ಬಾಗೂರಿನಲ್ಲಿ ಹೈಟೆಕ್‌ ಸಾರ್ವಜನಿಕ ಶೌಚಾಲಯ ಉದ್ಘಾಟನೆ

| Published : Nov 14 2025, 01:45 AM IST

ಸಾರಾಂಶ

ಬಾಗೂರು ನಾಡಕಚೇರಿ ಹಿಂಭಾಗ ನೂತನವಾಗಿ ನಿರ್ಮಾಣವಾಗಿರುವ 10 ಲಕ್ಷ ರು. ವೆಚ್ಚದ ಹೈಟೆಕ್ ಮಾದರಿಯ ಶೌಚಗೃಹ ಉದ್ಘಾಟಿಸಿ ಮಾತನಾಡಿದರು. ಬಾಗೂರು ಇತಿಹಾಸ ಪ್ರಸಿದ್ಧ ಸಂತೆಕಾಳೇಶ್ವರಿ ದೇಗುಲ ಹಾಗೂ ಬಾಗುರು ದೊಡ್ಡಕೆರೆ ಏಷ್ಯಾ ಖಂಡದ ಎರಡನೇ ಅತಿ ದೊಡ್ಡ ಬಾಗೂರು ನವಿಲೇ ಸುರಂಗ ನೋಡಲು ಬರುವ ಪ್ರವಾಸಿಗರಿಗೂ ಹೈಟೆಕ್ ಮಾದರಿಯ ಶೌಚಾಲಯ ಅನುಕೂಲವಾಗುತ್ತದೆ ಎಂದು ತಿಳಿಸಿದರು. ನಾನು ಶಾಸಕರಾದ ಮೇಲೆ ಬಾಗೂರು ಹೋಬಳಿ ಕೇಂದ್ರವನ್ನು ಮಾದರಿ ಹೋಬಳಿ ಕೇಂದ್ರ ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಮುಂದಿನ ಅಧಿವೇಶನದಲ್ಲಿ ಪೊಲೀಸ್ ಠಾಣೆ, ಬಸ್ ನಿಲ್ದಾಣ, ಮಂಜೂರು ಮಾಡಿಸುವ ಪ್ರಸ್ತಾಪ ಮಾಡುತ್ತೇನೆ ಎಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ ಬಾಗೂರು

ಹೋಬಳಿ ಕೇಂದ್ರಕ್ಕೆ ಗ್ರಾಮೀಣ ಭಾಗದಿಂದ ಬರುವ ಸಾರ್ವಜನಿಕರ ಅನುಕೂಲಕ್ಕೆ ಹೋಬಳಿ ಕೇಂದ್ರದಲ್ಲಿ ಹೈಟೆಕ್ ಶೌಚಗೃಹ ಉದ್ಘಾಟಿಸಲಾಗಿದೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಬುಧವಾರ ತಿಳಿಸಿದರು.

ಬಾಗೂರು ನಾಡಕಚೇರಿ ಹಿಂಭಾಗ ನೂತನವಾಗಿ ನಿರ್ಮಾಣವಾಗಿರುವ 10 ಲಕ್ಷ ರು. ವೆಚ್ಚದ ಹೈಟೆಕ್ ಮಾದರಿಯ ಶೌಚಗೃಹ ಉದ್ಘಾಟಿಸಿ ಮಾತನಾಡಿದರು. ಬಾಗೂರು ಇತಿಹಾಸ ಪ್ರಸಿದ್ಧ ಸಂತೆಕಾಳೇಶ್ವರಿ ದೇಗುಲ ಹಾಗೂ ಬಾಗುರು ದೊಡ್ಡಕೆರೆ ಏಷ್ಯಾ ಖಂಡದ ಎರಡನೇ ಅತಿ ದೊಡ್ಡ ಬಾಗೂರು ನವಿಲೇ ಸುರಂಗ ನೋಡಲು ಬರುವ ಪ್ರವಾಸಿಗರಿಗೂ ಹೈಟೆಕ್ ಮಾದರಿಯ ಶೌಚಾಲಯ ಅನುಕೂಲವಾಗುತ್ತದೆ ಎಂದು ತಿಳಿಸಿದರು. ನಾನು ಶಾಸಕರಾದ ಮೇಲೆ ಬಾಗೂರು ಹೋಬಳಿ ಕೇಂದ್ರವನ್ನು ಮಾದರಿ ಹೋಬಳಿ ಕೇಂದ್ರ ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಮುಂದಿನ ಅಧಿವೇಶನದಲ್ಲಿ ಪೊಲೀಸ್ ಠಾಣೆ, ಬಸ್ ನಿಲ್ದಾಣ, ಮಂಜೂರು ಮಾಡಿಸುವ ಪ್ರಸ್ತಾಪ ಮಾಡುತ್ತೇನೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಎಚ್. ಶಿವಣ್ಣ, ಗ್ರಾಮ ಪಂಚಾಯತಿ ಅಧ್ಯಕ್ಷ ಅಣ್ಣೇಗೌಡ (ಸ್ವಾಮಿ) ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಮಲ್ಲೇಶ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಓಬಳಾಪುರ ಎನ್. ಬಸವರಾಜು, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ದಾಸಪುರ ಕೆಂಪೇಗೌಡ, ಪಿಡಿಒ ರಮೇಶ್, ಮುಖಂಡರಾದ ಚಂದ್ರಣ್ಣ, ಮನು, ಸ್ಟುಡಿಯೋ ರಘು, ಲಕ್ಷ್ಮಣ, ಹರೀಶ್, ಕಾಳೇಶ್, ಎಲ್ ಕೆ ಇಂದ್ರೇಶ್ ಯುವ ಮುಖಂಡರಾದ ಧರಣಿ, ಪವನ್ ಇತರರು ಹಾಜರಿದ್ದರು.