ಸಾರಾಂಶ
ಬಂದಾರು -ಕುಂಟಾಲಪಲ್ಕೆ- ಪೆರ್ಲ ಬೈಪಾಡಿ ಸಂಚರಿಸುವ ಪ್ರತಿಯೊಂದು ವಾಹನಗಳು ಪರ್ಯಾಯ ಮಾರ್ಗವಾಗಿ ಮೈರೋಳ್ತಡ್ಕ -ಶಿವನಗರ - ಪೆರ್ಲಬೈಪಾಡಿ ಮಾರ್ಗವಾಗಿ ಸಂಚರಿಸಲು ತಿಳಿಸಲಾಗಿದೆ.
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಗುರುವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಬಂದಾರು ಗ್ರಾಮದ ಕುಂಟಾಲಪಲ್ಕೆ ಸೇತುವೆ ಬಳಿ ಕಲ್ಲರ್ಬಿ ಎಂಬಲ್ಲಿ ಭಾರಿ ಗಾತ್ರದ ಗುಡ್ಡ ಕುಸಿದು ವಾಹನ ಸಂಚಾರ ಸoಪೂರ್ಣ ಬಂದ್ ಆಗಿದೆ.ಸ್ಥಳಕ್ಕೆ ಬಂದಾರು ಗ್ರಾಪಂ ಅಧ್ಯಕ್ಷ ದಿನೇಶ್ ಗೌಡ, ಸದಸ್ಯ ಚೇತನ್ ಭೇಟಿ ನೀಡಿದರು. ಲೋಕೋಪಯೋಗಿ ಇಲಾಖೆ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಮಣ್ಣು ತೆರವು ಮಾಡಿದ್ದಾರೆ.
ಬಂದಾರು -ಕುಂಟಾಲಪಲ್ಕೆ- ಪೆರ್ಲ ಬೈಪಾಡಿ ಸಂಚರಿಸುವ ಪ್ರತಿಯೊಂದು ವಾಹನಗಳು ಪರ್ಯಾಯ ಮಾರ್ಗವಾಗಿ ಮೈರೋಳ್ತಡ್ಕ -ಶಿವನಗರ - ಪೆರ್ಲಬೈಪಾಡಿ ಮಾರ್ಗವಾಗಿ ಸಂಚರಿಸಲು ತಿಳಿಸಲಾಗಿದೆ. ಈ ರಸ್ತೆ ಸಂಪೂರ್ಣ ಬಂದ್ ಮಾಡಿ ಬ್ಯಾನರ್ ಅಳವಡಿಸಲಾಗಿದೆ. ಚಾರ್ಮಾಡಿ ಎಂಬಲ್ಲಿ ಎ.ಬಿ ಫಾರೂಕ್ ಎಂಬವರ ಮನೆಯ ಗೋಡೆ ಕುಸಿದಿದೆ. ಬೆಳ್ತಂಗಡಿ ಬಿಷಪ್ ಹೌಸ್ ಸಮೀಪ ತೋಟಕ್ಕೆ ನದಿ ನೀರು ನುಗ್ಗಿದೆ. ಶಿರ್ಲಾಲ್ ಆಂತ್ರಂಗೆ ಪಾಲನೆ ಎಂಬಲ್ಲಿನ ಭಾಸ್ಕರ್ ಸಾಲಿಯಾನ್ ಎಂಬವರ ಮನೆ ಹಿಂಬದಿ ಗುಡ್ಡ ಕುಸಿದಿದೆ. ಕೊಲ್ಪೆದಬೈಲು ಎಂಬಲ್ಲಿನ ದಿನೇಶ್ ಎಂಬವರ ತೋಟಕ್ಕೆ ನೀರು ತುಂಬಿ ನಷ್ಟ ಸಂಭವಿಸಿದೆ.