ಸಾಮಾಜಿಕ ಸೇವೆ, ಸಹಕಾರ, ಸ್ವಾವಲಂಬನೆ ವೃದ್ಧಿಸುವ ಸಲುವಾಗಿ ಹಿಂದೂ ಸಮಾಜದ ಸ್ವಯಂ ಸೇವಾ ಸಂಸ್ಥೆಗಳು ಮತ್ತು ಸಂಘಟನೆಗಳ ಸಹಾಯದೊಂದಿಗೆ ಹಿಂದೂ ಸಂಗಮ ಆಯೋಜನ ಸಮಿತಿ ಆಶ್ರಯದಲ್ಲಿ ತಾಲೂಕಿನ ವಿವಿಧ ಕಡೆಗಳಲ್ಲಿ ಜ. 18 ರಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಕುಶಾಲನಗರ ನಗರ ಸಂಯೋಜಕರಾದ ಜಿ ಎಲ್ ನಾಗರಾಜ್ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಕುಶಾಲನಗರ ಸಾಮಾಜಿಕ ಸೇವೆ, ಸಹಕಾರ, ಸ್ವಾವಲಂಬನೆ ವೃದ್ಧಿಸುವ ಸಲುವಾಗಿ ಹಿಂದೂ ಸಮಾಜದ ಸ್ವಯಂ ಸೇವಾ ಸಂಸ್ಥೆಗಳು ಮತ್ತು ಸಂಘಟನೆಗಳ ಸಹಾಯದೊಂದಿಗೆ ಹಿಂದೂ ಸಂಗಮ ಆಯೋಜನ ಸಮಿತಿ ಆಶ್ರಯದಲ್ಲಿ ತಾಲೂಕಿನ ವಿವಿಧ ಕಡೆಗಳಲ್ಲಿ ಜ. 18 ರಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಕುಶಾಲನಗರ ನಗರ ಸಂಯೋಜಕರಾದ ಜಿ ಎಲ್ ನಾಗರಾಜ್ ತಿಳಿಸಿದ್ದಾರೆ.ಕುಶಾಲನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು ಕೌಟುಂಬಿಕ ಮೌಲ್ಯಗಳ ಪುನರುತ್ಥಾನ, ಸಾಮಾಜಿಕ ಸಾಮರ್ಥ್ಯದ ಜಾಗರಣ ಪರಿಸರ ಸಂರಕ್ಷಣೆಯ ಸಂಕಲ್ಪ ಸ್ವಾವಲಂಬಿ ಮತ್ತು ಸ್ವಾಭಿಮಾನಿ ಜೀವನ ಪದ್ಧತಿ ಹಾಗೂ ನಾಗರಿಕ ಕರ್ತವ್ಯಗಳ ಪಾಲನೆಯ ಅನುಷ್ಠಾನದಂತಹ ಆದರ್ಶಗಳ ಅಡಿಯಲ್ಲಿ ಸಮಾಜಕ್ಕಾಗಿ ಸಂಘಟಿತವಾಗಿ ಸ್ಥಳೀಯ ಸಮಾಜವೇ ನಡೆಸುವ ಕಾರ್ಯಕ್ರಮ ಇದಾಗಿದೆ ಎಂದು ಹೇಳಿದರು. ಸಮಾಜದಲ್ಲಿ ಜಾತೀಯತೆಯ ನ್ಯೂನತೆ ಕಡಿಮೆಯಾಗಬೇಕು ನಾಗರಿಕರಲ್ಲಿ ಕರ್ತವ್ಯ ಪ್ರಜ್ಞೆ ಮೂಡಬೇಕಾಗಿದೆ ಎಂದ ಅವರು ಪ್ರತಿಯೊಬ್ಬರಲ್ಲೂ ಪಂಚ ಪರಿವರ್ತನೆ ಬಗ್ಗೆ ಅರಿವು ಜಾಗೃತಿ ಮೂಡಿಸುವ ಕೆಲಸ ನಡೆಯಲಿದೆ ಎಂದರು. ಹಿಂದೂ ಸಂಗಮ ಕುಶಾಲನಗರ ತಾಲೂಕು ಸಂಯೋಜಕರಾದ ಚಂದ್ರಶೇಖರ್ ಹೇರೂರು ಮಾತನಾಡಿ, ತಾಲೂಕಿನ 18 ಕಡೆ ಈ ಕಾರ್ಯಕ್ರಮಗಳು ನಡೆಯಲಿದ್ದು, ಈ ತಿಂಗಳ 24ರಂದು ಶಿರಂಗಾಲ ಗ್ರಾಮದಲ್ಲಿ 25ರಂದು ಕುಶಾಲನಗರ ಖಾಸಗಿ ಬಸ್ ನಿಲ್ದಾಣ ಆವರಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮ ವ್ಯಾಪ್ತಿಯಲ್ಲಿ ಕಾರ್ಯಕ್ರಮಗಳು ನಡೆಯಲಿವೆ. ಶೋಭಾ ಯಾತ್ರೆ ಮೆರವಣಿಗೆ ಮತ್ತು ಸಭಾ ಕಾರ್ಯಕ್ರಮಗಳು ನಡೆಯಲಿದ್ದು ಪ್ರತಿಯೊಬ್ಬರು ಕಾರ್ಯಕ್ರಮದ ಯಶಸ್ವಿಗೆ ಕೈಜೋಡಿಸಬೇಕೆಂದು ಕೋರಿದರು. ಲೆಕ್ಕಪರಿಶೋಧಕರಾದ ದೇವಿ ಪ್ರಸಾದ್ ಅವರ ನೇತೃತ್ವದಲ್ಲಿ ತಾಲೂಕು ಸಮಿತಿ ರಚನೆಯಾಗಿದೆ ಎಂದು ತಿಳಿಸಿದರು. ಗೋಷ್ಠಿಯಲ್ಲಿ ತಾಲೂಕು ಸಮಿತಿ ಪ್ರಮುಖರಾದ ಕೆ ಜಿ ಶಿವನ್, ಮಂಜುನಾಥ್, ದೀಪ ಸುರೇಂದ್ರ, ಎಂ ಡಿ ರಂಗಸ್ವಾಮಿ ಇದ್ದರು.