ಸಾರಾಂಶ
ಕನ್ನಡಪ್ರಭ ವಾರ್ತೆ ಮಧುಗಿರಿ
ಪಟ್ಟಣದ ಜನತೆಗೆ ಕುಡಿವ ನೀರಿಗೆ ತೊಂದರೆ ಆಗದಂತೆ ಮಾ.10ರ ಒಳಾಗಾಗಿ ಸಿದ್ದಾಪುರದ ಕೆರೆಗೆ ಹೇಮಾವತಿ ಜಲಾಶಯದ ನೀರು ಹರಿಸಲಾಗುವುದು ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಭರವಸೆ ನೀಡಿದರು.ಮಂಗಳವಾರ ಪಟ್ಟಣದ ಜನತೆಗೆ ಕುಡಿವ ನೀರು ಸರಬರಾಜು ಮಾಡುವ ಚೋಳೇನಹಳ್ಳಿ ಮತ್ತು ಸಿದ್ದಾಪುರ ಕೆರೆಗಗಳಿಗೆ ಭೇಟಿ ನೀಡಿ ವಸ್ತು ಸ್ಥಿತಿ ಪರಿಶೀಲಿಸಿದ ನಂತರ ಪಿಡಬ್ಲಯೂಡಿ ಕಚೇರಿ ಸಭಾಂಗಣದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಜಿಲ್ಲೆಯ ಕೆಲವು ಭಾಗಗಳಲ್ಲಿ ಕುಡಿವ ನೀರಿಗೆ ಅಭಾವ ಎದುರಾಗಿದೆ. ಅದೇ ರೀತಿ ನಮ್ಮ ಚೋಳೇನಹಳ್ಳಿ ಕೆರೆ ಕೂಡ ಬತ್ತಿದ್ದು, ಇನ್ನೊಂದು ವಾರ ಜನತೆಗೆ ನೀರು ಹರಿಸಬಹುದು. ನಂತರ ಅದು ಕೂಡ ಖಾಲಿಯಾಗಲಿದೆ. ಹೇಮಾವತಿ ನೀರು ಬರುವ ಬಳ್ಳಾಪುರದ ಪಂಪ್ ಹೌಸ್ ಬಳಿ ಒಂದುವೂರೆ ಕೋಟಿ ರು. ಬೆಲೆ ಬಾಳುವ ಮೋಟಾರ್, ಟಿಸಿ ಮತ್ತು ವಿದ್ಯುತ್ ಪರಿಕರಗಳನ್ನು ಕಳವು ಮಾಡಿದ ಹಿನ್ನೆಲೆಯಲ್ಲಿ ಈ ಸಲ ಕೊರಟಗೆರೆ ಮತ್ತು ಮಧುಗಿರಿ ಸಿದ್ದಾಪುರ ಕೆರೆಗೆ ನೀರು ತರುವುದು ತಡವಾಗಿದೆ. ಆದರೂ ಹೇಮಾವತಿ ಜಲಾಶಯದಲ್ಲಿ ಕುಡಿವ ನೀರಿಗಾಗಿ 12 ಟಿಎಂಸಿ ನೀರು ಸಂಗ್ರಹಿಸಿದ್ದು, ಬಳ್ಳಾಪುರದ ಪಂಪ್ ಹೌಸ್ ಬಳಿ ಬೇಗ ದುರಸ್ತಿ ಮಾಡಿದರೆ ಸಿದ್ದಾಪುರ ಕೆರೆಗೆ ಕುಡಿವ ನೀರು ಹರಿಸುವುದಾಗಿ ತಿಳಿಸಿ, ಹೇರೂರು, ಬುಗಡನಹಳ್ಳಿ ಕೆರೆಗಳಲ್ಲೂ ನೀರಿಲ್ಲ ಎಂದರು.ಪ್ರಸ್ತುತ ಬಹುತೇಕ ಹಳ್ಳಿಗಳಲ್ಲಿ ಕುಡಿವ ನೀರಿಗೆ ತೊಂದರೆ ಇಲ್ಲ, ಆದರೂ ಗ್ರಾಮೀಣ ಕುಡಿವ ನೀರು ಸರಬರಾಜು ಇಲಾಖೆ ಅಧಿಕಾರಿಗಳು ಬೋರ್‌ವೆಲ್ ಗಳನ್ನು ರಿಪೇರಿ ಮಾಡಿ ನೀರು ಬಿಡಿ. ಒಟ್ಟಿನಲ್ಲಿ ತಾಲೂಕಿನ ಜನತೆಗೆ ಎಲ್ಲೂ ಸಹ ನೀರಿಗೆ ತೊಂದರೆ ಆಗದಂತೆ ಮುತುವರ್ಜಿ ವಹಿಸಿ ಎಂದು ಲೋಕೇಶ್ವರ್‌ಗೆ ಸಲಹೆ ನೀಡಿದರು.
