ಸಾರಾಂಶ
ನಗರದ ಬಿಎಂ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಕಳೆದ ಎರಡು ದಿನಗಳಿಂದ ತಾಲೂಕು ಮಟ್ಟದ ವಿವಿಧ ಕ್ರೀಡೆಗಳು ಯಶಸ್ವಿಯಾಗಿ ನಡೆಯುತ್ತಿದ್ದು, 14 ಮತ್ತು 17 ವರ್ಷ ವಯಸ್ಸಿನ ಬಾಲಕ, ಬಾಲಕಿಯರ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ತಾಲೂಕಿನ ಸುಮಾರು 40ಕ್ಕೂ ಹೆಚ್ಚು ತಂಡಗಳು ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್. ಸುರೇಶ್ ಸಂತಸ ವ್ಯಕ್ತಪಡಿಸಿ, ವಿಜೇತ ತಂಡವನ್ನು ಅಭಿನಂದಿಸಿದರು.
ಕನ್ನಡಪ್ರಭವಾರ್ತೆ ಚಳ್ಳಕೆರೆ
ನಗರದ ಬಿಎಂ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಕಳೆದ ಎರಡು ದಿನಗಳಿಂದ ತಾಲೂಕು ಮಟ್ಟದ ವಿವಿಧ ಕ್ರೀಡೆಗಳು ಯಶಸ್ವಿಯಾಗಿ ನಡೆಯುತ್ತಿದ್ದು, 14 ಮತ್ತು 17 ವರ್ಷ ವಯಸ್ಸಿನ ಬಾಲಕ, ಬಾಲಕಿಯರ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ತಾಲೂಕಿನ ಸುಮಾರು 40ಕ್ಕೂ ಹೆಚ್ಚು ತಂಡಗಳು ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್. ಸುರೇಶ್ ಸಂತಸ ವ್ಯಕ್ತಪಡಿಸಿ, ವಿಜೇತ ತಂಡವನ್ನು ಅಭಿನಂದಿಸಿದರು. 14 ವರ್ಷ ವಯಸ್ಸಿನ ಬಾಲಕರ ವಿಭಾಗವು ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಪ್ರಥಮ ಬಹುಮಾನ, ರೋಟರಿಮಾಕಂಸ್ ಪ್ರೌಢಶಾಲೆ ದ್ವಿತೀಯ, ಅಲ್ಪಸಂಖ್ಯಾತ ಮೊರಾರ್ಜಿ ವಸತಿಶಾಲಾ ಬಾಲಕಿಯರ ವಿಭಾಗದಲ್ಲಿ ಪ್ರಥಮ, ಅಲ್ಪಸಂಖ್ಯಾತ ಮೊರಾರ್ಜಿ ವಸತಿಶಾಲಾ ದ್ವಿತೀಯ, ಹೊಂಗಿರಣ ಶಾಲಾ 17 ವರ್ಷ ಬಾಲಕರ ವಿಭಾಗದಲ್ಲಿ ಪ್ರಥಮ ಸ್ಥಾನ, ಅಲ್ಪಸಂಖ್ಯಾತ ಮೊರಾರ್ಜಿ ವಸತಿಶಾಲಾ ದ್ವಿತೀಯ, ಕೃಷ್ಣ ಪ್ರೌಢಶಾಲೆ ಚನ್ನಮ್ಮನಾಗತಿಹಳ್ಳಿ 17 ವರ್ಷದ ಬಾಲಕಿಯರ ವಿಭಾಗದಲ್ಲಿ ಪ್ರಥಮ ಬಹುಮಾನ, ಅಲ್ಪಸಂಖ್ಯಾತ ಮೊರಾರ್ಜಿ ವಸತಿಶಾಲೆ ದ್ವಿತೀಯ ಬಹುಮಾನ ಪಡೆದಿದೆ. ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಡಿ.ಟಿ. ಶ್ರೀನಿವಾಸ್, ಪ್ರಧಾನಕಾರ್ಯದರ್ಶಿ ಡಿ.ಎಸ್. ಪಾಲಯ್ಯ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಯು. ಸುನೀಲ್‌ನಾಯ್ಕ್, ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಎಸ್. ಶ್ರೀರಾಮನಾಯಕ, ದೈಹಿಕ ಶಿಕ್ಷಕರಾದ ಪಾಲಯ್ಯ, ಓಬಣ್ಣ, ಉಮೇಶ್, ಪಾಪಣ್ಣ, ತಿಪ್ಪೇಸ್ವಾಮಿ, ವಿ. ಈಶ್ವರಪ್ಪ, ಶ್ಯಾಮಸುಂದರ್, ತಿಪ್ಪೇರುದ್ರನಾಯಕ, ಬಸವರಾಜು, ರೂಪವತಿ, ಮಂಗಳ, ಪ್ರೇಮಲತಾ ಮುಂತಾದವರು ಉಪಸ್ಥಿತರಿದ್ದರು.