ಸಾರಾಂಶ
ಮಹಾಲಿಂಗಪುರದ ಚಿಮ್ಮಡ ಗ್ರಾಮದಲ್ಲಿ ನಡೆದ ಅಲ್ಲಮಪ್ರಭು ಪರಮಜ್ಯೋತಿ ಪಾದಯಾತ್ರೆಯ ಪೂರ್ವಬಾವಿ ಸಭೆಯಲ್ಲಿ ಚಿಮ್ಮಡ ವಿರಕ್ತಮಠದ ಶ್ರೀ ಪ್ರಭು ಮಹಾಸ್ವಾಮೀಜಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ತೇರದಾಳ ಪಟ್ಟಣದಲ್ಲಿ ನಿರ್ಮಿಸಲಾಗಿರುವ ನೂತನ ಅಲ್ಲಮ ಪ್ರಭುದೇವರ ದೇವಸ್ಥಾನದ ಉದ್ಘಾಟನೆ ನಿಮಿತ್ತ ನಡೆಯಲಿರುವ ಬಸವಪುರಾಣ ಪ್ರವಚನ ಕಾರ್ಯಕ್ರಮಕ್ಕೆ ಚಿಮ್ಮಡದಿಂದ ಅಲ್ಲಮಪ್ರಭು ಪರಮ ಜ್ಯೋತಿಯನ್ನು ಶ್ರೀಗಳೊಂದಿಗೆ ಸಾವಿರಾರು ಜನ ಭಕ್ತರು ಸೇರಿ ಪಾದಯಾತ್ರೆ ಮೂಲಕ ಅಲ್ಲಿಗೆ ತಲುಪಿಸಲು ನಿರ್ಧರಿಸಲಾಯಿತು.ಚಿಮ್ಮಡ ವಿರಕ್ತಮಠದ ಚನ್ನಬಸವ ಸಭಾ ಮಂಟಪದಲ್ಲಿ ಶ್ರೀ ಪ್ರಭು ಮಹಾಸ್ವಾಮೀಜಿ ಅಧ್ಯಕ್ಷತೆಯಲ್ಲಿ ನಡೆದ ಎರಡನೇ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಶ್ರೀಗಳು, ಈ ಪಾದಯಾತ್ರೆಯಲ್ಲಿ ಅಲ್ಲಮ ಪ್ರಭುವಿನ ಜನ್ಮಸ್ಥಳವಾದ ಶಿವಮೊಗ್ಗ ಜಿಲ್ಲೆಯ ಬೆಳ್ಳಿಗಾವಿಯಿಂದ ಪ್ರಭು ಪರಮಜ್ಯೋತಿಯು ಭಾನುವಾರ ಆಗಮಿಸಲಿದ್ದು, ಸೋಮವಾರ ಪ್ರಾರಂಭಗೊಳ್ಳಲಿರುವ ಪಾದಯಾತ್ರೆಯು ಬೆಳಗ್ಗೆ 8ಕ್ಕೆ ಚಿಮ್ಮಡದಿಂದ ಹೊರಟು ಹೊಸೂರ, ಸಾಲಿಮನಿ, ರಬಕವಿ, ಹಣಗಂಡಿ ಮೂಲಕ ತೇರದಾಳಕ್ಕೆ ಹೋಗಲಿದೆ. ಈ ವೇಳೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪ್ರಭುವಿನ ಕೃಪೆಗೆ ಪಾತ್ರರಾಗಬೇಕು ಎಂದು ಶ್ರೀಗಳು ಕೋರಿದರು.
ಗ್ರಾಪಂ ಪರಪ್ಪಾ ಪಾಲಭಾವಿ ಮಾತನಾಡಿದರು. ಗ್ರಾಮದ ಪ್ರಮುಖರಾದ ರಾಮಣ್ಣ ಮುಗಳಖೋಡ, ಪುಂಡಲಿಕಪ್ಪಾ ಪೂಜಾರಿ, ಬಾಳಪ್ಪಾ ಹಳಿಂಗಳಿ, ಅಣ್ಣಪ್ಪಗೌಡ ಪಾಟೀಲ, ರಾಚಯ್ಯ ಮಠಪತಿ, ಗ್ರಾಪಂ ಮಾಜಿ ಅಧ್ಯಕ್ಷ ಗುರಲಿಂಗಪ್ಪಾ ಪೂಜಾರಿ, ಬಿ.ಎಸ್. ಪಾಟೀಲ, ಈಶ್ವರ ಬಡಿಗೇರ, ಗುರಪ್ಪಾ ಬಳಗಾರ, ಗ್ರಾಪಂ ಮಾಜಿ ಅಧ್ಯಕ್ಷ ಶಂಕರ ಬಟಕುರ್ಕಿ, ಅಶೋಕ ಧಡೂತಿ, ಪ್ರಕಾಶ ಪಾಟೀಲ, ಬಸವರಾಜ ಕುಂಚನೂರ, ಸೇರಿದಂತೆ ಹೊಸೂರ ಸಾಲಿಮನಿ ಪ್ರಮುಖರು ಪಾಲ್ಗೊಂಡಿದ್ದರು. ಶಿಕ್ಷಕ ಪ್ರಕಾಶ ಪೂಜಾರಿ ನಿರ್ವಹಿಸಿದರು.