ಕಸಾಯಿ ಖಾನೆಗೆ ಸಾಗಿಸುತ್ತಿದ್ದ 5 ಜಾನುವಾರು ರಕ್ಷಿಸಿದ ಹಿಂದು ಜಾಗರಣಾ ವೇದಿಕೆ ಕಾರ್ಯಕರ್ತರು

| Published : Nov 06 2025, 01:45 AM IST

ಕಸಾಯಿ ಖಾನೆಗೆ ಸಾಗಿಸುತ್ತಿದ್ದ 5 ಜಾನುವಾರು ರಕ್ಷಿಸಿದ ಹಿಂದು ಜಾಗರಣಾ ವೇದಿಕೆ ಕಾರ್ಯಕರ್ತರು
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀನಿವಾಸ ಅಗ್ರಹಾರ ಗ್ರಾಮದ ಬಳಿ ಹೈವೇ ರಸ್ತೆಯಲ್ಲಿ ವಾಹನ ತಡೆದ ಕಾರ್ಯಕರ್ತರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ.

ಶ್ರೀರಂಗಪಟ್ಟಣ: ಹಿಂದು ಜಾಗರಣಾ ವೇದಿಕೆ ಕಾರ್ಯಕರ್ತರ ಕಾರ್ಯಾಚರಣೆಯಿಂದ ಮೈಸೂರಿನ ಕಸಾಯಿ ಖಾನೆಗೆ ಸಾಗಿಸುತ್ತಿದ್ದ 5 ಜಾನುವಾರುಗಳನ್ನು ಹಿಡಿದು ಪೊಲೀಸರ ವಶಕ್ಕೆ ನೀಡಿದ್ದಾರೆ. ಚನ್ನರಾಯಪಟ್ಟಣದಿಂದ ಬನ್ನೂರು ಮಾರ್ಗವಾಗಿ 5 ಜಾನುವಾರುಗಳ ತುಂಬಿ ವಾಹನದಲ್ಲಿ ಸಾಗಿಸುವ ಮಾಹಿತಿ ಮೇರೆಗೆ ಶ್ರೀನಿವಾಸ ಅಗ್ರಹಾರ ಗ್ರಾಮದ ಬಳಿ ಹೈವೇ ರಸ್ತೆಯಲ್ಲಿ ವಾಹನ ತಡೆದ ಕಾರ್ಯಕರ್ತರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಸ್ಥಳೀಯ ಪಟ್ಟಣ ಪೊಲೀಸ್ ಠಾಣೆ ಪಿಎಸ್‌ಐ ಬಿ.ಜಿ. ಕುಮಾರ್ ಹಾಗೂ ಎಎಸ್‌ಐ ಉದಯಕುಮಾರ್, ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಜಾನುವಾರು ತುಂಬಿದ ವಾಹನ ಸಹಿತ ಚಾಲಕನೊಂದಿಗೆ ಕರೆತಂದು ತನಿಖೆ ನಡೆಸಿ ಕಾರ್ಯಕರ್ತರ ದೂರಿನ ಮೇರೆಗೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ವಾಹನ ಚಾಲಕ ಜಯರಾಮು ಅವರ ಮೇಲೆ ದಾಖಲಿಸಿದ್ದು. ವಶಕ್ಕೆ ಪಡೆದ ಜಾನುವಾರುಗಳನ್ನು ಮೈಸೂರಿನ ಪಿಂಜರಾಪೂಲ್‌ಗೆ ರವಾನಿಸಲಾಗಿದೆ.