ಕಲ್ಕುಣಿ ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿ ಹೇಮಾವತಿ ಅವಿರೋಧ ಆಯ್ಕೆ

| Published : Jan 23 2025, 12:47 AM IST

ಕಲ್ಕುಣಿ ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿ ಹೇಮಾವತಿ ಅವಿರೋಧ ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಅಧ್ಯಕ್ಷೆ ಹೇಮಾವತಿ ಮಾತನಾಡಿ, ಶಾಸಕ ಪಿ.ಎಂ ನರೇಂದ್ರಸ್ವಾಮಿ ಹಾಗೂ ಎಲ್ಲಾ ಸದಸ್ಯರ ಬೆಂಬಲದೊಂದಿಗೆ ಗ್ರಾಮಗಳಿಗೆ ಬೇಕಾದ ಮೂಲ ಸೌಲಭ್ಯಗಳನ್ನು ಕಲ್ಪಿಸಲು ಶ್ರಮಿಸುತ್ತೇನೆಂದರು.

ಮಳವಳ್ಳಿ: ತಾಲೂಕಿನ ಕಲ್ಕುಣಿ ಗ್ರಾಪಂನ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಹೇಮಾವತಿ ಅವಿರೋಧವಾಗಿ ಆಯ್ಕೆಯಾದರು.

ಹಿಂದಿನ ಅಧ್ಯಕ್ಷೆ ಭಾರತಿ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಹೇಮಾವತಿ ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿರುವ ಬಗ್ಗೆ ಚುನಾವಣಾಧಿಕಾರಿ ಎಚ್.ಜಿ ಶ್ರೀನಿವಾಸ್ ಘೋಷಣೆ ಮಾಡಿದರು. ಅಧ್ಯಕ್ಷೆ ಹೇಮಾವತಿ ಮಾತನಾಡಿ, ಶಾಸಕ ಪಿ.ಎಂ ನರೇಂದ್ರಸ್ವಾಮಿ ಹಾಗೂ ಎಲ್ಲಾ ಸದಸ್ಯರ ಬೆಂಬಲದೊಂದಿಗೆ ಗ್ರಾಮಗಳಿಗೆ ಬೇಕಾದ ಮೂಲ ಸೌಲಭ್ಯಗಳನ್ನು ಕಲ್ಪಿಸಲು ಶ್ರಮಿಸುತ್ತೇನೆಂದರು. ಕಾಂಗ್ರೆಸ್ ಮುಖಂಡ ಕೆ.ಜೆ.ದೇವರಾಜು, ಗ್ರಾಪಂ ಉಪಾಧ್ಯಕ್ಷ ಮಾದನಾಯಕ, ಸದಸ್ಯರಾದ ವೆಂಕಟೇಶ್, ಪರಮೇಶ್, ನಾಗೇಂದ್ರ, ಕುಮಾರಿ, ಶಶಿಕಲಾ, ಎಂ.ಮಹಾಲಕ್ಷ್ಮೀ, ಶಶಿಕಲಾ, ಭಾರತಿ, ರೇಖಾ, ಮಂಗಳಗೌರಿ, ಕೌಸರ್‌ಜಾನ್, ಗಂಗಾ, ವಿಜಯ್‌ಪ್ರಕಾಶ್, ಮುಖಂಡರಾದ ಕೃಷ್ಣಮೂರ್ತಿ, ಮಹೇಶ್, ಶಿವಪ್ಪ, ಪುಟ್ಟಸ್ವಾಮಿ, ಮಹದೇವು, ಅಸಮತ್‌ಪಾಷ್, ನಂಜುಂಡಸ್ವಾಮಿ, ಚಂದ್ರು. ರಂಗಸ್ವಾಮಿ, ಯಜಮಾನರಾದ ಪ್ರಕಾಶ್, ಮಲ್ಲು ಚನ್ನಪ್ಪ ಸೇರಿದಂತೆ ಇತರರು ಇದ್ದರು.