ಹೇಮಾವತಿಯ ತುಮಕೂರು ನಾಲೆಯಲ್ಲಿ ನೀರು ಹರಿಸುವ ವೇಳೆಗೆ ನವಿಲೇ ಭಾಗದ ನಾಲಾ ಕಾಮಗಾರಿಯನ್ನು ಪೂರ್ಣಗೊಳಿಸಿ ನೀರನ್ನು ಹರಿಸಲಾಗುವುದು ಈ ಬಗ್ಗೆ ರೈತರು ಹಾಗೂ ಹೇಮಾವತಿ ಹೋರಾಟಗಾರರು ಆತಂಕ ಪಡುವ ಅಗತ್ಯವಿಲ್ಲವೆಂದು ಶಾಸಕ ಸಿ.ಬಿ.ಸುರೇಶ್‌ಬಾಬು ತಿಳಿಸಿದರು.

ಕನ್ನಡ ಪ್ರಭ ವಾರ್ತೆ ಚಿಕ್ಕನಾಯಕನಹಳ್ಳಿ

ಹೇಮಾವತಿಯ ತುಮಕೂರು ನಾಲೆಯಲ್ಲಿ ನೀರು ಹರಿಸುವ ವೇಳೆಗೆ ನವಿಲೇ ಭಾಗದ ನಾಲಾ ಕಾಮಗಾರಿಯನ್ನು ಪೂರ್ಣಗೊಳಿಸಿ ನೀರನ್ನು ಹರಿಸಲಾಗುವುದು ಈ ಬಗ್ಗೆ ರೈತರು ಹಾಗೂ ಹೇಮಾವತಿ ಹೋರಾಟಗಾರರು ಆತಂಕ ಪಡುವ ಅಗತ್ಯವಿಲ್ಲವೆಂದು ಶಾಸಕ ಸಿ.ಬಿ.ಸುರೇಶ್‌ಬಾಬು ತಿಳಿಸಿದರು.

ತಾಲೂಕಿನ ಹೇಮಾವತಿ ನಾಲಾ ಕಾಮಗಾರಿ ಸ್ಥಳಕ್ಕೆ ಮಂಗಳವಾರ ಭೇಟಿ ನೀಡಿ ಕಾಮಗಾರಿ ಪ್ರಗತಿ ಪರಿಶೀಲಿಸಿ ಮಾತನಾಡಿದ ಅವರು, ಇನ್ನೂ ೭೦ಮೀಟರ್ ಉದ್ದ ಎರಡು ಸೇತುವೆಗಳ ನಿರ್ಮಾಣವಾಗಬೇಕಿದೆ. ಈ ತಿಂಗಳ ಅಂತ್ಯಕ್ಕೆ ಅವುಗಳು ಪೂರ್ಣಗೊಳ್ಳಲಿದ್ದು. ನಂತರ ಚಿಕ್ಕಪುಟ್ಟ ಕೆಲಸಗಳನ್ನು ಮಾಡಲಾಗುವುದು. ಈ ನೀರು ಹರಿಯುವ ವೇಳೆಗೆ ಕಂದಿಕೆರೆ ಭಾಗಕ್ಕೂ ಅಗತ್ಯವಿರುವಂತಹ ಕೆಲಸವನ್ನು ಮಾಡುವ ಮೂಲಕ ಚಿಕ್ಕನಾಯಕನಹಳ್ಳಿ, ನಾಗತಿಕೆರೆ, ಕಂದಿಕೆರೆ ಮೂಲಕ ಬೋರನಕಣಿವೆಗೆ ಹರಿಸಲು ಕ್ರಮಕೈಗೊಳ್ಳಲಾಗುವುದು ಈ ಕಾಮಗಾರಿಯನ್ನು ಪ್ರತಿ ವಾರ ಅಧಿಕಾರಿಗಳೊಂದಿಗೆ ಸಭೆ ನಡೆಸುವುದು ಸೇರಿದಂತೆ ಸ್ಥಳಕ್ಕೆ ಭೇಟಿ ನೀಡಲಾಗುತ್ತದೆ ಆದ್ದರಿಂದ ರೈತರು ಸಹಕಾರ ನೀಡಬೇಕು ಎಂದರು.ಈ ಸಂದರ್ಭದಲ್ಲಿ ಹೇಮಾವತಿ ನಾಲಾವಲಯದ ಎಂಜಿನಿಯರ್ ಪ್ರಭಾಕರ್ ಮಾತನಾಡಿ ಚಿಕ್ಕನಾಯಕನಹಳ್ಳಿ ಹೇಮಾವತಿ ಬ್ರಾಂಚ್ ಕೆನಾಲ್ ಕಾಮಗಾರಿಗೆ ಸಂಬಂಧಿಸಿದಂತೆ ಕಳೆದ ಡಿಸೆಂಬರ್‌ನಿಂದ ಅವಾರ್ಡ್ಎಲ್ಲಾ ಮಾಡಿ ರೈತರಿಗೆ ಪರಿಹಾರದ ಹಣವನ್ನು ನೀಡಿ ಮಾಡಲಾಗುತ್ತಿದೆ. ದಬ್ಬೇಘಟ್ಟ ಸೇರಿದಂತೆ ಇತರೆ ಭಾಗದಲ್ಲಿದ್ದಂತಹ ಭೂಸ್ವಾಧೀನ ಪ್ರಕ್ರಿಯೆಯನ್ನು ಬಗೆಹರಿಸಿ ಶಾಸಕರು ಮುಂದಾಳತ್ವದಲ್ಲಿ ರೈತರಿಗೆ ಪರಿಹಾರದ ಹಣವನ್ನು ನೀಡಲಾಗುತ್ತಿದೆ. ಇನ್ನು ಈ ತಿಂಗಳಲ್ಲಿ ಸಾಧ್ಯವಾದಷ್ಟು ಕೆಲಸ ಮುಗಿಸುತ್ತೇವೆ. ೯.೬ಕಿ.ಮೀಯಿಂದ ಇ ದಬ್ಬೇಘಟ್ಟದಿಂದ ನೈಸರ್ಗಿಕವಾಗಿ ಗುರುತ್ವಾಕರ್ಷಣೆಯ ಮೂಲಕ ನೀರನ್ನು ಹರಿಸಲಾಗುವುದು. ಇದರ ಜೊತೆಯಲ್ಲಿ ಮುಖ್ಯ ನಾಲೆಯಲ್ಲಿರುವ ಸೇತುವೆಗಳಲ್ಲಿರುವ ಹೂಳನ್ನು ತೆಗೆಯಲು ಟೆಂಡರ್ ಕರೆಯಲಾಗಿದ್ದು ಅದನ್ನು ನೀರುಹರಿಸುವ ವೇಳೆಗೆ ಮುಗಿಸಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಹೇಮಾವತಿ ಎಂಜಿನಿಯರ್ ಸೌಜನ್ಯ ಸೇರಿದಂತೆ ಗುತ್ತಿದಾರರು ಹಾಜರಿದ್ದರು.