ಸಾರಾಂಶ
ಓದುಗರು ಕನ್ನಡ ಪುಸ್ತಕಗಳನ್ನು ಕೊಂಡು ಓದುವ ಮೂಲಕ ಸರಸ್ವತಿಯನ್ನು ಆರಾಧಿಸಬೇಕು
ಕನ್ನಡಪ್ರಭ ವಾರ್ತೆ ಮೈಸೂರು
ಓದುಗರು ಕನ್ನಡ ಪುಸ್ತಕಗಳನ್ನು ಕೊಂಡು ಓದುವ ಮೂಲಕ ಸರಸ್ವತಿಯನ್ನು ಆರಾಧಿಸಬೇಕು ಎಂದು ಹೈಕೋರ್ಟ್ ನ್ಯಾಯವಾದಿ ರೇವಣ್ಣ ಬಳ್ಳಾರಿ ತಿಳಿಸಿದರು.ನಗರದ ನಮನ ಕಲಾ ಮಂಟಪದಲ್ಲಿ ಅಭಿರುಚಿ ಬಳಗವು ಆಯೋಜಿಸಿದ್ದ ಇಂಧನ ಉಳಿತಾಯ, ಜನಸಂಖ್ಯಾ ಸಮಸ್ಯೆಯ ಜಾಗೃತಿ, ಯುವ ಕೌಶಲ್ಯ ಹಾಗೂ ಸಾಮಾಜಿಕ ಮಾಧ್ಯಮಗಳ ಅರಿವು ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಇದೇ ವೇಳೆ ಎನ್.ವಿ. ರಮೇಶ್ ಅವರ ಸಮಗ್ರ ಮಕ್ಕಳ ಸಾಹಿತ್ಯ ಪುಸ್ತಕವನ್ನು ಲೇಖಕ ಭದ್ರಾವತಿ ರಾಮಾಚಾರಿ ಬಿಡುಗಡೆಗೊಳಿಸಿದರು. ಈ ಪುಸ್ತಕದ ಬಗ್ಗೆ ಸುಜಾತ ರವೀಶ್ ಪರಿಚಯಿಸಿದರು.ಈ ಸಂದರ್ಭದಲ್ಲಿ ನಾನೇನು ಮಾಡ್ಲಿ ಎಂಬ ಎನ್.ವಿ. ರಮೇಶ್ ಅವರು ಬರೆದು ನಿರ್ದೇಶಿಸಿದ ನಾಟಕದಲ್ಲಿ ಆರ್.ಎ. ಕುಮಾರ್, ಪ್ರಭಾ ಶಾಸ್ತ್ರಿ, ಲತಾ ಮೋಹನ್, ಮೋಹನ್, ಮಮತಾ ಸುಧೀಂದ್ರ, ಉಮಾ ರಮೇಶ್ ಅಭಿನಯಿಸಿದರು. ಕೆಂಪರಾಜು, ಸಿ.ಎನ್. ಭಾಗ್ಯಲಕ್ಷ್ಮಿ ನಾರಾಯಣ ಇದ್ದರು.