ಸಾರಾಂಶ
ಮಾಹಿತಿ ನಿರ್ಬಂಧಿಸಲು ಸಾಮಾಜಿಕ ಜಾಲತಾಣಗಳಿಗೆ ನಿರ್ದೇಶನ ನೀಡುವ ಸಂಬಂಧ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ‘ಸಹಯೋಗ್ ಪೋರ್ಟಲ್’ ಪ್ರಾರಂಭಿಸಿ ಕೇಂದ್ರ ಸರ್ಕಾರ ಹೊರಡಿಸಿದ್ದ ಅಧಿಸೂಚನೆ ರದ್ದು ಮಾಡಬೇಕೆಂದು ಎಕ್ಸ್ ಕಾರ್ಪ್ ಸಂಸ್ಥೆ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಬೆಂಗಳೂರು : ಮಾಹಿತಿ ನಿರ್ಬಂಧಿಸಲು ಸಾಮಾಜಿಕ ಜಾಲತಾಣಗಳಿಗೆ ನಿರ್ದೇಶನ ನೀಡುವ ಸಂಬಂಧ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ‘ಸಹಯೋಗ್ ಪೋರ್ಟಲ್’ ಪ್ರಾರಂಭಿಸಿ ಕೇಂದ್ರ ಸರ್ಕಾರ ಹೊರಡಿಸಿದ್ದ ಅಧಿಸೂಚನೆ ರದ್ದು ಮಾಡಬೇಕೆಂದು ಎಕ್ಸ್ ಕಾರ್ಪ್ (ಈ ಹಿಂದಿನ ಟ್ವೀಟರ್) ಸಂಸ್ಥೆ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಈ ಕುರಿತಂತೆ ಎಕ್ಸ್ ಕಾರ್ಪ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಬುಧವಾರ ಪ್ರಕಟಿಸಿದೆ.
ಸಂವಿಧಾನದ ಪರಿಚ್ಛೇದ 19 (ಸ್ವಾತಂತ್ರ್ಯ) ವಿಶಾಲವಾದ ಅರ್ಥ ಹೊಂದಿದೆ. ಅದರಡಿ ಲಭ್ಯವಾಗಿರುವ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕೇವಲ ನಾಗರಿಕರಿಗೆ ಮಾತ್ರ ಲಭ್ಯವಾಗಿದೆ. ಆದರೆ, ಈ ಸ್ವಾತಂತ್ರ್ಯವು ಒಂದು ಸಂಸ್ಥೆಯಾಗಿರುವ ಎಕ್ಸ್ ಕಾರ್ಪ್ಗೆ ಲಭ್ಯವಾಗುವುದಿಲ್ಲ. ಅರ್ಜಿದಾರರ ಮೂಲ ಸ್ಥಾನ ಅಮೆರಿಕ ಆಗಿದೆ. ಅಮೆರಿಕದಲ್ಲಿಯೂ ಸಾಮಾಜಿಕ ಜಾಲತಾಣಗಳನ್ನು ನಿಯಂತ್ರಿಸಲಾಗುತ್ತಿದೆ ಎಂದು ಪೀಠ ಹೇಳಿದೆ.
ಅಲ್ಲದೆ, ಸಾಮಾಜಿಕ ಜಾಲತಾಣ ಕ್ಷೇತ್ರವನ್ನು ನಿಯಂತ್ರಿಸುವುದು ಹೊಸದೂ ಅಲ್ಲ, ವಿಶಿಷ್ಟವೂ ಅಲ್ಲ. ಪ್ರತಿ ಸಾರ್ವಭೌಮ ರಾಷ್ಟ್ರಗಳಲ್ಲಿಯೂ ಸಾಮಾಜಿಕ ಜಾಲತಾಣಗಳನ್ನು ನಿಯಂತ್ರಿಸಲಾಗುತ್ತಿದೆ. ಸಾಮಾಜಿಕ ಜಾಲತಾಣಗಳಿಗೆ ಅನಿಯಂತ್ರಿತ ಸ್ವಾತಂತ್ರ್ಯ ನೀಡಲಾಗದು. ನಿಯಂತ್ರಣವಿಲ್ಲದ ವಾಕ್ ಸ್ವಾತಂತ್ರ್ಯ ಕಲ್ಪಿಸುವುದು ಅರಾಜಕತೆಗೆ ದಾರಿ ಮಾಡಕೊಡಲಿದೆ ಎಂದು ಪೀಠ ಹೇಳಿದೆ.
ಮಾಹಿತಿ ನಿರ್ಬಂಧ ಮಾಡುವುದಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣ ಸಂಸ್ಥೆಗಳಿಗೆ ನಿರ್ದೇಶಿಸಲು ಕೇಂದ್ರ ಸರ್ಕಾರ ಮಾಹಿತಿ ತಂತ್ರಜ್ಞಾನ ಸೆಕ್ಷನ್ 79(3)(ಬಿ) ಅಡಿಯಲ್ಲಿ ಕೇಂದ್ರ ಗೃಹ ಇಲಾಖೆ ಸಹಯೋಗ್ ಪೋರ್ಟಲ್ ಪರಿಚಯಿಸಿ ಅಧಿಸೂಚನೆ ಹೊಡಿಸಿದೆ. ಇದು ಕಾನೂನು ಬಾಹಿರ ಕ್ರಮ. ಇದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ. ಆದ್ದರಿಂದ ಕೇಂದ್ರ ಸರ್ಕಾರದ ಅಧಿಸೂಚನೆ ರದ್ದು ಮಾಡಬೇಕು ಎಂದು ಎಕ್ಸ್ ಕಾರ್ಪ್ ಸಂಸ್ಥೆ ತನ್ನ ಅರ್ಜಿಯಲ್ಲಿ ಕೋರಿತ್ತು.
ಮಾಹಿತಿ ನಿರ್ಬಂಧಿಸಲು ಜಾಲತಾಣಗಳಿಗೆ ನಿರ್ದೇಶಿಸುವ ಕೇಂದ್ರ ಸರ್ಕಾರದ ಕಾಯ್ದ ಪ್ರಶ್ನಿಸಿ ಅಮೆರಿಕ ಮೂಲದ ಎಕ್ಸ್ ಕಾರ್ಪ್ ಅರ್ಜಿ
ಸಂವಿಧಾನದ ಪರಿಚ್ಛೇದ 79 (3) (ಬಿ) ಕಾಯ್ದೆಯು ಕೇಂದ್ರ, ರಾಜ್ಯಗಳಿಗೆ ಮಾಹಿತಿ ನಿರ್ಬಂಧದ ಅಧಿಕಾರ ನೀಡಲ್ಲ ಎಂದು ಸಂಸ್ಥೆ ವಾದ
ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ
ಕೇವಲ ನಾಗರಿಕರಿಗೆ ಮಾತ್ರ, ಸಂಸ್ಥೆಗಳಿಗಿಲ್ಲ ಎಕ್ಸ್ ಕಾರ್ಪ್‌ನ ವಾದ ಅಲ್ಲಗಳೆದ ಹೈಕೋರ್ಟ್‌ನಿಯಂತ್ರಣವಿಲ್ಲದ ವಾಕ್ ಸ್ವಾತಂತ್ರ್ಯ ಕಲ್ಪಿಸುವುದು ಅರಾಜಕತೆಗೆ ದಾರಿಯಾಗಲಿದೆ. ಹೀಗಾಗಿ ನಿಯಂತ್ರಣ ಅಗತ್ಯ ಎಂದ ನ್ಯಾಯಪೀಠ
;Resize=(128,128))
;Resize=(128,128))