಿಕಾರ್ಜುನನ ಅನುಗ್ರಹಕ್ಕೆ ಪಾತ್ರವಾಗಿದ್ದಾಳೆ. ಇಡೀ ರೆಡ್ಡಿ ಕುಲ ಧರ್ಮ ಉದ್ಧಾರ ಮಾಡಲು ಅವತರಿಸಿದ ಶಿವಶರಣಿಯಾಗಿದ್ದಾಳೆ. ರೆಡ್ಡಿ ಸಮಾಜಕ್ಕೆ ಮಾತ್ರ ಸೀಮಿತವಾಗಿಲ್ಲ, ಇವರ ಜೀವನದ ಮೌಲ್ಯ ತತ್ವ ಆದರ್ಶ ಎಲ್ಲರೂ ಪಾಲಿಸಬೇಕಿದೆ ಎಂದರು.ಈ ಸಂದರ್ಭದಲ್ಲಿ ವರಕನಹಳ್ಳಿ ಕೊಟ್ರೇಶ, ಚಿದಾನಂದರೆಡ್ಡಿ, ದ್ವಾರಕೀಶರೆಡ್ಡಿ ಸೇರಿದಂತೆ ರೆಡ್ಡಿ ಸಮಾಜದ ಮುಖಂಡರು ಮತ್ತು ಕಂದಾಯ ಇಲಾಖೆ ಸೇರಿದಂತೆ ಇತರೆ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.