ಸಾರಾಂಶ
ಬುದ್ದಿಜೀವಿಗಳಿಂದ ಒನಕೆ ಓಬವ್ವಳ ಇತಿಹಾಸವನ್ನು ಮರೆಮಾಚುವ ಕಾರ್ಯ ಸದ್ದಿಲ್ಲದೆ ನಡೆಯುತ್ತಿದ್ದು, ಓಬವ್ವ ಚಾರಿತ್ರಿಕ ವ್ಯಕ್ತಿಯಾಗುವುದು ಅವರಿಗೆ ಇಷ್ಟವಿಲ್ಲ.
ಗುಡೇಕೋಟೆಯಲ್ಲಿ ಒನಕೆ ಓಬವ್ವ ಉತ್ಸವದ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟನೆಕನ್ನಡಪ್ರಭ ವಾರ್ತೆ ಕೂಡ್ಲಿಗಿ
ಬುದ್ದಿಜೀವಿಗಳಿಂದ ಒನಕೆ ಓಬವ್ವಳ ಇತಿಹಾಸವನ್ನು ಮರೆಮಾಚುವ ಕಾರ್ಯ ಸದ್ದಿಲ್ಲದೆ ನಡೆಯುತ್ತಿದ್ದು, ಓಬವ್ವ ಚಾರಿತ್ರಿಕ ವ್ಯಕ್ತಿಯಾಗುವುದು ಅವರಿಗೆ ಇಷ್ಟವಿಲ್ಲ. ಗುಡೇಕೋಟೆ ಹಾಗೂ ಚಿತ್ರದುರ್ಗದ ಪ್ರಜ್ಞಾವಂತ ಜನತೆ ಎಚ್ಚೆತ್ತುಕೊಳ್ಳಬೇಕೆಂದು ಹಂಪಿ ಕನ್ನಡವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ. ಲಕ್ಷ್ಮಣ್ ತೆಲಗಾವಿ ತಿಳಿಸಿದರು. ಅವರು ತಾಲೂಕಿನ ಗುಡೇಕೋಟೆಯಲ್ಲಿ ಕನ್ನಡ ಮ್ತತು ಸಂಸ್ಕೃತಿ ಇಲಾಖೆ ಮತ್ತು ವಿಜಯನಗರ ಜಿಲ್ಲಾಡಳಿತ ಮಂಗಳವಾರ ಆಯೋಜಿಸಿದ್ದ ಎರಡು ದಿನ ಒನಕೆ ಓಬವ್ವ ಉತ್ಸವದಲ್ಲಿ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಓಬವ್ವನ ಕುರಿತು ಈಗಾಗಲೇ ನನ್ನನ್ನು ಸೇರಿದಂತೆ ಪ್ರೊ. ಎ.ಡಿ. ಕೃಷ್ಣಯ್ಯ, ಡಾ. ಚಿನ್ನಸ್ವಾಮಿ ಸೋಸಲೆ, ಭೀಮಣ್ಣ ಗಜಾಪುರ ಸೇರಿದಂತೆ ಹಲವು ಲೇಖಕರು ಮತ್ತು ಸಂಶೋಧಕರು ಕೃತಿ ಬರೆದಿದ್ದಾರೆ. ಆ ಕೃತಿ ಮೌಲ್ಯಯುತವಾಗಿವೆ. ಜತೆಗೆ ಜನಸಾಮಾನ್ಯರಿಗೆ ಅವಳ ಜನ್ಮವೃತ್ತಾಂತ ಇತಿಹಾಸ ತಿಳಿಸಲು ಸಹಕಾರಿ ಆಗಿವೆ. ಇಂತಹವುಗಳ ನಡುವೆ ಕೆಲ ಸಂಶೋಧಕರು ಅವಳು ಜಾನಪದ ಮಹಿಳೆಯೊ ಅಥವಾ ಐತಿಹಾಸಿಕ ಮಹಿಳೆಯೊ ಎಂಬ ದ್ವಂದ್ವ ನೀತಿಗಳನ್ನು ಹರಡುತ್ತಿರುವುದು ನೋವಿನ ಸಂಗತಿ ಎಂದು ಖೇದವ್ಯಕ್ತ ಪಡಿಸಿದರು. ಮುಂದಿನ ದಿನಗಳಲ್ಲಿ ಓಬವ್ವನ ಗಂಡನ ಮನೆಯವರ ಮೂಲ ನೆಲೆ, ಅವಳ ಸಾವು ಮತ್ತು ಸಮಾಧಿಯ ಬಗ್ಗೆ ನಿಖರ ಇತಿಹಾಸ ತಿಳಿಸುವಂತಹ ಸಂಶೋಧನೆ ನೆಡೆಯಬೇಕಿದೆ ಎಂದರು.ಪ್ರಾಧ್ಯಾಪಕ ಡಾ. ಅಮರೇಶ್ ಯತಗಲ್ ಮಾತನಾಡಿ, ಗುಡೇಕೋಟೆ ಪಾಳೇಗಾರರು ಕೆರೆಕಟ್ಟೆ, ಗುಡಿಗುಂಡಾರಗಳನ್ನು ನಿರ್ಮಿಸಿ ಈ ಭಾದಲ್ಲಿನ ಜನರಿಗೆ ನೀಡಿದ ಕೊಡುಗೆ ಆಪಾರವಾಗಿದೆ. ಇತಿಹಾಸದಲ್ಲಿ ದೊಡ್ಡ ನಾಯಕರ ಅಧ್ಯಯನ ಮಾಡಲು ಶಾಸನ ಆಧಾರ ಲಭ್ಯವಾಗುತ್ತವೆ. ಜನಸಾಮನ್ಯರ ಇತಿಹಾಸ ದಾಖಲಿಸಲು ಜಾನಪದ ಹಾಡು ಸಿಗುತ್ತವೆ ಎಂದರು.ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಧ್ಯಾಪಕ ಡಾ. ಆರ್.ಎಂ. ಷಡಕ್ಷರಯ್ಯ ಗುಡೇಕೋಟೆ ಸ್ಮಾರಕಗಳು, ಕವಿವಿ ಚರಿತ್ರೆ ವಿಭಾಗದ ಪ್ರಾಧ್ಯಾಪಕ ಡಾ. ವಿರೂಪಾಕ್ಷಿ ಪೂಜಾರಹಳ್ಳಿಯವರು ಗುಡೇಕೋಟೆ ಅಭಿವೃದ್ದಿಯ ಕುರಿತು ಮುನ್ನೋಟ, ಹಂಪಿ ವೃತ್ತದ ಪುರಾತತ್ವ ಇಲಾಖೆಯ ನಿರ್ದೇಶಕ ಡಾ. ಶೇಜೇಶ್ವರ ಗುಡೇಕೋಟೆ ಸ್ಮಾರಕಗಳ ಸಂರಕ್ಷಣೆ, ಉಪನ್ಯಾಸಕ ಓಬಯ್ಯ ಗುಡೇಕೋಟೆಯ ಇತಿಹಾಸ ಮತ್ತು ಸಂಸ್ಕೃತಿ ಸೇರಿದಂತೆ ೬ ಪ್ರಬಂಧಗಳು ಮಂಡನೆಯಾದವುಕಾರ್ಯಕ್ರಮದಲ್ಲಿ ಡಾ. ಕೊತ್ಲಮ್ಮ ಪ್ರಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷ ಎನ್. ಕೃಷ್ಣ, ಡಾ. ರಾಜಣ್ಣ, ನಾಗರಾಜ ಕೊಟ್ಟಪ್ಪಗಳ ಇದ್ದರು.