ಸಾರಾಂಶ
ಇನ್ನಷ್ಟು ಗುಡ್ಡ ಕುಸಿತದ ಭೀತಿ ಉಂಟಾಗಿದೆ. ಹೆಚ್ಚಿನ ವಾಹನಗಳು ಈ ರಸ್ತೆ ಮೂಲಕ ಸಂಚರಿಸುವುದರಿಂದ ಅಪಾಯಕಾರಿಯಾಗಿ ಪರಿಣಮಿಸಿದೆ.
ಮೂಲ್ಕಿ: ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಗೆ ಕಟೀಲು ಸಮೀಪದ ಎಕ್ಕಾರು ಚೆನ್ನಯ್ಯ ಪೂಜಾರಿ ರಸ್ತೆಯ ಮೊಯಿಲಿ ಬೆನ್ನಿ ಎಂಬಲ್ಲಿ ಗುಡ್ಡ ಕುಸಿತವಾಗಿದ್ದು, ಗುಡ್ಡದ ಮಣ್ಣು ರಸ್ತೆಗೆ ಬಿದ್ದಿದೆ.
ಇನ್ನಷ್ಟು ಗುಡ್ಡ ಕುಸಿತದ ಭೀತಿ ಉಂಟಾಗಿದೆ. ಹೆಚ್ಚಿನ ವಾಹನಗಳು ಈ ರಸ್ತೆ ಮೂಲಕ ಸಂಚರಿಸುವುದರಿಂದ ಅಪಾಯಕಾರಿಯಾಗಿ ಪರಿಣಮಿಸಿದೆ.ಪಡುಪಣಂಬೂರು ಗ್ರಾಪಂ ವ್ಯಾಪ್ತಿಯ ತೋಕೂರು ಎರಡನೇ ವಾರ್ಡ್ ಜಂತ್ರಿ ಎಂಬಲ್ಲಿ ಮಳೆ ನೀರು ಹರಿಯುವ ತೋಡಿನ ನೀರು ಗದ್ದೆಗೆ ನುಗ್ಗಿ ಕೃಷಿಗೆ ಹಾನಿ ಸಂಭವಿಸಿದೆ. ತೋಡಿಗೆ ತಡೆಗೋಡೆ ಇಲ್ಲದ ಕಾರಣ ಮಳೆ ನೀರು ಗದ್ದೆಗೆ ನುಗ್ಗುತ್ತಿದೆ.
ಸ್ಥಳೀಯ ಕೃಷಿಕರಾದ ಹಿಮಕರ ಕೋಟ್ಯಾನ್ ಅವರು ಮರಳುಚೀಲಗಳನ್ನು ಇರಿಸುತ್ತಿದ್ದರೂ ಭಾರೀ ಮಳೆಗೆ ನೀರು ಗದ್ದೆಗೆ ನುಗ್ಗಿ ಬೆಳೆ ಹಾನಿ ಸಂಭವಿಸಿದೆ. ಈ ಪರಿಸರದಲ್ಲಿ ಎಕರೆಗಟ್ಟಲೆ ಕೃಷಿ ಕಾರ್ಯ ನಡೆಯುತ್ತಿದ್ದು ಮಳೆ ನೀರು ತೋಡಿನಿಂದ ಹರಿದು ಕೃತಕ ನೆರೆ ಉಂಟಾಗಿ ಬೆಳೆ ನಷ್ಟವಾಗುತ್ತಿದೆ.ಬಿರುಸಿನ ಮಳೆಗೆ ಕಟೀಲು ಸಮೀಪದ ಅಜಾರು ಎಂಬಲ್ಲಿ ಕೃತಕ ನೆರೆ ಸಂಭವಿಸಿ ಅಣೆಕಟ್ಟು ನೀರಿನಲ್ಲಿ ಮುಳುಗಿದೆ.