ಜಿಲ್ಲಾಧಿಕಾರಿ ಆದೇಶ ಎತ್ತಿ ಹಿಡಿದ ಹೈ ಕೋರ್ಟ್‌ ಪೀಠ

| Published : Sep 12 2025, 12:06 AM IST

ಸಾರಾಂಶ

ಜಿಲ್ಲಾಧಿಕಾರಿಗಳು ಐವರು ಬಿಜೆಪಿ ಸದಸ್ಯರ ಸದಸ್ಯತ್ವ ರದ್ದುಗೊಳಿಸಿದ ಆದೇಶ ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಐವರು ಸದಸ್ಯರು ಅರ್ಜಿ ಸಲ್ಲಿಸಿ 2025 ರ ಮಾ.17 ರಂದು ತಾತ್ಕಾಲಿಕ ತಡೆಯಾಜ್ಞೆ ಪಡೆದಿದ್ದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಇಲ್ಲಿನ ಪುರಸಭೆ ಐವರು ಬಿಜೆಪಿ ಪುರಸಭೆ ಸದಸ್ಯರು ವಿಪ್‌ ಉಲ್ಲಂಘಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಟಿ.ಸಿ. ಶಿಲ್ಪನಾಗ್‌ ಐವರ ಸದಸ್ಯತ್ವವನ್ನು ಅನರ್ಹಗೊಳಿಸಿದ್ದ ಆದೇಶವನ್ನು ಹೈಕೋರ್ಟ್‌ನ ಏಕ ಸದಸ್ಯ ನ್ಯಾಯಪೀಠ ಎತ್ತಿ ಹಿಡಿದಿದೆ.ಜಿಲ್ಲಾಧಿಕಾರಿಗಳು ಐವರು ಬಿಜೆಪಿ ಸದಸ್ಯರ ಸದಸ್ಯತ್ವ ರದ್ದುಗೊಳಿಸಿದ ಆದೇಶ ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಐವರು ಸದಸ್ಯರು ಅರ್ಜಿ ಸಲ್ಲಿಸಿ 2025 ರ ಮಾ.17 ರಂದು ತಾತ್ಕಾಲಿಕ ತಡೆಯಾಜ್ಞೆ ಪಡೆದಿದ್ದರು.ಹೈಕೋರ್ಟ್‌ ಏಕ ಸದಸ್ಯ ಪೀಠದ ನ್ಯಾಯಾಧೀಶ ಎಂ.ವೈ ಅರುಣ್‌ ಅವರು ಐವರು ಬಿಜೆಪಿ ಸದಸ್ಯರು ಅನರ್ಹಗೊಂಡ ಬಗ್ಗೆ ಜಿಲ್ಲಾಧಿಕಾರಿಗಳಿಂದ ದಾಖಲಾತಿ ಪರಿಶೀಲನೆ ನಡೆಸಿ, ವಾದ, ಪ್ರತಿವಾದ ಆಲಿಸಿದ ಬಳಿಕ ಸೆ. 11 ರ ಗುರುವಾರ (ಇಂದು) ಜಿಲ್ಲಾಧಿಕಾರಿಗಳ ಆದೇಶದಲ್ಲಿ ಯಾವುದೇ ಲೋಪವಿಲ್ಲ ಎಂದು ಆದೇಶವನ್ನು ಎತ್ತಿ ಹಿಡಿಯುವ ಮೂಲಕ ಐವರು ಸದಸ್ಯರ ಸದಸ್ಯತ್ವ ಮತ್ತೆ ಅನರ್ಹಗೊಂಡಿದೆ.ಐವರು ಬಿಜೆಪಿ ಸದಸ್ಯರ ಪರವಾಗಿ ಹಿರಿಯ ವಕೀಲ ಸಿ.ಎಂ.ಜಗದೀಶ್‌ ವಾದ ಮಂಡಿಸಿದ್ದರು. ಸದಸ್ಯತ್ವ ಅನರ್ಹಗೊಳಿಸಬೇಕು ಎಂದು ಅರ್ಜಿ ಸಲ್ಲಿಸಿದ್ದ ಪುರಸಭೆ ಪಿ. ಗಿರೀಶ್‌, ಎಸ್.