ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಚನ್ನಮ್ಮನ ಕಿತ್ತೂರು ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಚನ್ನಮ್ಮನ ಕಿತ್ತೂರು ಕಿ ನಾ ವಿ ವ ಸಂಘದ ಮಹಾವಿದ್ಯಾಲಯ ಸಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ಪರಂಪರೆ ದಿನಾಚರಣೆ-2026 ಈ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿದ ಕಲ್ಮಠದ ಶ್ರೀಗಳು ಪರಂಪರೆಗಳನ್ನು ಉಳಿಸುವ ಅಗತ್ಯತೆ ಮತ್ತು ಅವುಗಳು ದೇಶದ ಗೌರವದ ಪ್ರತೀಕವಾಗಿ ನಿಲ್ಲುತ್ತವೆ ಎಂಬುವುದನ್ನು ತಿಳಿಸಿದರು.

ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರು

ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಚನ್ನಮ್ಮನ ಕಿತ್ತೂರು ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಚನ್ನಮ್ಮನ ಕಿತ್ತೂರು ಕಿ ನಾ ವಿ ವ ಸಂಘದ ಮಹಾವಿದ್ಯಾಲಯ ಸಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ಪರಂಪರೆ ದಿನಾಚರಣೆ-2026 ಈ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿದ ಕಲ್ಮಠದ ಶ್ರೀಗಳು ಪರಂಪರೆಗಳನ್ನು ಉಳಿಸುವ ಅಗತ್ಯತೆ ಮತ್ತು ಅವುಗಳು ದೇಶದ ಗೌರವದ ಪ್ರತೀಕವಾಗಿ ನಿಲ್ಲುತ್ತವೆ ಎಂಬುವುದನ್ನು ತಿಳಿಸಿದರು.

