ಆಳ್ವಾಸ್ ಕಾಲೇಜಿನಲ್ಲಿ ಹಿಂದಿ ದಿನಾಚರಣೆ

| Published : Sep 23 2025, 01:05 AM IST

ಸಾರಾಂಶ

ಆಳ್ವಾಸ್ ಕಾಲೇಜಿನ ಹಿಂದಿ ವಿಭಾಗದ ವತಿಯಿಂದ ಹಿಂದಿ ದಿನಾಚರಣೆ ನಡೆಯಿತು. ಉಜಿರೆಯ ಎಸ್‌ಡಿಎಂ ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥ ಡಾ. ಮಲ್ಲಿಕಾರ್ಜುನ ಎನ್. ಉಪನ್ಯಾಸ ನೀಡಿದರು.

ಕನ್ನಡಪ್ರಭ ವಾರ್ತೆ ಮೂಡುಬಿದಿರೆಭಾಷೆಗಳ ನಡುವಿನ ಸಮನ್ವಯವು ರಾಷ್ಟ್ರದ ಏಕತೆ, ಭದ್ರತೆ ಮತ್ತು ಸಾಂಸ್ಕೃತಿಕ ಬೆಳವಣಿಗೆಗೆ ಸಹಕಾರಿ ಎಂದು ಉಜಿರೆಯ ಎಸ್‌ಡಿಎಂ ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥ ಡಾ. ಮಲ್ಲಿಕಾರ್ಜುನ ಎನ್. ಹೇಳಿದರು.ಅವರು ಆಳ್ವಾಸ್ ಕಾಲೇಜಿನ ಹಿಂದಿ ವಿಭಾಗದ ವತಿಯಿಂದ ನಡೆದ ಹಿಂದಿ ದಿನಾಚರಣೆಯ ಕಾರ‍್ಯಕ್ರಮದಲ್ಲಿ ಮಾತನಾಡಿದರು.ಭಾಷಾ ಸಾಮರಸ್ಯವು ದೇಶದ ಸಮಗ್ರ ಅಭಿವೃದ್ಧಿಗೆ ಕೊಡುಗೆ ನೀಡಬಲ್ಲದು. ಭಾರತೀಯ ಸಂವಿಧಾನದ ಅನುಸಾರ ೨೨ ಭಾಷೆಗಳು ಅಧಿಕೃತ ಮಾನ್ಯತೆಯನ್ನು ಪಡೆದಿವೆ. ಅವುಗಳೆಲ್ಲವು ನಮ್ಮ ಸಂಸ್ಕೃತಿ, ಆಚಾರ, ಸಂಪ್ರದಾಯಗಳನ್ನು ಪ್ರತಿನಿಧಿಸುವ ಜೊತೆಗೆ ಭಾರತದ ಸಾಂಸ್ಕೃತಿಕ ವೈವಿಧ್ಯತೆಯನ್ನು ಜಗತ್ತಿಗೆ ಸಾರಿ ಹೇಳುತ್ತಿವೆ. ಪ್ರಾಥಮಿಕ ಹಂತದಲ್ಲಿ ಮಕ್ಕಳಿಗೆ ತಮ್ಮ ಮಾತೃ ಭಾಷೆಯಲ್ಲಿ ಕಲಿಯಲು ಅವಕಾಶ ನೀಡಬೇಕು. ಮಾತೃ ಭಾಷೆಯ ಶಿಕ್ಷಣ ಮಕ್ಕಳ ಸೃಜನಶೀಲತೆ, ಚಿಂತನಾ ಶಕ್ತಿ ಮತ್ತು ಭಾವನಾತ್ಮಕ ಬೆಳವಣಿಗೆಗೆ ಸಹಕಾರಿ ಎಂದರು.ಕಾರ‍್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ಭಾರತದ ಜನಸಂಖ್ಯೆಯ ಸುಮಾರು ೪೬ ಪ್ರತಿಶತ ಜನರು ಹಿಂದಿ ಮಾತನಾಡುತ್ತಿರುವುದು ದೇಶದ ಏಕತೆಗೆ ದೊಡ್ಡ ಬಲವಾಗಿದೆ ಎಂದರು.ವಿದ್ಯಾರ್ಥಿಗಳು ಹಿಂದಿ ಭಾಷೆಯ ಮಹತ್ವ ಕುರಿತಾಗಿ ಪ್ರಬಂಧ, ಕವನ ವಾಚನ ಮತ್ತು ಹಿಂದಿ ಗೀತೆಗಳ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ವಿಭಾಗದ ಮುಖ್ಯಸ್ಥ ಡಾ.ದತ್ತಾತ್ರೇಯ ಹೆಗಡೆ ಇದ್ದರು.ವಿದ್ಯಾರ್ಥಿನಿ ಮೆಹರ್ ನಿರೂಪಿಸಿದರು. ಪೂರ್ವಿ ರೈ ಅತಿಥಿಗಳನ್ನು ಪರಿಚಯಿಸಿದರು. ರಕ್ಷಿತಾ ಪೂಜಾರಿ ಸ್ವಾಗತಿಸಿದರು. ಜುಹಾ ವಂದಿಸಿದರು.