ಕುಮಾರ್‌ ಪರ ವಕೀಲ ಪಿ.ಆನಂದ್‌ ವಾದ ಮಂಡಿಸಿದ್ದಾರೆ.ಬಿಜೆಪಿ ಸದಸ್ಯರ ಸದಸ್ಯತ್ವ ಅನರ್ಹಗೊಳಿಸಲು ವಾದ ಮಂಡಿಸಿದ್ದ ವಕೀಲ ಪಿ.ಆನಂದ್‌ ಕನ್ನಡಪ್ರಭದೊಂದಿಗೆ ಮಾತನಾಡಿ ಐವರು ಸದಸ್ಯರ ಅರ್ಜಿಯನ್ನು ನ್ಯಾಯಪೀಠ ಡಿವಾರ್ಡ್‌ ಆಫ್‌ ಪರ್ಮೇಲ್ಸ್‌ ಎಂದು ವಜಾಗೊಳಿಸಿದೆ ಎಂದರು.ಏನಿದು ಕಥೆ?2025 ರ ಫೆ. 1ರಂದು ಜಿಲ್ಲಾಧಿಕಾರಿ ಟಿ.ಸಿ.ಶಿಲ್ಪನಾಗ್‌ ಅವರು ಪುರಸಭೆ ಬಿಜೆಪಿ ಸದಸ್ಯರಾದ ಕಿರಣ್‌ ಗೌಡ, ರಮೇಶ್‌, ರಾಣಿ ಲಕ್ಷ್ಮೀದೇವಿ, ವೀಣಾ ಮಂಜುನಾಥ್‌, ಹೀನಾ ಕೌಸರ್ ಕರ್ನಾಟಕ ಸ್ಥಳೀಯ ಪ್ರಾಧಿಕಾರಗಳ(ಪಕ್ಷಾಂತರ ನಿಷೇಧ) ಅಧಿ ನಿಯಮ 1987 ರ ಸೆಕ್ಷನ್‌ 4 (2) ರಲ್ಲಿ ಪ್ರದತ್ತವಾದ ಅಧಿಕಾರದನ್ವಯ ಪುರಸಭೆ ಸದಸ್ಯರ ಸದಸ್ಯತ್ವವನ್ನು 2025 ರ ಜ.30ರಂದು ಅನರ್ಹಗೊಳಿಸಿ ಆದೇಶ ಹೊರಡಿಸಿದ್ದರು.ಜಿಲ್ಲಾಧಿಕಾರಿಗಳ ಆದೇಶವನ್ನು ಅನರ್ಹಗೊಂಡ ಐವರು ಸದಸ್ಯರು ಹೈಕೋರ್ಟ್‌ ಮೊರೆ ಹೋಗಿ 2025ರ ಮಾ.17ರಂದು ತಾತ್ಕಾಲಿಕ ತಡೆಯಾಜ್ಞೆ ತಂದಿದು ಸದಸ್ಯರರಾಗಿ ಸೆ.11 ರ ತನಕ ಮುಂದುವರಿದಿದ್ದರು.ಅನರ್ಹಕ್ಕೆ ಕಾರಣ:ಪುರಸಭೆ ಬಿಜೆಪಿ ಸದಸ್ಯರಾದ ಕಿರಣ್‌ ಗೌಡ, ರಮೇಶ್‌, ರಾಣಿಲಕ್ಷ್ಮೀದೇವಿ, ವೀಣಾ ಮಂಜುನಾಥ್‌, ಹೀನಾ ಕೌಸರ್‌ ಕಳೆದ 2024 ಸೆ. 4 ರಂದು ನಡೆದ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಕಿರಣ್‌ ಗೌಡ, ಹೀನಾ ಕೌಸರ್‌ ಕಾಂಗ್ರೆಸ್‌ ಬೆಂಬಲದೊಂದಿಗೆ ಅಧ್ಯಕ್ಷ,ಉಪಾಧ್ಯಕ್ಷರಾಗಿದ್ದರು.ಆದರೆ ಅಧ್ಯಕ್ಷ,ಉಪಾಧ್ಯಕ್ಷ ಚುನಾವಣಾ ಪ್ರಕ್ರಿಯೆಯಲ್ಲಿ ಪುರಸಭೆ ಸದಸ್ಯರಾದ ರಮೇಶ್‌, ರಾಣಿಲಕ್ಷ್ಮೀದೇವಿ, ವೀಣಾ ಮಂಜುನಾಥ್‌ ಗೈರಾಗಿದ್ದರು. ಐವರು ಸದಸ್ಯರು ಬಿಜೆಪಿ ವಿಪ್‌ ಉಲ್ಲಂಘಿಸಿದ್ದಾರೆ ಎಂದು 2024 ರ ಸೆ.12 ರಂದು ಪುರಸಭೆ ಮುಖ್ಯಾಧಿಕಾರಿ ಕೆ.