ಉನ್ನತ ವ್ಯಾಸಂಗದಿಂದ ಹೆಚ್ಚಿನ ಉದ್ಯೋಗವಕಾಶ; ಮನೋಜ್ ಗ್ರೋವರ್

| Published : Sep 21 2025, 02:00 AM IST

ಸಾರಾಂಶ

ವಿಜ್ಞಾನ ಪದವಿ ಪಡೆದವರಿಗೆ ನಮ್ಮ ಕಂಪನಿಯಲ್ಲಿ ಉದ್ಯೋಗವಕಾಶ ನೀಡಲಾಗುವುದು, ಕೌಶಲ್ಯಕ್ಕೆ ತಕ್ಕಂತಹ ಉದ್ಯೋಗ ದೊರೆಯುತ್ತದೆ, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಪ್ರಬಲ ಪೈಪೋಟಿ ಮೂಲಕ ಶಿಕ್ಷಣ ಸಾಧಿಸಬೇಕು ಎಂದರು.

ಸೂಲಿಬೆಲೆ: ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪದವಿ ಪಡೆದ ವಿದ್ಯಾರ್ಥಿಗಳಿಗೆ ಹೆಚ್ಚಿನ ಉದ್ಯೋಗವಕಾಶಗಳು ಸಿಗಲಿವೆ ಎಂದು ತೋರಿಷಿಮಾ ಪಂಪ್ಸ್ ಇಂಡಿಯಾ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮನೋಜ್ ಗ್ರೋವರ್ ಹೇಳಿದರು.

ಸೂಲಿಬೆಲೆ ಸರ್ಕಾರಿ ಸ್ವತಂತ್ರ ಪದವಿಪೂರ್ವ ಕಾಲೇಜಿಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಮಾತನಾಡಿದರು.

ವಿದ್ಯಾರ್ಥಿ ದಿಸೆಯಲ್ಲಿ ಕೇವಲ ಓದಿಗೆ ಹೆಚ್ಚು ಒತ್ತು ನೀಡಬೇಕು, ಪದವಿ ಮತ್ತು ಉನ್ನತ ವ್ಯಾಸಂಗ ಪಡೆದು ಭವಿಷ್ಯವನ್ನು ತಾವೇ ರೂಪಿಸಿಕೊಳ್ಳಲು ಅನೇಕ ಕಂಪನಿಗಳಲ್ಲಿ ಅವಕಾಶಗಳಿವೆ ಎಂದರು.

ವಿಜ್ಞಾನ ಪದವಿ ಪಡೆದವರಿಗೆ ನಮ್ಮ ಕಂಪನಿಯಲ್ಲಿ ಉದ್ಯೋಗವಕಾಶ ನೀಡಲಾಗುವುದು, ಕೌಶಲ್ಯಕ್ಕೆ ತಕ್ಕಂತಹ ಉದ್ಯೋಗ ದೊರೆಯುತ್ತದೆ, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಪ್ರಬಲ ಪೈಪೋಟಿ ಮೂಲಕ ಶಿಕ್ಷಣ ಸಾಧಿಸಬೇಕು ಎಂದರು.

ಕಾಲೇಜು ಪ್ರಾಚಾರ್ಯ ಮಂಜುನಾಥ್ ಹಾಗೂ ಜೇನುಗೂಡು ರೂರಲ್ ಡೆವಲ್ಪಮೆಂಟ್ ಆ್ಯಂಡ್ ಕಲ್ಚರಲ್ ಟ್ರಸ್ಟಿನ ಉಪಾಧ್ಯಕ್ಷ ಕೆ.ಎಂ.ಚೌಡೇಗೌಡ ಮಾತನಾಡಿ, ಕಂಪನಿಯು ಸರ್ಕಾರಿ ಶಾಲೆಗಳಿಗೆ ಹೆಚ್ಚಿನ ಆದ್ಯತೆ ನೀಡಿ ಸಾಮಾಜಿಕ ಹೊಣೆಗಾರಿಕೆ ಅನುದಾನವನ್ನು ಸೇವೆಯಂತೆ ಸದುಪಯೋಗ ಮಾಡುತ್ತದೆ ಎಂದರು.

ಸಹಾಯಕ ವ್ಯವಸ್ಥಾಪಕ ನಿರ್ದೇಶಕಿ ರೀಟಾ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಎಂ.ಪ್ರಶಾಂತ್, ಬೆಟ್ಟಹಳ್ಳಿ ಗೋಪಿನಾಥ್, ಉಪನ್ಯಾಸಕರಾದ ಕುಮಾರ್, ವಿಜಯ ಗಂಗಾಧರ್, ಶ್ರೀಕೃಪಾ ಇತರರು ಇದ್ದರು.