ಚೋಳೇನಹಳ್ಳಿ ಕೆರೆ ಏರಿ ಅತ್ಯಂತ ಚಿಕ್ಕದಾಗಿದ್ದು, ಅಗಲೀಕರಣ ಮಾಡಿ ಕಾಮಗಾರಿ ಮಾಡುವಾಗ ಸ್ಥಳೀಯ ಗುತ್ತಿಗೆದಾರರಿಗೆ ನೀಡಿ ಲೆಸ್ ಕೂಗದುಕ್ಕೆ ಅವಕಾಶ ಕೊಡಬಾರದು, ಹೊರಗಿನವರಿಗೆ ಕಾಮಗಾರಿ ನೀಡಬೇಡಿ, ಸಮರ್ಥವಾಗಿ ಕೆಲಸ ಮಾಡುವ ಸ್ಥಳೀಯ ಗುತ್ತಿಗೆದಾರರಿಗೆ ಕೆಲಸ ಕೊಡಿ ಎಂದರು.ಕೆರೆಗಳಲ್ಲಿ ಮುಚ್ಚಿರುವ ಫೀಡರ್ ಚನಾಲ್‌ಗಳನ್ನು ಎಲೆಕ್ಷನ್ ಬಳಿಕ ಅಭಿವೃದ್ಧಿ ಪಡಿಸಬೇಕಿದೆ. ಮಳೆಗಾಲ ಆರಂಭಕ್ಕೂ ಮುನ್ನವೇ ಸರ್ಕಾರಿ ಕಟ್ಟಡಗಳ ಮೇಲೆ ಬೆಳದಿರುವ ಗಿಡ ಗೆಂಟೆ, ಕಸ ಕಡ್ಡಿ ತೆರವುಗೊಳಿಸಿ ಕಚೇರಿ ಸುತ್ತಮುತ್ತ ಸ್ವಚ್ಛತೆ ಕಾಪಾಡುವ ಮೂಲಕ ಸರ್ಕಾರಿ ಆಸ್ತಿಯನ್ನು ಸಂರಕ್ಷಿಸಲು ಎಲ್ಲ ಇಲಾಖೆಯ ಅಧಿಕಾರಿಗಳು ಕ್ರಮ ವಹಿಸಬೇಕು. ಮೇಲ್ಟಚಾವಣಿ ಮೇಲೆ ಬಿದ್ದ ಮಳೆ ನೀರು ಸರಾಗವಾಗಿ ಹರಿಯುವಂತೆ ನೋಡಿಕೊಳ್ಲಿ ರಿಪೇರಿಗೆ ಒಳಪಡುವ ಸರ್ಕಾರಿ ಕಟ್ಟಗಳ ಪಟ್ಟಿ ನೀಡುವ ಜೊತೆಗೆ ಹೊಸ ಕಟ್ಟಡಗಳ ನಿರ್ಮಾಣಕ್ಕೆ ಕ್ರಿಯಾ ಯೋಜನೆ ತಯಾರಿಸಿ ಕೊಟ್ಟರೆ ಸರ್ಕಾರದಿಂದ ಅನುದಾನ ಕೊಡಿಸುವುದಾಗಿ ಭರವಸೆ ನೀಡಿದರು.
