ಕಾಂಗ್ರೆಸ್‌ನಲ್ಲಿ ಮಾತ್ರ ಸಾಮಾನ್ಯ ವ್ಯಕ್ತಿಗೆ ಉನ್ನತ ಹುದ್ದೆ: ಕಾಂಗ್ರೆಸ್‌ನ ಮಂಜಾನಾಯ್ಕ

| Published : Feb 18 2025, 12:32 AM IST

ಕಾಂಗ್ರೆಸ್‌ನಲ್ಲಿ ಮಾತ್ರ ಸಾಮಾನ್ಯ ವ್ಯಕ್ತಿಗೆ ಉನ್ನತ ಹುದ್ದೆ: ಕಾಂಗ್ರೆಸ್‌ನ ಮಂಜಾನಾಯ್ಕ
Share this Article
  • FB
  • TW
  • Linkdin
  • Email

ಸಾರಾಂಶ

ದೇಶದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ ಆಂತರಿಕ ಪ್ರಜಾಪ್ರಭುತ್ವ ಅತ್ಯಂತ ಕಟ್ಟುನಿಟ್ಟಾಗಿ ಜಾರಿಯಲ್ಲಿದ್ದು ಈ ದಿಸೆಯಲ್ಲಿ ಸಾಮಾನ್ಯ ವ್ಯಕ್ತಿ ಸಹ ಉನ್ನತ ಹುದ್ದೆಯನ್ನು ಅಂಲಕರಿಸಲು ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ ಸಾದ್ಯ ಎಂದು ತಾಲೂಕಿನ ತರಲಘಟ್ಟ ಗ್ರಾಪಂ ಸದಸ್ಯ ಹಾಗೂ ತಾ.ಯುವ ಕಾಂಗ್ರೆಸ್ ನೂತನ ಅಧ್ಯಕ್ಷ ಮಂಜಾನಾಯ್ಕ ತಿಳಿಸಿದರು.

ಮಾಧ್ಯಮಗೋಷ್ಠಿ । ಕೈ ಪಕ್ಷದಲ್ಲಿ ಮಾತ್ರ ಆಂತರಿಕ ಪ್ರಜಾಪ್ರಭುತ್ವ ಜಾರಿ । ಇಲ್ಲಿ ಸಾಮಾನ್ಯ ಕಾರ್ಯಕರ್ತರಿಗೆ ಮಹತ್ವ

ಕನ್ನಡಪ್ರಭ ವಾರ್ತೆ ಶಿಕಾರಿಪುರ

ದೇಶದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ ಆಂತರಿಕ ಪ್ರಜಾಪ್ರಭುತ್ವ ಅತ್ಯಂತ ಕಟ್ಟುನಿಟ್ಟಾಗಿ ಜಾರಿಯಲ್ಲಿದ್ದು ಈ ದಿಸೆಯಲ್ಲಿ ಸಾಮಾನ್ಯ ವ್ಯಕ್ತಿ ಸಹ ಉನ್ನತ ಹುದ್ದೆಯನ್ನು ಅಂಲಕರಿಸಲು ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ ಸಾದ್ಯ ಎಂದು ತಾಲೂಕಿನ ತರಲಘಟ್ಟ ಗ್ರಾಪಂ ಸದಸ್ಯ ಹಾಗೂ ತಾ.ಯುವ ಕಾಂಗ್ರೆಸ್ ನೂತನ ಅಧ್ಯಕ್ಷ ಮಂಜಾನಾಯ್ಕ ತಿಳಿಸಿದರು.