ಪಿ.ವಸಂತ ಕುಮಾರಿಗೆ ಪುರಸಭೆ ಸದಸ್ಯರಾದ ಪಿ.ಗಿರೀಶ್‌, ಎಸ್.ಕುಮಾರ್‌ ಕರ್ನಾಟಕ ಸ್ಥಳೀಯ ಪ್ರಾಧಿಕಾರಗಳ (ಪಕ್ಷಾಂತರ ನಿಷೇಧ) ಅಧಿ ನಿಯಮ 1987 ರಡಿಯಲ್ಲಿ ಸದಸ್ಯರು ಸದಸ್ಯತ್ವ ಅನರ್ಹಗೊಳಿಸುವಂತೆ ದೂರು ಸಲ್ಲಿಸಿದ್ದನ್ನು ಸ್ಮರಿಸಬಹುದು.ಬಿಜೆಪಿಯ ಐವರು ಸದಸ್ಯರು ಬಿಜೆಪಿ ವಿಫ್‌ ಉಲ್ಲಂಘಿಸಿದ್ದ ಬಗ್ಗೆ ಜಿಲ್ಲಾಧಿಕಾರಿಗಳು ನೀಡಿದ್ದ ಆದೇಶವನ್ನು ಹೈ ಕೋರ್ಟ್‌ ಏಕ ಸದಸ್ಯ ನ್ಯಾಯಪೀಠ ಎತ್ತಿ ಹಿಡಿದಿದೆ. ಅನರ್ಹಗೊಂಡ ಸದಸ್ಯರು ಹಾಗೂ ರಕ್ತ ಸಂಬಂಧಿಕರು ಆರು ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸದಂತೆ ಮತ್ತೊಂದು ಅರ್ಜಿ ಹಾಕಲು ಹಿರಿಯ ಕಾನೂನು ತಜ್ಞರು ಜೊತೆ ಚರ್ಚೆ ನಡೆಸಿದ್ದೇನೆ.-ಪಿ.ಗಿರೀಶ್‌,ದೂರುದಾರ ಬಿಜೆಪಿ ಸದಸ್ಯ------------ಭ್ರಷ್ಟರ ಕಪಿಮುಷ್ಠಿಯಿಂದ ಪುರಸಭೆ ಅಧಿಕಾರ ತಪ್ಪಿಸುವುದು ನಮ್ಮೆಲ್ಲರ ಉದ್ದೇಶವಾಗಿತ್ತು. ಅವರ ಕಾಲದಲ್ಲಿ ಪುರಸಭೆ ದೀವಾಳಿ ಆಗಿತ್ತು. ಅಧಿಕಾರ ತಪ್ಪಿಸಬೇಕು ಎಂಬ ಉದ್ದೇಶ ಈಡೇರಿದೆ. ಪುರಸಭೆ ಚುನಾವಣೆ ಬರುತ್ತೇ, ನಿಂತ ನೀರಲ್ಲ. ಮುಂದೇನು ಎಂಬುದು ಚುನಾವಣೆ ಬಂದಾಗ ಗೊತ್ತಾಗಲಿದೆ.-ರಮೇಶ್‌--------------

--------------11ಜಿಪಿಟಿ53ಪುರಸಭೆ 5 ಬಿಜೆಪಿ ಸದಸ್ಯರ ಸದಸ್ಯತ್ವ ರದ್ದು ಎಂದು 2025 ರ ಫೆ.2ರಂದು ಕನ್ನಡಪ್ರಭದಲ್ಲಿ ಸುದ್ದಿ ಪ್ರಕಟಿಸಿತ್ತು.

11ಜಿಪಿಟಿ54

ಕನ್ನಡಪ್ರಭದಲ್ಲಿ ಮಾ.14 ರಂದು ಬಿಜೆಪಿ 5 ಸದಸ್ಯರ ಅನರ್ಹಗೊಳಿಸಿದ್ದ ಡೀಸಿ ಆದೇಶಕ್ಕೆ ಹೈಕೋರ್ಟ್‌ ತಡೆ ಎಂದು ಸುದ್ದಿ ಪ್ರಕಟಿಸಿತ್ತು.-------------11ಜಿಪಿಟಿ55

ಪಿ.ಗಿರೀಶ್‌ ------------11ಜಿಪಿಟಿ56ರಮೇಶ್‌ -------------