ಈ ಕಾರ್ಯಕ್ರಮದ ವಿಶೇಷ ಉಪನ್ಯಾಸಕ ಡಾ.ಚಂದ್ರಶೇಖರ ತಾಬೋಜಿ ಜಾಗತಿಕ ಪರಂಪರ ತಾಣಗಳು ಹಾಗೂ ರಾಜ್ಯದ ಮತ್ತು ಸ್ಥಳೀಯ ಪಾರಂಪರಿಕ ತಾಣಗಳ ಕುರಿತು ಅವುಗಳ ಉಲ್ಲೇಖ ಅವುಗಳ ಐತಿಹಾಸಿಕ ಮಹತ್ವ ಮತ್ತು ನೈಸರ್ಗಿಕ ಪ್ರಮುಖ ತಾಣವಾದ ಸಹ್ಯಾದ್ರಿ ಪರ್ವತ ಶ್ರೇಣಿಗಳ ಕುರಿತು ವಿವರಿಸಿದ ಅವರು, ವಿದ್ಯಾರ್ಥಿಗಳಲ್ಲಿ ಪರಂಪರೆಗಳನ್ನು ಉಳಿಸುವ ಮನಸ್ಥಿತಿಯ ಕುರಿತು ತಿಳಿಸಿದರು. ಹಾಗೆ ಮುಂದಿನ ದಿನಗಳಲ್ಲಿ ಯುವ ಪೀಳಿಗೆಯ ಇವುಗಳ ಸಂರಕ್ಷಣಾ ಕಾರ್ಯದಲ್ಲಿ ತೊಡಗಬೇಕು ಎಂದು ಸಲಹೆ ನೀಡಿದರು.ಈ ಕಾರ್ಯಕ್ರಮದ ಪ್ರಾರಂಭದಲ್ಲಿ ಸ್ವಾಗತ ಮತ್ತು ಪ್ರಾಸ್ತಾವಿಕ ನುಡಿಗಳನ್ನಾಡಿದ ಪುರಾತತ್ವ ಮತ್ತು ಪರಂಪರೆ ಇಲಾಖೆಯ ಕ್ಯುರೆಟರ್ ರಾಘವೇಂದ್ರ ಮಾತನಾಡಿ, ಪರಂಪರೆಯ ಉಳಿವಿನ ಅಗತ್ಯತೆ ಈ ದಿನಾಚರಣೆ ಹಿನ್ನೆಲೆಯನ್ನು ತಿಳಿಸಿ ಸರ್ವರನ್ನು ಸ್ವಾಗತಿಸಿದರು.ಬೆಳಗ್ಗೆ ಕಲ್ಮಠದ ಆವರಣದಲ್ಲಿರುವ ಕಿತ್ತೂರು ಸಂಸ್ಥಾನದ ರಾಜರುಗಳ ಸಮಾಧಿಗಳನ್ನು ಸ್ವಚ್ಛತೆಗೊಳಿಸುವುದು ಮತ್ತು ಅವುಗಳನ್ನು ಶುದ್ಧಗೊಳಿಸುವ ಕಾರ್ಯ ಜರುಗಿತು. ಕಾರ್ಯಕ್ರಮದಲ್ಲಿ 7 ತಂಡಗಳ ಮುಖ್ಯಸ್ಥರೊಂದಿಗೆ ಯೋಜಿಸಿ ವಿದ್ಯಾರ್ಥಿಗಳ ಹಂಚಿಕೆ ಮಾಡಲಾಯಿತು. ಈ ಎಲ್ಲ ತಂಡಗಳು ಅತ್ಯಂತ ಯಶಸ್ವಿಯಾಗಿ ರಾಜರುಗಳ ಸಮಾಧಿ ಮತ್ತು ಕಟ್ಟಡಗಳನ್ನು ಅತ್ಯಂತ ಜಾಗರೂಕತೆಯಿಂದ ಸ್ವಚ್ಛ ಮತ್ತು ಶುದ್ಧಗೊಳಿಸುವ ಕಾರ್ಯವನ್ನು ನೆರವೇರಿಸಿದರು. ಪ್ರಾರಂಭದಲ್ಲಿ ಇವುಗಳ ಸ್ವಚ್ಛತಾ ಕಾರ್ಯ ಮತ್ತು ಪರಂಪರೆಯ ಕುರಿತು ಶಿಕ್ಷಕರಾದ ಮಂಜುನಾಥ ಕಳಸಣ್ಣವರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಹಾಗೆ ಕಲ್ಮಠದ ಶ್ರೀಗಳು ಸ್ವಚ್ಛತೆಯ ಕಾರ್ಯದಲ್ಲಿ ತೊಡುಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಕಾರ್ಯದ ನಂತರ ವೇದಿಕೆಯ ಕಾರ್ಯಕ್ರಮದಲ್ಲಿ ಕಿತ್ತೂರು ಪಟ್ಟಣ ಪಂಚಾಯತಿಯ ಸ್ಥಾಯಿ ಸಮಿತಿಯ ಅಧ್ಯಕ್ಷ ಎಂ.ಎಫ್.ಜಕಾತಿಯವರು ಕಾರ್ಯಕ್ರಮ ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಐತಿಹಾಸಿಕ ಸ್ಥಳಗಳ ಕುರಿತು ವಿವರಿಸಿದರು.ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯತಿಯ ಮುಖ್ಯ ಅಧಿಕಾರಿ ಮಲ್ಲಯ್ಯ ಹಿರೇಮಠ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಡಾ.ಬಿ.ಎನ್.ಹೊಸಮನಿ ಹಾಗೂ ಕೆ.ಎನ್.ವಿ.ವ ಕಾಲೇಜಿನ ಪ್ರಾಚಾರ್ಯ ಎಚ್.ಕೆ.ನಾಗರಾಜ, ಕಿತ್ತೂರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಎಸ್.ಬಿ.ದಳವಾಯಿ, ಪ್ರಾಧ್ಯಾಪಕರಾದ ಶಿವಾಜಿ ಗುಡಾಜಿ, ರಾಜಶೇಖರ ಇಳಕಲ್ಲ, ಉಪಪ್ರಾಂಶುಪಾಲ ಮಹೇಶ್ ಚೆನ್ನಂಗಿ, ಮುಖ್ಯೋಪಾಧ್ಯಾಯ ಬಿ.ಸಿ.ಬಿದರಿ, ಎಂ.ಆರ್.ಶಹಪುರ, ಎನ್.ಜಿ.ಪಾಟೀಲ, ಮಲ್ಲಿಕಾರ್ಜುನ ಉಳ್ಳಾಗಡ್ಡಿ, ಮಂಜುನಾಥ ದೊಡ್ಡಣ್ಣವರ ಮುಂತಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಮಹೇಶ ಹೊಂಗಲ ನಿರೂಪಿಸಿದರು. ಶಿಕ್ಷಕರಾದ ರಾಜಶೇಖರ ರಗಟಿ ವಂದಿಸಿದರು. ಕುಮಾರಿ ಕೃತಿ ರಾಘವೇಂದ್ರ ಪ್ರಾರ್ಥನೆ ಸಲ್ಲಿಸಿದರು. ಎರಡೂ ಕಾಲೇಜಿನ ಎನ್ಎಸ್ಎಸ್ ತಂಡದ ವಿದ್ಯಾರ್ಥಿಗಳು ಹಾಗೂ ಇತರ ನಾಗರಿಕರು ಉಪಸ್ಥಿತರಿದ್ದರು.ಸ್ಮಾರಕಗಳನ್ನು ರಕ್ಷಿಸಿ ಇತಿಹಾಸ ಉಳಿಸಿ, ನಮ್ಮ ಪರಂಪರೆಗಳು ನಮ್ಮ ಹೆಮ್ಮೆಯ ನೆಲೆಗಳು, ಮನುಕುಲದ ಸ್ಮಿತೆ ಪರಂಪರೆಯ ನೆಲೆಗಳು ಎಂಬ ಘೋಷಣೆಗಳ ಮೂಲಕ ಅರ್ಥಪೂರ್ಣ ಆಚರಿಸಿದರು.