ನಗರದಲ್ಲಿ ಸೋಮವಾರ ಪಟ್ಟಣದ ಸುದ್ದಿಮನೆಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಕಳೆದ ಆ.20 ರಿಂದ ಸೆ.22 ರವರೆಗೆ ನಡೆದ ಸುದೀರ್ಘ ಆಯ್ಕೆ ಪ್ರಕ್ರಿಯೆಯಲ್ಲಿ ತಾಲೂಕಿನಾದ್ಯಂತ ಕಾಂಗ್ರೆಸ್ ಪಕ್ಷದ ಜತೆಗೆ ಇತರೆ ಪಕ್ಷದ ಯುವ ಮತದಾರರನ್ನು ಭೇಟಿಯಾಗಿ ದೇಶಕ್ಕಾಗಿ ಕಾಂಗ್ರೆಸ್ ಪಕ್ಷ ನೀಡಿದ ಕೊಡುಗೆ ಜತೆಗೆ ರಾಜ್ಯ ಸರ್ಕಾರ ಜಾರಿಗೊಳಿಸಿದ ಗ್ಯಾರಂಟಿ ಯೋಜನೆಗಳ ಬಗ್ಗೆ ತಿಳಿಸಿ ಮನವೊಲಿಸಿ ನಡೆಸಿದ ಪ್ರಯತ್ನದ ಫಲವಾಗಿ 6800 ಅಧಿಕ ಮತಗಳ ಅಂತರದಿಂದ ಅರ್ಹ ಗೆಲವು ಸಾಧಿಸಿದ್ದಾಗಿ ತಿಳಿಸಿದ ಅವರು ,ತಾಲೂಕಿನಾದ್ಯಂತ ಮತದಾರರನ್ನು ಭೇಟಿಯಾದ ಸಂದರ್ಭದಲ್ಲಿ ಹೊಸ ಅನುಭವ ಪಡೆದುಕೊಂಡಿದ್ದು ವಿರೋಧಿಗಳು ಕಾಂಗ್ರೆಸ್ ಪಕ್ಷ ಬುಡ ಸಹಿತ ಕಿತ್ತೊಗೆಯುವುದಾಗಿ ನೀಡುವ ಹೇಳಿಕೆಯಲ್ಲಿ ಸತ್ಯಾಂಶವಿಲ್ಲ ಎಂಬುದನ್ನು ಅರಿತುಕೊಂಡಿರುವುದಾಗಿ ತಿಳಿಸಿದರು.

ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ ಆಂತರಿಕ ಪ್ರಜಾಪ್ರಭುತ್ವ ಅತ್ಯಂತ ಕಟ್ಟುನಿಟ್ಟಾಗಿ ಜಾರಿಯಲ್ಲಿದ್ದು ಸಾಮಾನ್ಯ ವ್ಯಕ್ತಿ ಸಹ ಉನ್ನತ ಹುದ್ದೆಯನ್ನು ಅಲಂಕರಿಸಲು ಕಾಂಗ್ರೆಸ್ ಪಕ್ಷದ ಮೂಲಕ ಮಾತ್ರ ಸಾಧ್ಯ. ಸಾಮಾನ್ಯ ಕಾರ್ಯಕರ್ತರಿಗೆ ಹೆಚ್ಚಿನ ಮಹತ್ವ ನೀಡುವ ಏಕೈಕ ಪಕ್ಷ ಕಾಂಗ್ರೆಸ್ ಎಂಬುದು ಇದೀಗ ಪುನಃ ಸಾಬೀತಾಗಿದೆ. ಸಾಮಾನ್ಯ ರೈತನ ಮಗನಾಗಿ ಯುವ ಘಟಕದ ತಾಲೂಕು ಅಧ್ಯಕ್ಷನಾಗಿ ಆಯ್ಕೆಯಾಗಲು ಸಹಕರಿಸಿದ ಎಲ್ಲ ಮತದಾರರು ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ಧನ್ಯವಾದ ಸಲ್ಲಿಸುವುದಾಗಿ ತಿಳಿಸಿದರು.

ತಾ.ಯುವ ಕಾಂಗ್ರೆಸ್ ನೂತನ ಉಪಾಧ್ಯಕ್ಷ ಚರಣ್ ರಾಜ್ ಬನ್ನೂರು ಮಾತನಾಡಿ, ದೇಶದಲ್ಲಿ ಕಳೆದ 70 ವರ್ಷಗಳಿಂದ ಕಾಂಗ್ರೆಸ್ ಪಕ್ಷವನ್ನು ಸದೃಡವಾಗಿಸಲು ಹಲವರು ಪ್ರಾಣ ತ್ಯಾಗ ಮಾಡಿದ್ದಾರೆ. ಕಾಂಗ್ರೆಸ್‌ನಲ್ಲಿ ಮಾತ್ರ ಹಿಂದುಳಿದ ದಲಿತ ಅಲ್ಪಸಂಖ್ಯಾತರ ಸಹಿತ ಪ್ರತಿಯೊಬ್ಬರ ಬಗ್ಗೆ ವಿಶೇಷ ಗೌರವವಿದ್ದು ಎಲ್ಲರಿಗೂ ಸ್ಥಾನಮಾನ ದೊರೆಯಲಿದೆ ಎಂದರು.

ಜಿಲ್ಲಾ ಯುವ ಕಾಂಗ್ರೆಸ್ ನೂತನ ಪ್ರ.ಕಾ ಶಿವಶಂಕರ್ ಸಂದಿಮನೆ,ತಾ.ನೂತನ ಪ್ರ.ಕಾ ಆದರ್ಶ ಸಾಲೂರು,ಸಹ ಕಾರ್ಯದರ್ಶಿ ಸಂಪತ್ ಸಾಲೂರು ಇದ್ದರು.