ಬಡವರು, ಕೂಲಿಕಾರ್ಮಿಕರು ವಾಸಿಸುವ ಬಡಾವಣೆಗಳಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲು ಮೊದಲ ಆದ್ಯತೆ ನೀಡಬೇಕು. ಪುರಸಭೆ ಅಧಿಕಾರಿಗಳು ಖಾಸಗಿ ಶಾಲೆಗಳು ಸೇರಿದಂತೆ ಬಾಕಿ ಇರುವ ಅಂಗಡಿ ಮುಂಗಟ್ಟು, ನಿವೇಶನ ಮತ್ತು ಮನೆಗಳ ಕಂದಾಯ ಸಂಗ್ರಹಿಸಿ ಎಂದು ಮುಖ್ಯಾಧಿಕಾರಿ ಸುರೇಶ್ ಅವರಿಗೆ ಸಲಹೆ ನೀಡಿದರು.ಕೊಡಿಗೇನಹಳ್ಳಿಯಲ್ಲಿ ನಾಡ ಕಚೇರಿ ಸೇರಿ ಒಂದೇ ಸೂರಿನಡಿ ಎಲ್ಲ ಸರ್ಕಾರಿ ಇಲಾಖೆಗಳು ಕರ್ತವ್ಯ ನಿರ್ವಹಿಸುವ ಮೂಲಕ ಸುಸ್ಸಜ್ಜಿತ ಕಟ್ಟಡ ಕಟ್ಟಲು ಚಿಂತಿಸಿದ್ದು, ಇದರಿಂದ ಸಾವರ್ಜನಿಕರು ತಮ್ಮ ಕಚೇರಿ ಕೆಲಸಗಳಿಗೆ ಅನುಕೂಲವಾಗಲಿದೆ. ಅಧಿಕಾರಿಗಳು ಖಾಲಿ ಇರುವ ಜಾಗ ಗುರುತಿಸಿ ವರದಿ ನೀಡುವಂತೆ ತಹಸೀಲ್ದಾರ್ ಸಿಬ್ಗತವುಲ್ಲಾ ಅವರಿಗೆ ಸೂಚಿಸಿದರು.
ಮಾದೇನಹಳ್ಳಿ-ಇಮ್ಮಡಗೊಂಡನಹಳ್ಳಿ ಮತ್ತು ಪಟ್ಟಣದ ರಾಘವೇಂದ್ರ ಬಡಾವಣೆಯಲ್ಲಿನ ಸೇತುವ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಶೀಘ್ರ ಮುಗಿಸುವಂತೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿ ದೊಡ್ಡಮಾಲೂರು -ಶ್ರಾವಂಡನಹಳ್ಳಿ ಮಾರ್ಗ ದ್ವಿಚಕ್ರ ವಾಹನ ಸವಾರರ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ರಸ್ತೆ ಅಕ್ಕಪಕ್ಕ ಬೆಳೆದು ನಿಂತಿರುವ ಜಂಗಲ್ ತೆರವುಗೊಳಿಸಿ, ಮುದ್ದೇನಹಳ್ಳಿ ಸೇತುವೆ ಕಂ ಬ್ಯಾರೇಜೆ ಮಾಡುವುದರಿಂದ ಅಂತರ್ಜಲ ವೃದ್ಧಿಯಾಗಲಿದೆ ಎಂದರು.ಸಭೆಯಲ್ಲಿ ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ, ತಹಸೀಲ್ದಾರ್ ಸಬ್ಗತ್‌ವುಲ್ಲಾ, ಪಿಡಬ್ಲ್ಯುಡಿ ಇಇ ಸುರೇಶ್‌ರೆಡ್ಡಿ, ಎಇಇ ರಾಜ್‌ಗೋಪಾಲ್, ಲೋಕೇಶ್ವರಪ್ಪ, ಬಿಇಒ ಕೆ.ಎನ್. ಹನುಮಂತರಾಯಪ್ಪ, ಜಿಪಂ ಇಇ ಮಂಜುನಾಥ್, ಸಮಾಜ ಕಲ್ಯಾಣ ಇಲಖೆ ಅಧಿಕಾರಿ ಶಿವಣ್ಣ, ಕೃಷಿ ಅಧಿಕಾರಿ ಹನುಮಂತರಾಯಪ್ಪ, ಮುಖಂಡರಾದ ಎಂ.ಎಸ್. ಶಂಕರನಾರಾಯಣ್, ತುಂಗೋಟಿ ರಾಮಣ್ಣ, ಪುರಸಭೆ ಸದಸ್ಯರಾದ ಎಸ್‌ಬಿಟಿ ರಾಮು, ಆಲೀಮ್, ಉಮೇಶ್, ಕೆಪಿಸಿಸಿ ಮೆಂಬರ್ ಸಿದ್ದಾಪುರ ರಂಗಶ್ಯಾಮಯ್ಯ ಸೇರಿದಂತೆ ಅನೇಕರಿದ್ದರು.
;Resize=(128,128))
;Resize=(128,128))
;Resize=(128,128))