ದೊಡ್ಡಣಗುಡ್ಡೆ ಕ್ಷೇತ್ರದಲ್ಲಿ ತ್ರಿಲೋಕೇಶ್ವರಿ ಯಾಗ ಸಂಪನ್ನ

| Published : Oct 13 2024, 01:01 AM IST

ದೊಡ್ಡಣಗುಡ್ಡೆ ಕ್ಷೇತ್ರದಲ್ಲಿ ತ್ರಿಲೋಕೇಶ್ವರಿ ಯಾಗ ಸಂಪನ್ನ
Share this Article
  • FB
  • TW
  • Linkdin
  • Email

ಸಾರಾಂಶ

ದೊಡ್ಡಣ್ಣಗುಡ್ಡೆಯ ಶ್ರೀಚಕ್ರ ಪೀಠ ಸುರಪೋಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ಶನಿವಾರ ಲೋಕೇಶ್ವರಿ ಮಹಾಯಾಗವು ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ಸಾಂಗವಾಗಿ ನೆರವೇರಿತು.

ಕನ್ನಡಪ್ರಭ ವಾರ್ತೆ ಉಡುಪಿ

ದೊಡ್ಡಣ್ಣಗುಡ್ಡೆಯ ಶ್ರೀಚಕ್ರ ಪೀಠ ಸುರಪೋಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ಶನಿವಾರ ಲೋಕೇಶ್ವರಿ ಮಹಾಯುಗವು ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ಸಾಂಗವಾಗಿ ನೆರವೇರಿತು.ಪ್ರಾತಃಕಾಲ ಕ್ಷೇತ್ರ ಉಸ್ತುವಾರಿ ಕುಸುಮ ನಾಗರಾಜ್ ಅವರು ದೀಪ ಪ್ರಜ್ವಲಿಸಿ, ಸಾಮೂಹಿಕ ಪ್ರಾರ್ಥನೆಯೊಂದಿಗೆ ಯಾಗಕ್ಕೆ ಚಾಲನೆ ನೀಡಿದರು. ಗರ್ಭಗೃಹದಿಂದ ದೇವಿಯ ಉತ್ಸವ ಬಿಂಬವನ್ನು ಕೊಂಬು ಕಹಳೆ ಚಂಡೆ ವಾದ್ಯನಾದದೊಂದಿಗೆ ಋತ್ವಿಜರ ವೇದಘೋಷದೊಂದಿಗೆ ಯಾಗ ಮಂಟಪಕ್ಕೆ ಬರಮಾಡಿಕೊಳ್ಳಲಾಯಿತು.ಕ್ಷೇತ್ರದ ಯಾಗ ಮಂಟಪದಲ್ಲಿ ಏಕಕಾಲದಲ್ಲಿ ಮುಂಬೈಯ ವಿನೋದ್ ಚೆನ್ನ ಮತ್ತು ವಿಜಯ ಶೆಟ್ಟಿ ಮತ್ತು ಮನೆಯವರ ಮೂಲಕ ಯಾಗಗಳು ನಡೆದು, ಏಕಕಾಲದಲ್ಲಿ ಯಾಗ ಪೂರ್ಣಾಹುತಿಗೊಂಡಿತು.ಭಕ್ತರ ಹರಕೆಯ ರೂಪದಲ್ಲಿ ಸಾಮೂಹಿಕವಾಗಿ ಚಂಡಿಕಾಯಾಗದ ಸೇವೆ ನಡೆಸಲಾಯಿತು. ಭಕ್ತರು ಯಥೇಚ್ಛವಾಗಿ ತೊಂದಪ್ಪಿಸಿದ್ದ ಎಳ್ಳು, ಗುಗ್ಗಳ ಆಗರು, ಹಾಲು, ಮೊಸರು, ಕಲ್ಲುಸಕ್ಕರೆ, ಪಚ್ಚೆಕರ್ಪೂರ, ಕಬ್ಬು, ಬಾಳೆಹಣ್ಣು, ತೆಂಗಿನಕಾಯಿ, ಬಿಲ್ವಪತ್ರೆ, ಹಿಂಗಾರ, ಕೇಪಳದ ಹೂವು, ಸೀರೆ ರವಕೆಕಣ, ಗಾಜಿನ ಬಳೆಗಳು, ಗಂಧಅರಶಿನ ಕುಂಕುಮ ಇತ್ಯಾದಿ ದೃವ್ಯ ಗಳನ್ನು ಯಾಗದ ಪೂರ್ಣಾಹುತಿಯಲ್ಲಿ ಸಮರ್ಪಿಸಲಾಯಿತು.ಮಧ್ಯಾಹ್ನ ತ್ರಿವಿಧ ಪಾಯಸದ ಜೊತೆಗೆ ಪಂಚಭಕ್ಷ ಸಹಿತವಾಗಿ ಅನ್ನಪ್ರಸಾದ 5 ಸಹಸ್ರಕ್ಕೂ ಮಿಕ್ಕಿದ ಭಕ್ತರಿಗೆ ಬಡಿಸಲಾಯಿತು.ಬಾಕ್ಸ್

ಶ್ರೀ ಕ್ಷೇತ್ರಕ್ಕೆ ಶ್ರೀ ಕೃಷ್ಣಾಪುರ ಶ್ರೀಗಳ ಭೇಟಿ

ಶ್ರೀ ಕ್ಷೇತ್ರದಲ್ಲಿ ಸಂಪನ್ನಗೊಳ್ಳುತ್ತಿರುವ ನವರಾತ್ರಿ ಮಹೋತ್ಸವದ ನವಮಿಯಂದು ಉಡುಪಿಯ ಶ್ರೀ ಕೃಷ್ಣಾಪುರ ಮಠಾಧೀಶರು ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿದರು. ಸ್ವಾಮೀಜಿಯವರನ್ನು ಗೌರವ ಪೂರ್ವಕವಾಗಿ ಕ್ಷೇತ್ರದ ಧರ್ಮದ ಶ್ರೀ ರಮಾನಂದ ಗುರೂಜಿ ಸ್ವಾಗತಿಸಿದರು.

ಕ್ಷೇತ್ರದ ಎಲ್ಲ ದೇವರ ದರ್ಶನವನ್ನು ಮಾಡಿದ ಸ್ವಾಮೀಜಿ, ದೇವರಿಗೆ ಮಂಗಳಾರತಿ ಬೆಳಗಿದರು. ಕ್ಷೇತ್ರ ಸಾಧನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಶ್ರೀ ಗುರೂಜಿ ದಂಪತಿಗೆ ಫಲ ಮಂತ್ರಾಕ್ಷತೆ ಇತ್ತು ಆಶೀರ್ವದಿಸಿದರು.

ಕ್ಷೇತ್ರಕ್ಕೆ ಆಗಮಿಸಿದ್ದ ಎಲ್ಲ ಭಕ್ತರಿಗೂ ಫಲಮಂತ್ರಾಕ್ಷತೆ ನೀಡಿ, ಯಾಗ ಮಂಟಪದಲ್ಲಿ ನೆರವೇರಿದ ಜೋಡಿ ಚಂಡಿಕಾಯಾಗವನ್ನು ವೀಕ್ಷಿಸಿ ಬಳಿಕ ಶ್ರೀಗಳು ತೆರಳಿದರು.